ETV Bharat / state

ಮಹಿಳೆಯ ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲಾಕ್​ಮೇಲ್​: ಆರೋಪಿ ವಿರುದ್ಧ ದೂರು ದಾಖಲು - ಈಟಿವಿ ಭಾರತ ಕನ್ನಡ

ಮಹಿಳೆಯ ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲಾಕ್​​ಮೇಲ್ ಮಾಡುತ್ತಿದ್ದ ಆರೋಪಿಯ ವಿರುದ್ದ ರಾಮಮೂರ್ತಿನಗರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ.

Etv Bharatblack-mail-of-women-using-private-video-case-filed-against-accused
Etv ಮಹಿಳೆಯ ಖಾಸಗಿ ವಿಡಿಯೋ ಸೆರೆ ಹಿಡಿದು ಬ್ಲಾಕ್​ಮೇಲ್​: ಆರೋಪಿ ವಿರುದ್ಧ ಮಹಿಳೆ ದೂರು
author img

By

Published : Jan 31, 2023, 11:35 AM IST

ಬೆಂಗಳೂರು : ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ನೀಡಿ ಮಹಿಳೆಯ ಖಾಸಗಿ ಅಂಗಾಂಗಗಳ ವಿಡಿಯೋ ಚಿತ್ರೀಕರಿಸಿ ಎರಡು ವರ್ಷಗಳಿಂದ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿಯ ವಿರುದ್ಧ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಡ್ಯದ ಡಿಂಕಾ ಗ್ರಾಮದ ಮಂಜು ಎಂಬಾತನ ವಿರುದ್ಧ ಮಹಿಳೆ ದೂರು ನೀಡಿದ್ದಾರೆ.

ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲಾಕ್‌ಮೇಲ್ ಮಾಡುತ್ತಿದ್ದ ಮಂಜು, ಸಂತ್ರಸ್ತೆಗೆ ತನ್ನೊಂದಿಗೆ ಸ್ಟೈಲ್ ಆಗಿ ಮಾತನಾಡಬೇಕು. ಲುಕ್ ಕೊಟ್ಟು ಪೋಸ್ ಕೊಡಬೇಕು ಎಂದೆಲ್ಲಾ ಹೇಳುತ್ತಿದ್ದನಂತೆ. ಇಲ್ಲದಿದ್ದರೆ ಗಂಡನಿಗೆ ಖಾಸಗಿ ವಿಡಿಯೋ ತೋರಿಸುತ್ತೇನೆ. ಅಷ್ಟೇ ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ವಿಡಿಯೋ ವೈರಲ್ ಮಾಡುವುದಾಗಿಯೂ ಬೆದರಿಕೆ ಹಾಕುತ್ತಿದ್ದ ಎಂದು ದೂರಿದ್ದಾರೆ. ಎರಡು ವರ್ಷಗಳ ಬಳಿಕ ಮಹಿಳೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗೆ ಶೋಧ ನಡೆಸುತ್ತಿದ್ದಾರೆ.

ಆರೋಪಿ ಮಂಜುಗೆ ನಗರದ ಸುಂಕದಕಟ್ಟೆಯಲ್ಲಿ ವಾಸವಾಗಿದ್ದ ಮಹಿಳೆಯೊಬ್ಬರ ಪರಿಚಯವಾಗಿತ್ತು. ಒಂದೇ ಊರಿನವರಾಗಿದ್ದರಿಂದ ಸಂತ್ರಸ್ತೆಯ ಮನೆಯವರೊಂದಿಗೆ ಮಂಜು ಸಲುಗೆ ಬೆಳೆಸಿಕೊಂಡಿದ್ದ. ಜೊತೆಗೆ, ಬೆಂಗಳೂರಿನಲ್ಲಿರುವ ಮಹಿಳೆಯ ವಿಳಾಸವನ್ನು ತಿಳಿದುಕೊಂಡು ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಅಷ್ಟೇ ಅಲ್ಲ, ಮಹಿಳೆ ಕೆಲಸ ಮಾಡುವ ಸ್ಥಳವನ್ನು ಗೊತ್ತುಪಡಿಸಿಕೊಂಡಿದ್ದ ಎಂದು ಹೇಳಲಾಗಿದೆ.

