ETV Bharat / state

'ರಾಮನ ಬಗ್ಗೆ ಭೈರಪ್ಪನವ್ರು ಮಾತನಾಡಿದ್ರೆ ಸುಮ್ಮನಿರ್ತಾರೆ, ಭಗವಾನ್ ಮಾತಾಡಿದ್ರೆ ಮಸಿ ಬಳೀತಾರೆ'

ವಿಶ್ವಮಾನವ ಸಂದೇಶ ಸಾರಿದ ಕುವೆಂಪು ರಚಿತ 'ಮಲೆಗಳಲ್ಲಿ ಮದುಮಗಳು' ನಾಟಕದ ಸಲುವಾಗಿ ಯಾವ ಸರ್ಕಾರವೂ ನೆರವಿಗೆ ಬರಲಿಲ್ಲ. ಈಗ‌ 'ಪರ್ವ'ಕ್ಕೆ ಸಹಕಾರ ಯಾಕೆ? ಎಂದು ವಿಧಾನ ಪರಿಷತ್‌ನಲ್ಲಿ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಪ್ರಶ್ನಿಸಿದರು.

hariprasad-talk-about-parva-novel
ಹರಿಪ್ರಸಾದ್
author img

By

Published : Mar 15, 2021, 4:10 PM IST

ಬೆಂಗಳೂರು: ರಾಮ,ಕೃಷ್ಣರ ಬಗ್ಗೆ ಬೈರಪ್ಪನವರು ಹೇಳಿದರೆ ಸುಮ್ಮನಿರುತ್ತೀರಿ. ಅದೇ ಭಗವಾನ್ ಮಾತನಾಡಿದರೆ ಮಸಿ ಬಳಿಯುತ್ತೀರಿ. ಇಂತಹ ಧೋರಣೆ ಸರಿಯಲ್ಲ ಎಂದು ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಕಿಡಿ ಕಾರಿದ್ದಾರೆ.

ಬಿ .ಕೆ. ಹರಿಪ್ರಸಾದ್​ ಮಾತು

ಸಾಹಿತಿ ಎಸ್.ಎಲ್.ಬೈರಪ್ಪ ಅವರು ರಾಮ ದೇವರಲ್ಲ, ಕೇವಲ ರಾಜ ಎಂದು ಹೇಳಿದ್ದಾರೆ. ರಾಮ,ಕೃಷ್ಣರ ಬಗ್ಗೆ ಮಾತಾಡುತ್ತಾರೆ. ದ್ರೌಪದಿ ಬಗ್ಗೆ ಬರೆಯುತ್ತಾರೆ. ಅವರು ನಿಮ್ಮವರು ಎಂದು ಸುಮ್ಮನಿರುತ್ತಾರೆ. ಅದೇ ಭಗವಾನ್ ಹೇಳಿದರೆ ಮಸಿ ಬಳಿಯುತ್ತಾರೆ. ಇಂತಹ ದ್ವಂದ್ವ ನೀತಿ ಯಾಕೆ?, ಸಂಘ ಪರಿವಾರದವರು ಮಾತನಾಡಿದರೆ ಸುಮ್ಮನಿದ್ದು, ಬೇರೆಯವರು ಮಾತನಾಡಿದರೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.

