ETV Bharat / state

ಬೆಂಗಳೂರಿನಲ್ಲಿ ಬಸ್ ಓಡಿಸೋಕೆ ಬಿಎಂಟಿಸಿ ಸಕಲ ಸಿದ್ಧತೆ: ಡಿಪೋಗಳಲ್ಲಿ ಬಸ್ ಸ್ವಚ್ಛತಾ ಕಾರ್ಯ ಆರಂಭ - ಬೆಂಗಳೂರು ಲೇಟೆಸ್ಟ್ ನ್ಯೂಸ್

ಅನ್​ಲಾಕ್ 2.O ನಲ್ಲಿ ಬಿಎಂಟಿಸಿ ಬಸ್ ಓಡಾಟಕ್ಕೆ ಬಹುತೇಕ ಅವಕಾಶ ಸಿಗುವ ಸಾಧ್ಯತೆ ಇದೆ. ಹಾಗಾಗಿ ನಗರದಲ್ಲಿ ಬಸ್ ಓಡಿಸೋಕೆ ಬಿಎಂಟಿಸಿ ಸಕಲ ಸಿದ್ಧತೆ ನಡೆಸಿದೆ.

BMTC is ready to run a buses in Bangalore
ಬಸ್ ಓಡಿಸೋಕೆ ಬಿಎಂಟಿಸಿ ಸಕಲ ಸಿದ್ಧತೆ
author img

By

Published : Jun 19, 2021, 5:01 PM IST

ಬೆಂಗಳೂರು: ರಾಜ್ಯದಲ್ಲಿ ಕೊರೊನಾ‌ ಪ್ರಕರಣಗಳ ಪ್ರಮಾಣ ಇಳಿಕೆ ಆಗುತ್ತಿದ್ದು, ಸೋಮವಾರ ಲಾಕ್​ಡೌನ್ ಅವಧಿ ಮುಕ್ತಾಯವಾಗಲಿದೆ. ಅನ್​ಲಾಕ್ 2.O ನಲ್ಲಿ ಬಿಎಂಟಿಸಿ ಬಸ್ ಓಡಾಟಕ್ಕೆ ಬಹುತೇಕ ಅವಕಾಶ ಸಿಗುವ ಸಾಧ್ಯತೆ ಇದೆ. ಹಾಗಾಗಿ ನಗರದಲ್ಲಿ ಬಸ್ ಓಡಿಸೋಕೆ ಬಿಎಂಟಿಸಿ ಸಕಲ ಸಿದ್ಧತೆ ನಡೆಸಿದ್ದು, ಡಿಪೋಗಳಲ್ಲಿ ಬಸ್ ಸ್ವಚ್ಛತಾ ಕಾರ್ಯ ಶುರುವಾಗಿದೆ. ಕೊರೊನಾ ಭೀತಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿ ಬಸ್​​ಅನ್ನು ಸ್ಯಾನಿಟೈಸ್​​ ಮಾಡಲಾಗುತ್ತಿದೆ.‌

ಬಸ್ ಓಡಿಸೋಕೆ ಬಿಎಂಟಿಸಿ ಸಕಲ ಸಿದ್ಧತೆ

ಈ ಕುರಿತು ಪ್ರತಿಕ್ರಿಯಿಸಿರುವ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಈಗಾಗಲೇ ಜನ ಬಸ್ ಓಡಿಸುವಂತೆ ಬಹಳ ಡಿಮ್ಯಾಂಡ್ ಇಟ್ಟಿದ್ದಾರೆ. ಸರ್ಕಾರದ ಅಧಿಕೃತ ಘೋಷಣೆಗೆ ನಾವು ಕಾಯುತ್ತಿದ್ದೇವೆ. ಸರ್ಕಾರ ಅನುಮತಿ ಕೊಡುವ ಸಾಧ್ಯತೆ ಇದೆ. ಅನ್​ಲಾಕ್ 2.O ನಲ್ಲಿ ಅನುಮತಿ ಸಿಕ್ಕರೆ ಮೊದಲ ಶಿಫ್ಟ್​​ನಲ್ಲಿ 1,000 ಬಸ್​ಗಳು, ಎರಡನೇ ಪಾಳಿಯಲ್ಲಿ 800 ರಿಂದ 1000 ಬಸ್​ಗಳ ಕಾರ್ಯಾಚರಣೆ ಮಾಡುವುದಾಗಿ ತಿಳಿಸಿದರು.

ಇನ್ನು ಬಸ್​ ಸಂಚಾರಕ್ಕೆ ಅವಕಾಶ ಸಿಕ್ಕರೆ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ಮತ್ತು ಸಾಮಾಜಿಕ ಅಂತರ ಕಾಪಾಡಲು ಶೇ. 50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ.‌ ಗೂಗಲ್ ಪೇ, ಫೋನ್ ಪೇ ಮೂಲಕವೂ ಟಿಕೆಟ್ ವ್ಯವಸ್ಥೆ ಇದೆ. ಆರಂಭದಲ್ಲಿ 1,800 ರಿಂದ 2000 ಬಸ್​​ಗಳು ಆಪರೇಟ್ ಆಗಲಿದ್ದು, ಬಳಿಕ ಜನರ ದಟ್ಟಣೆ ನೋಡಿಕೊಂಡು ಬಸ್ ಓಡಿಸುತ್ತೇವೆ ಅಂದರು.‌ ಇನ್ನು ನಿತ್ಯ 5 ಕೋಟಿ ರೂ. ಆದಾಯ ಇದ್ದು, ಲಾಕ್​ಡೌನ್​ನಿಂದಾಗಿ ಬಿಎಂಟಿಸಿಗೆ 150 ಕೋಟಿ ರೂ. ಲಾಸ್ ಆಗಿದೆ ಎಂದರು.‌

ಇದನ್ನೂ ಓದಿ: ಬಸ್ ಸಂಚಾರಕ್ಕೆ ಸಾರಿಗೆ ಸಂಸ್ಥೆ ಸಜ್ಜು : ಲಸಿಕೆ ಪಡೆದ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗಲು ಅವಕಾಶ

ಇನ್ನು ಬಿಎಂಟಿಸಿ ಸಿಬ್ಬಂದಿ ಕೆಲಸಕ್ಕೆ ಹಾಜರಾಗಲು ಕೋವಿಡ್ ಲಸಿಕೆ ಕಡ್ಡಾಯವಾಗಿದ್ದು, ಎಲ್ಲರಿಗೂ ಲಸಿಕೆ ನೀಡಲಾಗುತ್ತಿದೆ. ಬಸ್​​ ಕಾರ್ಯಾಚರಣೆ ವೇಳೆಗೆ ಪ್ರತಿಯೊಬ್ಬರಿಗೂ ಲಸಿಕಾಭಿಯಾನ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.