2020ರಲ್ಲಿ ಮಂಜು ಒಬ್ಬಳು ಯುವತಿಯೊಂದಿಗೆ ಸಂತ್ರಸ್ತೆ ಕೆಲಸ ಮಾಡುವ ಸ್ಥಳಕ್ಕೆ ಹೋಗಿದ್ದಾನೆ. ಅಲ್ಲಿ ಈ ಮಹಿಳೆಯಲ್ಲಿ ನನ್ನ ಹುಟ್ಟುಹಬ್ಬವಿದ್ದು ಕೇಕ್ ಕತ್ತರಿಸಲು ಬರುವಂತೆ ಕರೆದಿದ್ದ. ಆರೋಪಿಯೊಂದಿಗೆ ಯುವತಿ ಇದ್ದುದರಿಂದ ಈತನನ್ನು ನಂಬಿ ಸಂತ್ರಸ್ತೆ ಆತನ ಮನೆಗೆ ತೆರಳಿದ್ದಳು. ಈ ವೇಳೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಬೆರೆಸಿ ಮಹಿಳೆಗೆ ನೀಡಿದ್ದಾನೆ. ಇದರಿಂದ ಮಹಿಳೆ ಪ್ರಜ್ಞೆ ಕಳೆದುಕೊಂಡಿದ್ದಳು.

ಈ ಸಂದರ್ಭದಲ್ಲಿ ಆರೋಪಿಯು ತನ್ನ ಮೊಬೈಲ್‌ನಲ್ಲಿ ಆಕೆಯ ಖಾಸಗಿ ಪೋಟೊ ಹಾಗೂ ವಿಡಿಯೋ ಸೆರೆಹಿಡಿದು, ಏನೂ ಗೊತ್ತಿಲ್ಲದಂತೆ ವರ್ತಿಸಿದ್ದ‌. ಮಾರನೇ ದಿನ ಖಾಸಗಿ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್‌ ಮಾಡಿದ್ದ‌. ತನ್ನೊಂದಿಗೆ ಸ್ಟೈಲ್ ಆಗಿ ಮಾತನಾಡಬೇಕು. ಪೋಸ್ ಕೊಡಬೇಕೆಂದು ವಿಚಿತ್ರ ರೀತಿಯಲ್ಲಿ ಬಯಕೆ ವ್ಯಕ್ತಪಡಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ. ರಾಜುವಿನ ಕಿರುಕುಳ ತಾಳಲಾರದೆ ಸುಂಕದಕಟ್ಟೆಯಿಂದ ಕಲ್ಕೆರೆಗೆ ಸಂತ್ರಸ್ತೆ ತನ್ನ ಮನೆಯನ್ನು ಬದಲಾಯಿಸಿದ್ದಳು. ಆರೋಪಿಯು ಈ ಬಗ್ಗೆ ಪೊಲೀಸರಿಗೆ ತಿಳಿಸಿದರೆ ಚಾಕುವಿನಿಂದ ಚುಚ್ಚಿ ಸಾಯಿಸುವುದಾಗಿ ಬೆದರಿಕೆ ಹಾಕಿದ್ದ. ಈ ಮಧ್ಯೆ ಮಹಿಳೆ ತನ್ನ ಗಂಡನಿಗೆ ಕಿರುಕುಳದ ಬಗ್ಗೆ ತಿಳಿಸಿದ್ದು,ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಯುವತಿ ಜೊತೆ ಲಾಡ್ಜ್​ಗೆ ಬಂದಿದ್ದ ಬಿಎಂಟಿಸಿ ಚಾಲಕ ಶವವಾಗಿ ಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.