ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವವರಲ್ಲಿ ಪತ್ತೆ ಆಗುತ್ತಿರುವ ಬ್ಲ್ಯಾಕ್ ಫಂಗಸ್ ಎಲ್ಲರಲ್ಲೂ ಆತಂಕ ಹೆಚ್ಚಿಸಿದೆ. ಇದು ಸಾಂಕ್ರಾಮಿಕ ರೋಗವಲ್ಲದೇ ಇದ್ದರೂ ಮಾರಕವಾಗಿದೆ.
ಮಧುಮೇಹ ಇರುವ ಅಥವಾ ಸ್ಟಿರಾಯ್ಡ್ ತೆಗೆದುಕೊಂಡವರಲ್ಲಿ ಶೇ. 90ರಿಂದ ಶೇ. 95ರಷ್ಟು ಬ್ಲ್ಯಾಕ್ ಫಂಗಸ್ ಪತ್ತೆಯಾಗುತ್ತಿದೆ. ರಾಜ್ಯದಲ್ಲಿ ದಿನೇ ದಿನೆ ಕಪ್ಪು ಶಿಲೀಂಧ್ರ ಪ್ರಕರಣ ಹೆಚ್ಚಳವಾಗ್ತಿದ್ದು, ಇದುವರೆಗೂ 446 ಜನರಲ್ಲಿ ಕಾಣಿಸಿಕೊಂಡಿದೆ. ಇದರಲ್ಲಿ 433 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇಲ್ಲಿಯವರೆಗೆ ಒಟ್ಟು 12 ಮಂದಿ ಬಲಿಯಾಗಿದ್ದಾರೆ. ಧಾರವಾಡದಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂದರೆ 99 ಕೇಸ್‌ಗಳು ಕಾಣಿಸಿಕೊಂಡಿವೆ.
ಬೆಂಗಳೂರಿನಲ್ಲಿ 86 ಕೇಸ್‌ಗಳು ಪತ್ತೆಯಾಗಿವೆ. ಬೆಂಗಳೂರು ಗ್ರಾಮಾಂತರ - 4, ಬೆಂಗಳೂರು ನಗರ - 17, ಬೊಮ್ಮನಹಳ್ಳಿ ಝೋನ್ - 28, ಪೂರ್ವ ವಲಯ - 5, ದಕ್ಷಿಣ ವಲಯ - 3, ಪಶ್ಚಿಮ ವಲಯ - 3, ಯಲಹಂಕ ಝೋನ್ - 26 ಜನರಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ವರದಿಯಾಗಿವೆ.
ಮಧುಮೇಹ ರೋಗಿಗಳು ಸೂಕ್ತ ಸ್ವಚ್ಛತೆಯನ್ನು ಕಾಯ್ದುಕೊಳ್ಳುವುದು ಅತ್ಯಂತ ಪ್ರಮುಖವಾದುದು. ಏಕೆಂದರೆ ಅವರಲ್ಲಿ ಸೋಂಕು ತಗುಲುವ ಸಾಧ್ಯತೆಗಳು ಹೆಚ್ಚಿರುತ್ತವೆ. ಆಕ್ಸಿಜನ್ ಸಾಂದ್ರಕಗಳನ್ನು ಬಳಸುವಂತಹವರು ನಿಯಮಿತವಾಗಿ ಹ್ಯುಮಿಡಿ ಫೈಯರ್ಗಳನ್ನು ಆಗಾಗ ಸ್ವಚ್ಛ ಮಾಡುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಅಂತ ವೈದ್ಯರು ಸಲಹೆ ನೀಡುತ್ತಾರೆ.