ETV Bharat / state

ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ ; ವಿಚಾರಣೆಗೆ ಹಾಜರಾದ ಬಿಎಂಆರ್​ಸಿಎಲ್​ ಎಂಡಿ ಅಂಜುಂ ಪರ್ವೇಜ್

author img

By

Published : Jan 21, 2023, 5:31 PM IST

Updated : Jan 21, 2023, 6:17 PM IST

ಮೆಟ್ರೋ ಪಿಲ್ಲರ್ ಕುಸಿತ ಪ್ರಕರಣ - ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ವಿಚಾರಣೆಗೆ ಹಾಜರು - ವಿಚಾರಣೆ ಬಗ್ಗೆ ಪರ್ವೇಜ್​ ಪ್ರತಿಕ್ರಿಯೆ.

bmrcl-md-attended-the-inquiry
ಬಿಎಂಆರ್​ಸಿಎಲ್​ ಎಂಡಿ ಅಂಜುಂ ಪರ್ವೇಜ್
ಬಿಎಂಆರ್​ಸಿಎಲ್​ ಎಂಡಿ ಅಂಜುಂ ಪರ್ವೇಜ್ ಪ್ರತಿಕ್ರಿಯೆ

ಬೆಂಗಳೂರು: ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಆರ್​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಇಂದು ವಿಚಾರಣೆಗೆ ಹಾಜರಾಗಿದ್ದಾರೆ‌. ಪ್ರಕರಣದ ತನಿಖೆ ಚುರುಕುಗೊಳಿಸಿದ್ದ ಗೋವಿಂದಪುರ ಠಾಣಾ ಪೊಲೀಸರ ನೋಟಿಸಿಗೆ ಪ್ರತಿಯಾಗಿ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಮುಂದೆ ಹಾಜರಾದ ಅಂಜುಂ ಪರ್ವೇಜ್ ವಿಚಾರಣೆ ಎದುರಿಸಿದ್ದಾರೆ.

ವಿಚಾರಣೆ ಮುಗಿಸಿ ವಾಪಾಸಾಗುವಾಗ ಪ್ರತಿಕ್ರಿಯಿಸಿದ ಅಂಜುಂ ಪರ್ವೇಜ್, 'ಇಂದು‌ ವಿಚಾರಣೆಗೆ ಬರಲು ಹೇಳಿದ್ದರಿಂದ ಹಾಜರಾಗಿದ್ದೇನೆ. ಘಟನೆಯ ಕುರಿತಂತೆ ಮತ್ತು ಭವಿಷ್ಯದಲ್ಲಿ ಇಂಥಹ ಘಟನೆಗಳನ್ನ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ವರದಿ ಕೇಳಿದ್ದೇವೆ. ವರದಿಗಳು ಬರಬೇಕಿದೆ. ನಮ್ಮಲ್ಲಿನ ಇಂಜಿನಿಯರ್​ಗಳಿಗೆ ಸಹ ಸುರಕ್ಷತಾ ಕ್ರಮಗಳ ಬಗ್ಗೆ ತರಬೇತಿ ನೀಡುತ್ತಿದ್ದೇವೆ. ಕಾಂಟ್ರಾಕ್ಟ್ ಅಗ್ರಿಮೆಂಟ್ ನಂತೆ ನಿರ್ಮಾಣ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ. ಮುಂದಿನ ದಿನಗಳಲ್ಲಿ ಈ ರೀತಿಯಾಗಿ ಘಟನೆ ನಡೆಯದಂತೆ ನೋಡಿಕೊಳ್ತೀವಿ' ಎಂದಿದ್ದಾರೆ.

ಪ್ರಕರಣದ ಹಿನ್ನೆಲೆ: ಜನವರಿ 10ರಂದು ಬೆಳಿಗ್ಗೆ ಎಚ್ಆರ್ಬಿಆರ್ ಲೇಔಟಿನ ರಿಂಗ್ ರಸ್ತೆಯಲ್ಲಿ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಕುಸಿದ ಪರಿಣಾಮ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ತೇಜಸ್ವಿನಿ ಹಾಗೂ ಆಕೆಯ ಮೂರು ವರ್ಷದ ಗಂಡು ಮಗು ವಿಹಾನ್ ಸಾವನ್ನಪ್ಪಿದ್ದರು. ಬೈಕಿನಲ್ಲಿದ್ದ ತೇಜಸ್ವಿನಿ ಪತಿ ಲೋಹಿತ್ ಕುಮಾರ್ ಹಾಗೂ ಮತ್ತೊಂದು ಹೆಣ್ಣು ಮಗು ಗಂಭೀರ ಗಾಯಗಳೊಂದಿಗೆ ಪಾರಾಗಿದ್ದರು. ಬಳಿಕ ಲೋಹಿತ್ ನೀಡಿದ ದೂರಿನನ್ವಯ ಬಿಎಂಆರ್​ಸಿಎಲ್​ ಹಾಗೂ ಪಿಲ್ಲರ್ ನಿರ್ಮಾಣದ ಹೊಣೆಗಾರಿಕೆ ಹೊತ್ತಿದ್ದ ನಾಗಾರ್ಜುನ ಕನ್‌ಸ್ಟ್ರಕ್ಷನ್ ಕಂಪನಿಯ ಎಂಟು ಜನ ಅಧಿಕಾರಿಗಳ ವಿರುದ್ಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಬಿಎಂಆರ್​​ಸಿಎಲ್​ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಸೇರಿದಂತೆ ಹದಿನೈದು ಅಧಿಕಾರಿಗಳಿಗೆ ಪೊಲೀಸರು ನೊಟೀಸ್ ನೀಡಿದ್ದರು.

