ETV Bharat / state

ಲಾಕ್​ಡೌನ್​ ಇದ್ರೂ ಕೆಲಸ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳು.. ಇದು ಬಿಎಂಎಸ್ ಸಂಸ್ಥೆ ಸಾಧನೆ!!

ಪ್ಲೇಸ್ಮೆಂಟ್ ಸೆಲ್ ಕ್ಯಾಂಪಸ್ ಆಯ್ಕೆ ಆರಂಭವಾಗುವ ಮೊದಲು ಪೂರ್ವ ಪ್ಲೇಸ್ಮೆಂಟ್ ತರಬೇತಿ ಕಾರ್ಯಕ್ರಮ ಕೈಗೊಂಡು ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಲ್ಲಿ ಸರಾಗವಾಗಿ ತೇರ್ಗಡೆಯಾಗುವಂತೆ ಕಾಲೇಜು ವತಿಯಿಂದ ಸಜ್ಜುಗೊಳಿಸಲಾಗಿತ್ತು. ಈ ನಡುವೆ ಕ್ಯಾಂಪಸ್ ಆಯ್ಕೆ ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ಲಾಕ್​ಡೌನ್ ಘೋಷಣೆಯಾಗಿತ್ತು.

sddd
ಲಾಕ್​ಡೌನ್​ ಇದ್ರೂ ಕೆಲಸ ಗಟ್ಟಿಸಿಕೊಂಡ ವಿದ್ಯಾರ್ಥಿಗಳು
author img

By

Published : May 31, 2020, 3:40 PM IST

ಬೆಂಗಳೂರು : ವಿಶ್ವವ್ಯಾಪಿ ಆರ್ಭಟಿಸುತ್ತಿರುವ ಕೋವಿಡ್​-19 ಹಲವಾರು ಕ್ಷೇತ್ರಗಳಿಗೆ ದೊಡ್ಡ ಹೊಡೆತ ಕೊಟ್ಟಿದೆ. ಆದರೆ, ಕೊರೊನಾ ನಡುವೆಯೂ ಸಹ ನಗರದ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜು ಮಾತ್ರ ಅದಕ್ಕೆ ಅಪವಾದವೆಂಬಂತಹ ಸಾಧನೆ ಮಾಡಿ ತೋರಿಸಿದೆ.

ಬಿಎಂಎಸ್ ಸಂಸ್ಥೆಯು ಲಾಕ್​ಡೌನ್ ಹಿನ್ನೆಲೆ ರಜೆ ಘೋಷಿಸಿದ್ದರೂ ಕ್ಯಾಂಪಸ್ ಆಯ್ಕೆಯಿಂದ ವಿದ್ಯಾರ್ಥಿಗಳು ವಂಚಿತರಾಗದಂತೆ ನೋಡಿಕೊಂಡಿದೆ. 1000 ವಿದ್ಯಾರ್ಥಿಗಳು ವಿವಿಧ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ. ಕೊರೊನಾ ನಡುವೆಯು ಪ್ಲೇಸ್ಮೆಂಟ್ ಸೆಲ್ ಆನ್​ಲೈನ್​ ಕ್ಯಾಂಪಸ್ ಕೈಗೊಳ್ಳುವ ಮೂಲಕ ಅಚ್ಚರಿ ಎನ್ನುವಂತಹ ಸಾಧನೆ ಮಾಡಿದೆ. ಪ್ಲೇಸ್ಮೆಂಟ್ ಸೆಲ್ ಕ್ಯಾಂಪಸ್ ಆಯ್ಕೆ ಆರಂಭವಾಗುವ ಮೊದಲು ಪೂರ್ವ ಪ್ಲೇಸ್ಮೆಂಟ್ ತರಬೇತಿ ಕಾರ್ಯಕ್ರಮ ಕೈಗೊಂಡು ವಿದ್ಯಾರ್ಥಿಗಳು ಕ್ಯಾಂಪಸ್ ಆಯ್ಕೆಯಲ್ಲಿ ಸರಾಗವಾಗಿ ತೇರ್ಗಡೆಯಾಗುವಂತೆ ಕಾಲೇಜು ವತಿಯಿಂದ ಸಜ್ಜುಗೊಳಿಸಲಾಗಿತ್ತು. ಈ ನಡುವೆ ಕ್ಯಾಂಪಸ್ ಆಯ್ಕೆ ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ಲಾಕ್​ಡೌನ್ ಘೋಷಣೆಯಾಗಿತ್ತು.

ಆದರೆ, ಬಿಎಂಎಸ್ ಕಾಲೇಜಿನ ಪ್ಲೇಸ್ಮೆಂಟ್ ಸೆಲ್ ಈ ಸಮಯದಲ್ಲಿ ಈ ಮೊದಲೇ ನೊಂದಾಯಿಸಿದ್ದ ಕಂಪನಿಗಳನ್ನು ಸಂಪರ್ಕಿಸಿ ಆನ್​ಲೈನ್​ ಆಯ್ಕೆ ನಡೆಸುವಂತೆ ಒಪ್ಪಿಸಿತು. ಇದರಂತೆ ಕಂಪನಿಗಳು ವಿದ್ಯಾರ್ಥಿಗಳಿಗೆ ಆನ್​ಲೈನ್​ ಪರೀಕ್ಷೆ ಮತ್ತು ಸಂದರ್ಶನ ನಡೆಸುವ ಮೂಲಕ ಆಯ್ಕೆ ಮಾಡಿಕೊಂಡಿವೆ. ಹಾಗೆಯೇ ಈ ಸಮಯದಲ್ಲಿ ಉದ್ಯೋಗದಾತ ಕಂಪನಿಗಳಿಂದ ಆಯ್ಕೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಕೆಲಸ ನೀಡುವುದಕ್ಕೆ ಬದ್ಧತೆ ಪ್ರದರ್ಶಿಸುವಂತೆ ಬಿಎಂಎಸ್ ಖಾತರಿ ಪಡಿಸಿಕೊಂಡಿದೆ.

ಬಿಎಂಎಸ್ ಇಂಜಿನಿರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಬಿ ವಿ ರವಿಶಂಕರ್ ಹೇಳುವ ಪ್ರಕಾರ, "ಲಾಕ್​ಡೌನ್ ವೇಳೆಯು ಸಂಸ್ಥೆಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹತ್ತು ಹಲವು ಕಾರ್ಯಕ್ರಮಗಳನ್ನ ರೂಪಿದ್ದೆವು. ಅದರಲ್ಲೂ ಆನ್​ಲೈನ್ ವ್ಯವಸ್ಥೆಯನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.