ETV Bharat / state

ಲೋಕಸಮರ ಸಿದ್ದತೆ ಕುರಿತು ಬಿಜೆಪಿ ಮೊದಲ ದಿನದ ಸಭೆ ಮುಕ್ತಾಯ: ಕೆಲವರಿಗೆ ಟಿಕೆಟ್ ನೀಡಲು ವಿರೋಧ

ಲೋಕಸಭೆಯ ಚುನಾವಣಾ ತಾಲೀಮು ಆರಂಭಿಸಿರುವ ಬಿಜೆಪಿ, ಕ್ಷೇತ್ರವಾರು ಸಭೆಯ ಮೊದಲ ದಿನದ ಸಭೆಯನ್ನು ರಮಾಡ ರೆಸಾರ್ಟ್​ನಲ್ಲಿ ನಡೆಸಿತು. ಸಭೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲುವ ಬಗ್ಗೆ ತೀರ್ಮಾನಿಸಲಾಯಿತು.

ಬಿಜೆಪಿ ಮೊದಲ ದಿನದ ಸಭೆ
ಬಿಜೆಪಿ ಮೊದಲ ದಿನದ ಸಭೆ
author img

By ETV Bharat Karnataka Team

Published : Jan 10, 2024, 8:46 PM IST

ಬೆಂಗಳೂರು: ಲೋಕಸಭಾ ಚುನಾವಣಾ ತಾಲೀಮು ಆರಂಭಿಸಿರುವ ಬಿಜೆಪಿ, ಎರಡು ದಿನಗಳ ಕ್ಷೇತ್ರವಾರು ಸಭೆಯ ಮೊದಲ ದಿನದ ಸಭೆಯನ್ನು ಮುಕ್ತಾಯಗೊಳಿಸಿದೆ. ಸಭೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ, ಸಂಗಣ್ಣ ಕರಡಿ ಕುಟುಂಬ ಸೇರಿ ಕೆಲವರಿಗೆ ಟಿಕೆಟ್ ನೀಡದಂತೆ ಆಗ್ರಹ ಕೇಳಿಬಂದಿದೆ. ಸೋಮಣ್ಣ ವಿಚಾರವೂ ಚರ್ಚೆಗೆ ಬಂದಿದ್ದು, ಅಭ್ಯರ್ಥಿಗಳ ಹೆಸರಿನ ಪರ ವಿರೋಧದ ನಡುವೆ 13 ಕ್ಷೇತ್ರಗಳ ಸಭೆ ನಡೆಯಿತು. ನಾಳೆಯೂ ಸಭೆ ಮುಂದುವರೆಯಲಿದ್ದು, 15 ಕ್ಷೇತ್ರಗಳ ಕ್ಷೇತ್ರವಾರು ಸಭೆ ನಡೆಯಲಿದೆ.

ಬಿಜೆಪಿ ಮೊದಲ ದಿನದ ಸಭೆ
ಬಿಜೆಪಿ ಮೊದಲ ದಿನದ ಸಭೆ

ನಗರದ ಹೊರವಲಯದ ರಮಾಡ ರೆಸಾರ್ಟ್​ನಲ್ಲಿ ನಡೆದ ಬಿಜೆಪಿ ಲೋಕಸಭಾ ಕ್ಷೇತ್ರವಾರು ಸಭೆಗೆ ಆಗಮಿಸಿದ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಪಕ್ಷದ ಪ್ರಮುಖರನ್ನು ಕೇಸರಿ ತಿಲಕ ಇಟ್ಟು, ಪಕ್ಷದ ಶಾಲು ಹೊದಿಸಿ ಸ್ವಾಗತ ಮಾಡಲಾಯಿತು. ಮೊದಲ ದಿನದ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್ ಅಶೋಕ್, ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಸದಾನಂದಗೌಡ, ಮಾಜಿ ಸಚಿವ ಸಿಟಿ ರವಿ, ಪ್ರಧಾನ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್, ಕುಡಚಿ ರಾಜೀವ್, ಪ್ರೀತಮ್ ಗೌಡ ಸೇರಿದಂತೆ ಪಕ್ಷದ ಪ್ರಮುಖ ನಾಯಕರು ಉಪಸ್ಥಿತರಿದ್ದರು.

