ಬೆಂಗಳೂರು: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಸದ್ದು ಮಾಡುತ್ತಿದ್ದು, ಹಾಸನ ಮೂಲದ ಏಳು ವರ್ಷದ ಬಾಲಕನಿಗೆ ಕಪ್ಪು ಮಾರಿ ವಕ್ಕರಿಸಿದ್ದರಿಂದ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಹಿಂದೆ ಬಳ್ಳಾರಿಯ 13 ವರ್ಷದ ಬಾಲಕಿಗೆ ಹಾಗೂ ಚಿತ್ರದುರ್ಗದ 11 ವರ್ಷದ ಬಾಲಕನಿಗೆ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿತ್ತು. ಮೊದಲು ಬಾಲಕನ ತಾಯಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಬಳಿಕ ಮಗನಿಗೂ ಹರಡಿದೆ.
ಈ ವೇಳೆ ಬ್ಲ್ಯಾಕ್ ಫಂಗಸ್ ಸಹ ಪತ್ತೆಯಾಗಿದೆ. ಈಗಲೂ ಕೊರೊನಾ ಪಾಸಿಟಿವ್ ಇದ್ದು, ಕೊರೊನಾ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಗುವಿಗೆ ಕಣ್ಣಿನ ಭಾಗಕ್ಕೆ ಕಪ್ಪು ಮಾರಿ ವ್ಯಾಪಿಸಿದೆ ಎಂಬ ಮಾಹಿತಿಯನ್ನು ವೈದ್ಯರು ನೀಡಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರ ಬಡ್ತಿ : ಕೆಎಟಿ ಆದೇಶದ ವಿರುದ್ಧ ಹೈಕೋರ್ಟ್ಗೆ ಮೇಲ್ಮನವಿ