ಘಟನೆಯ ಬಳಿಕ ಆದ ಬೆಳವಣಿಗೆಗಳು

ಐವರು ಅಧಿಕಾರಿಗಳು​ ವಿಚಾರಣೆ: ಇನ್ನು ಜ.12ರಂದು ಘಟನೆಗೆ ಸಂಬಂಧಿಸಿದಂತೆ ಐವರು ಅಧಿಕಾರಿಗಳು​ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್​ ಜಾರಿ ಮಾಡಿದ್ದರು. ಅದರಂತೆ ಐವರು ಅಧಿಕಾರಿಗಳು ಗೋವಿಂದಪುರ, ಬಾಣಸವಾಡಿ, ಕೆಜಿ ಹಳ್ಳಿ ಸೇರಿದಂತೆ‌ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿಚಾರಣೆಗೆ ಹಾಜರಾಗಿದ್ದರು. ನಾಗಾರ್ಜುನಾ ಕನ್​ಸ್ಟ್ರಕ್ಷನ್ ಕಂಪನಿಯ ಪ್ರಭಾಕರ್, ವಿಕಾಸ್ ಸಿಂಗ್, ಲಕ್ಷ್ಮೀಪತಿ, ಬಿಎಂಆರ್​ಸಿಎಲ್ ಡೆಪ್ಯೂಟಿ ಚೀಫ್ ವೆಂಕಟೇಶ್ ಶೆಟ್ಟಿ, ಎಕ್ಸಿಕ್ಯೂಟಿವ್ ಎಂಜಿನಿಯರ್ ಮಹೇಶ್ ಬೆಂಡೆಕರಿ ಎಂಬುವವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದರು.

ಮೂವರು ಇಂಜಿನಿಯರ್​ಗಳ ಅಮಾನತು: ಮೆಟ್ರೋ ಪಿಲ್ಲರ್ ಕುಸಿದು ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾವಿ ಉಪ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸೈಟ್ ಇಂಜಿನಿಯರ್​ಗಳನ್ನು ಬಿಎಂಆರ್​ಸಿಎಲ್​ ಅಮಾನತು ಮಾಡಿತ್ತು. ಅಲ್ಲದೇ ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಶನ್​ ಲಿಮಿಟೆಡ್​ (BMRCL) ಈ ವಿಷಯವನ್ನು ಸ್ವತಂತ್ರವಾಗಿ ತನಿಖೆ ಮಾಡಲು ಮತ್ತು ವರದಿ ನೀಡಲು ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ಗೆ (IISc) ಗೆ ಮನವಿಯನ್ನು ಮಾಡಿತ್ತು.

ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ : ಘಟನೆ ಬಳಿಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮೆಟ್ರೋದ ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಅಲ್ಲದೇ ಸಭೆಯಲ್ಲಿ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವಂತೆ ಮತ್ತು ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳ ಅಮಾನತುಗೊಳಿಸುವಂತೆ ಮೆಟ್ರೋದ ಆಡಳಿತ ಮಂಡಳಿಯ ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದರು. ಸಿಎಂರ ಆದೇಶದ ಮೇರೆಗೆ ಮೆಟ್ರೋ ನಿಗಮದ ಆಡಳಿತ ಮಂಡಳಿ 3 ಜನ ಇಂಜಿನಿಯರ್​ಗಳನ್ನು ಸೇವೆಯಿಂದ ಅಮಾನತುಗೊಳಿಸಿ ಶಿಸ್ತು ಕ್ರಮ ಜರುಗಿಸಿತ್ತು.

ಇದನ್ನೂ ಓದಿ: ಮೆಟ್ರೋ ಪಿಲ್ಲರ್‌ ದುರಂತ: ಸ್ವಯಂಪ್ರೇರಿತ ಅರ್ಜಿ ದಾಖಲಿಸಿಕೊಂಡ ಹೈಕೋರ್ಟ್

Last Updated : Jan 21, 2023, 6:17 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.