ಕಲ್ಯಾಣ ಕರ್ನಾಟಕ ಕ್ಲಸ್ಟರ್, ಮೈಸೂರು ಕ್ಲಸ್ಟರ್ ಹಾಗೂ ತುಮಕೂರು ಕ್ಲಸ್ಟರ್​ನಡಿ ಬರಲಿರುವ 13 ಲೋಕಸಭಾ ಕ್ಷೇತ್ರಗಳ ಕುರಿತು ಸಭೆ ನಡೆಸಲಾಯಿತು. ಈ ವೇಳೆ, ಹಾಲಿ ಸಂಸದ ಕೇಂದ್ರ ಸಚಿವ ಭಗವಂತ್ ಖೂಬಾ ವಿರುದ್ಧ ಸ್ಥಳೀಯ ನಾಯಕರು ಅಸಮಾಧಾನ ವ್ಯಕ್ತಪಡಿಸಿದರು. ಅಭ್ಯರ್ಥಿಗಳ ಆಯ್ಕೆ ಬಗ್ಗೆ ಅಭಿಪ್ರಾಯ ಸಂಗ್ರಹದ ವೇಳೆ ಭಗವಂತ್ ಖೂಬಾಗೆ ಟಿಕೆಟ್ ನೀಡದಂತೆ ಶಾಸಕರಾದ ಪ್ರಭು ಚೌಹಾಣ್, ಶರಣು ಸಲಗಾರ್, ಶೈಲೇಂದ್ರ ಬೆಲ್ದಾಳೆ, ಸಿದ್ದು ಪಾಟೀಲ್ ಸೇರಿ ಹಲವರು ಮನವಿ ಮಾಡಿದರು. ಈ ವೇಳೆ, ಸಭೆಯಲ್ಲಿದ್ದ ಭಗವಂತ್ ಖೂಬಾ ಹಾಗೂ ಪ್ರಭು ಚೌಹಾಣ್ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಸಚಿವ ಖೂಬಾ ಸಭೆಯಿಂದ ಹೊರ ನಡೆದ ಘಟನೆ ನಡೆಯಿತು.

ಬಿಜೆಪಿ ಮೊದಲ ದಿನದ ಸಭೆ
ಬಿಜೆಪಿ ಮೊದಲ ದಿನದ ಸಭೆ

ಕೊಪ್ಪಳ ಸಂಸದ ಸಂಗಣ್ಣ ಕರಡಿ ಕುಟುಂಬಸ್ಥರಿಗೂ ಟಿಕೆಟ್ ನೀಡಲು ವಿರೋಧ ವ್ಯಕ್ತವಾಯಿತು. ಕೊಪ್ಪಳ ಭಾಗದ ನಾಯಕರಿಂದ ಸಂಗಣ್ಣ ಕುಟುಂಬಕ್ಕೆ ಟಿಕೆಟ್ ಕೊಡದಂತ ಪಟ್ಟು ಹಿಡಿದು ಸ್ಥಳೀಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದರು. ಬಳ್ಳಾರಿ ಕ್ಷೇತ್ರದಿಂದ ಶ್ರೀರಾಮುಲು ಪರ ಕೆಲವರು ಒಲವು ತೋರಿದರೂ ಬಳ್ಳಾರಿ ಟಿಕೆಟ್ ಬಗ್ಗೆ ವರಿಷ್ಠರ ನಿರ್ಧಾರಕ್ಕೆ ಬದ್ಧ ಎಂದು ಬಳ್ಳಾರಿ ಭಾಗದ ಸ್ಥಳೀಯ ನಾಯಕರು ಸ್ಪಷ್ಟಪಡಿಸಿದ್ದಾರೆ.

ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಲೋಕಸಭಾ ಕ್ಷೇತ್ರಗಳ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಾಯಿತು. ಸಂಸದ ಪ್ರತಾಸ್ ಸಿಂಹ ವಿಚಾರವೂ ಚರ್ಚೆಗೆ ಬಂದಿತಾದರೂ ಟಿಕೆಟ್ ಕೊಡದಂತೆ ಆಗ್ರಹ ಕೇಳಿ ಬಂದಿಲ್ಲ ಎನ್ನಲಾಗಿದೆ. ಹಾಸನ -ಮಂಡ್ಯ ಕ್ಷೇತ್ರಗಳಲ್ಲಿನ ಬಿಜೆಪಿ ಹಾಗೂ ಜೆಡಿಎಸ್ ಶಕ್ತಿಯ ಬಗ್ಗೆ ಸಮಾಲೋಚನೆ ನಡೆಸಿದ್ದು, ಇಲ್ಲಿ ಯಾರಿಗೆ ಟಿಕೆಟ್ ಎನ್ನುವ ವಿಚಾರದ ಚರ್ಚೆ ನಡೆದಿಲ್ಲ.

