ಬೆಂಗಳೂರು: ಲಾಕ್ಡೌನ್ ನಡುವೆ ಅಗತ್ಯ ಸೇವಾ ಕ್ಷೇತ್ರದ ಸಿಬ್ಬಂದಿಗೆ ಓಡಾಡಲು ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ಮೆಜೆಸ್ಟಿಕ್ನಿಂದ 37 ಬಸ್ಗಳು ಹೊರಡಲು ಸಜ್ಜಾಗಿವೆ.
ವಿಕ್ಟೋರಿಯಾ, ಕಿಮ್ಸ್, ಜಯದೇವ, ನಿಮ್ಹಾನ್ಸ್, ಕಿದ್ವಾಯಿ, ಫೋರ್ಟಿಸ್, ಅಪೊಲೊ, ಸಾಗರ್ ಹೀಗೆ ನಗರದ ನಾನಾ ಆಸ್ಪತ್ರೆಗಳಿಗೆ ತೆರಳಲು ಬಸ್ ಸೇವೆ ಆರಂಭಿಸಲಾಗಿದ್ದು, ತುರ್ತು ಸೇವೆಗಾಗಿ ಬಿಎಂಟಿಸಿ ಬಸ್ ಕಾರ್ಯನಿರ್ವಹಿಸಲಿದೆ. ಮೆಜೆಸ್ಟಿಕ್ನಿಂದ ಇಂದು 180 ಬಸ್ಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ವೈದ್ಯರು, ಆರೋಗ್ಯ ಇಲಾಖಾ ಸಿಬ್ಬಂದಿ, ಬೆಸ್ಕಾಂ , ಪತ್ರಕರ್ತರು,ಬಿಡಬ್ಲ್ಯೂಎಸ್ ಎಸ್ ಬಿ ,ಬಿಬಿಎಂಪಿ ಸಿಬ್ಬಂದಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇನ್ನು ಅಗತ್ಯ ಸೇವೆಯ ಸಿಬ್ಬಂದಿಗೆ ಸರ್ಕಾರ ಪಾಸ್ ವ್ಯವಸ್ಥೆ ಮಾಡಿದ್ದು, ಪಾಸ್ ತೋರಿಸಿ ಬಿಎಂಟಿಸಿ ಬಸ್ ವ್ಯವಸ್ಥೆ ಬಳಸಿಕೊಳ್ಳಬಹುದಾಗಿದೆ. ಇಂದಿನಿಂದ ಬಿಎಂಟಿಸಿ ಹೆಚ್ಚುವರಿ 180 ಬಸ್ಗಳ ಸಂಚಾರಕ್ಕೆ ತೀರ್ಮಾನ ಮಾಡಲಾಗಿದೆ. ಬೆಂಗಳೂರು ಸಿಟಿ ಪೊಲೀಸ್ ನೀಡಿದ ಪಾಸ್ ಇದ್ದರಷ್ಟೇ ಓಡಾಡೋಕೆ ಅನುಮತಿ ನೀಡಲಾಗಿದೆ.
ಬಿಎಂಟಿಸಿ ಬಸ್ಸಿನಲ್ಲೂ ಸಾಮಾಜಿಕ ಅಂತರ ಕಾಯ್ದು ಕೊಳ್ಳವಂತೆ ನಿಗಮ ಮನವಿ ಮಾಡಿದ್ದು, ಒಂದು ಬಸ್ಗೆ ಕೇವಲ 20 ಪ್ರಯಾಣಿಕರನ್ನ ಮಾತ್ರ ಹತ್ತಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸಲು ಈ ಕೆಳಗಿನವರಿಗೆ ಅವಕಾಶವಿದೆ.ಬೆಸ್ಕಾಂ ಸಿಬ್ಬಂದಿ,ಒಳಚರಂಡಿ ಮಂಡಳಿ,ಬಿಬಿಎಂಪಿ ಸಿಬ್ಬಂದಿ,ಪೊಲೀಸ್ ಇಲಾಖೆ ಸಿಬ್ಬಂದಿ,ವೈದ್ಯರು( ಖಾಸಗಿ, ಸರ್ಕಾರಿ),ಔಷಧಾಲಯದ ಸಿಬ್ಬಂದಿ,ಭದ್ರತಾ ಸಿಬ್ಬಂದಿ,ರಕ್ತದಾನಿಗಳು,ಬ್ಯಾಂಕ್ ಸಿಬ್ಬಂದಿ,ಪತ್ರಕರ್ತರು,ಬಿಎಂಟಿಸಿ ಸಿಬ್ಬಂದಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.