ಬೈರಪ್ಪ ಅವರ ಪರ್ವ ಕಾದಂಬರಿಯನ್ನು ನಾಟಕ ಮಾಡಲು 1 ಕೋಟಿ ರೂ ಕೊಡಲಾಗುತ್ತಿದೆ. ನಿಮ್ಮ ಸಾಹಿತಿಗೆ ನೀವೇ ಪ್ರಶಸ್ತಿ ಕೊಡಿಸಿ ನಾಟಕಕ್ಕೂ ಹಣ ಕೊಟ್ಟಿದ್ದೀರಿ ಎಂದು ಬೈರಪ್ಪ ಅವರ ನಾಟಕವನ್ನು ಪ್ರಶ್ನಿಸುವ ಅರ್ಥದಲ್ಲಿ ಪ್ರಸ್ತಾಪ ಮಾಡಿದರು. ಇದಕ್ಕೆ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿದರು. ಅವರ ನಾಟಕ‌ ಸರಿಯಿಲ್ಲ‌ ಎನ್ನುವ ಹಕ್ಕು ನಿಮಗಿಲ್ಲ, ಜನಮಾನ್ಯರ ಬಗ್ಗೆ ಬರೆದಿದ್ದಾರೆ, ಅವರ ಕಾದಂಬರಿ, ಬರಹಕ್ಕೆ ಪ್ರಶಸ್ತಿ ಸಿಕ್ಕಿದೆ. ಅವರ ಒಂದು ಶಬ್ದ ಹಿಡಿದು ಈ ರೀತಿ ಹೇಳಿದರೆ ಸರಿಯಲ್ಲ ಎಂದರು.

ಈ ವೇಳೆ ಜೆಡಿಎಸ್ ಸದಸ್ಯ ಶ್ರೀಕಂಠೇಗೌಡ ಮಾತನಾಡಿ, ವಿಶ್ವಮಾನವ ಸಂದೇಶ ಸಾರಿದ ಕುವೆಂಪು ರಚಿತ ಮಲೆಗಳಲ್ಲಿ ಮದುಮಗಳು ನಾಟಕಕ್ಕೆ ಯಾವ ಸರ್ಕಾರವೂ ನೆರವಿಗೆ ಬರಲಿಲ್ಲ. ಈಗ‌ ಪರ್ವಕ್ಕೆ ಸಹಕಾರ ಯಾಕೆ? ಈ ತಾರತಮ್ಯ ಸರಿಯಲ್ಲ. ಎಷ್ಟೆಲ್ಲಾ ಬರಹಗಾರರು, ಕಾದಂಬರಿಕಾರರಿದ್ದಾರೆ. ಆದರೆ, ಅದೆಲ್ಲಾ ಬಿಟ್ಟು ಬೈರಪ್ಪ ಅವರ ನಾಟಕಕ್ಕೆ ಮಾತ್ರ ಅನುದಾನ ಕೊಟ್ಟಿರುವುದು, ನಾಗರಿಕ‌ ಸರ್ಕಾರಕ್ಕೆ ಶೋಭೆ ತರಲ್ಲ. ಸಾಹಿತಿಗಳಲ್ಲೇ ಏಕೆ ತಾರತಮ್ಯ ಮಾಡುತ್ತೀರಿ?ಇಂತಹ ತಾರತಮ್ಯ ಮೊದಲು ನಿಲ್ಲಬೇಕು ಎಂದರು.

ಇದನ್ನೂ ಓದಿ: ಹೆದ್ದಾರಿಗಳಲ್ಲಿ ಅವೈಜ್ಞಾನಿಕವಾಗಿ ಟೋಲ್ ಪ್ಲಾಜಾ ನಿರ್ಮಾಣ, ತೆರಿಗೆ ವಸೂಲಿ: ಸದನದಲ್ಲಿ ಚರ್ಚೆ

ವಿತ್ತೀಯ ಕೊರತೆ: 58,321 ಕೋಟಿ ರೂ ವಿತ್ತೀಯ ಕೊರತೆಯ ಬಜೆಟ್ ಮಂಡಿಸಲಾಗಿದೆ. ಬಡವರ,ರೈತರ,ಮಹಿಳೆಯರ,ವಿದ್ಯಾರ್ಥಿಗಳ, ವಿರೋಧಿ ಬಜೆಟ್ ಇದು. ಸಫಾರಿ ಸೂಟಿನ ಸರ್ಕಾರದ ಬಜೆಟ್​ನಿಂದ ಬಡ, ಮಧ್ಯಮ ವರ್ಗದವರಿಗೆ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ, ಈ ಬಜೆಟ್ ಅನ್ನು ಖಂಡಿಸಿದ್ದೇವೆ ಎಂದು ಬಜೆಟ್ ಮೇಲಿನ ಭಾಷಣ ಮುಗಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.