ಬಿಜೆಪಿ ಮೊದಲ ದಿನದ ಸಭೆ
ಬಿಜೆಪಿ ಮೊದಲ ದಿನದ ಸಭೆ

ತುಮಕೂರು ಕ್ಲಸ್ಟರ್ ಸಭೆ ವೇಳೆ ಮಾಜಿ ಸಚಿವ ಮಾಧುಸ್ವಾಮಿ ಹಾಜರಾಗಿದ್ದರು. ಚುನಾವಣೆ ಸೋಲಿನ ಬಳಿಕ ಪಕ್ಷದಿಂದ ದೂರವಾಗಿದ್ದ ಮಾಧುಸ್ವಾಮಿ, ಇದೀಗ ಲೋಕಸಭಾ ಚುನಾವಣಾ ಸಿದ್ದತಾ ಸಭೆಗೆ ಆಗಮಿಸಿದ್ದರು. ಈ ಭಾಗದಲ್ಲಿ ಯಾರು ಅಭ್ಯರ್ಥಿಯಾದಲ್ಲಿ ಗೆಲ್ಲುವ ಅವಕಾಶ ಹೆಚ್ಚು ಎನ್ನುವ ಕುರಿತು ಸಮಾಲೋಚನೆ ನಡೆಸಲಾಯಿತು. ತುಮಕೂರು ಕ್ಷೇತ್ರದ ಮೇಲೆ ಸೋಮಣ್ಣ ಕಣ್ಣಿಟ್ಟಿದ್ದು, ಹಾಲಿ ಸಂಸದ ನಿವೃತ್ತಿ ಘೋಷಿಸಿರುವುದರಿಂದಾಗಿ ಕ್ಷೇತ್ರದಲ್ಲಿ ಪೈಪೋಟಿ ಹೆಚ್ಚಾಗಿದೆ. ಹಾಗಾಗಿ ಹೆಚ್ಚಿನ ಚರ್ಚೆ ನಡೆಸಲಾಯಿತು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೆಂದ್ರ, ಸಭೆಯಲ್ಲಿ ಕೆಲವರಿಗೆ ಟಿಕೆಟ್ ನೀಡುವುದಕ್ಕೆ ಅಪಸ್ವರ ವ್ಯಕ್ತವಾಗಿರುವ ಮಾಹಿತಿಯನ್ನು ತಳ್ಳಿಹಾಕಿದರು. ಯಾರೂ ವಿರೋಧ ವ್ಯಕ್ತಪಡಿಸಿಲ್ಲ, ಯಾವುದೇ ವಿರೋಧವೂ ಇಲ್ಲ. ಎಲ್ಲವೂ ಉತ್ತಮ ರೀತಿಯಲ್ಲಿ ಚರ್ಚೆಯಾಗಿದೆ. ಅಭ್ಯರ್ಥಿ ಆಯ್ಕೆ ವಿಚಾರದ ಬಗ್ಗೆ ಪಟ್ಟಿ ಬಿಡುಗಡೆ ಮಾಡಿದಾಗ ಎಲ್ಲ ಮಾಹಿತಿ ನೀಡುತ್ತೇವೆ ಎಂದರು.

ಸಭೆಯಲ್ಲಿ ಮಾತನಾಡುತ್ತಿರುವ ಬಿವೈ ವಿಜಯೇಂದ್ರ
ಸಭೆಯಲ್ಲಿ ಮಾತನಾಡುತ್ತಿರುವ ಬಿವೈ ವಿಜಯೇಂದ್ರ

ಪ್ರತಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಲೋಕಸಭಾ ಚುನಾವಣೆ ತಯಾರಿ ಕ್ಲಸ್ಟರ್ ಹಂತದಲ್ಲಿ ಮಾಡ್ತಿದ್ದೇವೆ. ಪ್ರಮುಖ ಕಾರ್ಯಕರ್ತರು, ಶಾಸಕರು, ಮಾಜಿ ಶಾಸಕರು ಅಭಿಪ್ರಾಯ ತಿಳಿಸಿದ್ದಾರೆ. ಮುಕ್ತ ಚರ್ಚೆಗೆ ಅವಕಾಶ ಇತ್ತು. ಲೋಕಸಭಾ ಚುನಾವಣೆ ಹೇಗೆ ಗೆಲ್ಲಬೇಕು ಅಂತ ಚರ್ಚೆಯಾಗಿದೆ. 28ಕ್ಕೆ 28 ಕ್ಷೇತ್ರ ಹೇಗೆ ಗೆಲ್ಲಬೇಕು ಅಂತ ಚರ್ಚೆಯಾಗಿದೆ. ಲೋಕಸಭೆಯಲ್ಲಿ ಪ್ರಚಂಡವಾಗಿ ಗೆಲ್ಲುವ ತಯಾರಿ ನಡೆದಿದೆ. ಜೆಡಿಎಸ್ ಜೊತಗಿನ‌ ಹೊಂದಾಣಿಕೆಯಿಂದ ಎರಡೂ ಪಕ್ಷದ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ.

ಮಾಜಿ ಸಿಎಂ ಡಿವಿ ಸದಾನಂದಗೌಡ ಮಾತನಾಡಿ ಸಭೆಯಲ್ಲಿ ಕೆಲವರಿಗೆ ಟಿಕೆಟ್ ಕೊಡದಂತೆ ವಿರೋಧ ವ್ಯಕ್ತವಾದ ವಿಚಾರದ ಕುರಿತು ಸ್ಪಷ್ಟ ಮಾಹಿತಿ ನೀಡಲು ನಿರಾಕರಿಸಿದರು. ಬೆಳಗ್ಗೆಯೇ ಸೂಚನೆ ನೀಡಿದ್ದೆವು. ಯಾವುದೇ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡಬಾರದು ಅಂತ ತಿಳಿಸಿದ್ದೆವು. ಎರಡು, ಮೂರು ಹಂತದ ಸರ್ವೆ ಮಾಡಲಾಗಿದೆ. ಸರ್ವೆ ಆಧಾರದ ಮೇಲೆ ಟಿಕೆಟ್ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಸಂಘಟನೆಗೆ ಹೊಸ ರೂಪ ಕೊಡುವ ಉದ್ದೇಶದಿಂದ ಸಮಗ್ರ ಚರ್ಚೆ ಆಗಿದೆ. ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನ ಗೆಲ್ಲಲು ಈ ಸಭೆ ಮಹತ್ವದ್ದಾಗಿದೆ. ಈ ಸಭೆಯ ಮೂಲಕ ಸಣ್ಣಪುಟ್ಟ ವ್ಯತ್ಯಾಸಗಳು, ಗೊಂದಲಗಳು ಎಲ್ಲವೂ ಮುಗಿಯುತ್ತದೆ. ಕ್ಲಸ್ಟರ್ ಮಟ್ಟದಲ್ಲಿ ಸಭೆ ಆಗಿದೆ. ಮುಂದೆ ಜಿಲ್ಲಾ ಮಟ್ಟಕ್ಕೆ ತೆಗೆದುಕೊಂಡು ಹೋಗ್ತೀವಿ. ಇದು ಪಕ್ಷಕ್ಕೆ ಹೊಸ ರೀತಿಯ ಶಕ್ತಿ ಕೊಡಲು ಸಹಕಾರಿ ಆಗುತ್ತದೆ. ಎಲ್ಲ ಸಲಹೆ - ಸೂಚನೆಗಳ ಕ್ರೂಢೀಕರಣ ಮಾಡಿ ಹೊಸ ಪ್ಲಾನ್ ಮೂಲಕ ಚುನಾವಣೆ ಗೆಲ್ಲುವ ಕೆಲಸ ಆಗುತ್ತದೆ ಎಂದರು.

ನಾಳೆಯೂ ಸಹ ಮುಂದುವರಿಯಲಿದೆ: ಇಂದು ಮೂರು ಕ್ಲಸ್ಟರ್​ಗಳು 13 ಲೋಕಸಭಾ ಕ್ಷೇತ್ರಗಳ ಚುನಾವಣಾ ಸಿದ್ದತೆ ಕುರಿತು ಕ್ಷೇತ್ರವಾರು ಸಭೆ ನಡೆದಿದ್ದು ನಾಳೆಯೂ ಸಭೆ ಮುಂದುವರೆಯಲಿದೆ. ನಗರದ ರಮಾಡ ರೆಸಾರ್ಟ್​ನಲ್ಲಿ ನಾಳೆ ನಾಲ್ಕು ಕ್ಲಸ್ಟರ್​ಗಳ ಸಭೆ ನಡೆಯಲಿದೆ. ಮಂಗಳೂರು, ಬೆಂಗಳೂರು, ಧಾರವಾಡ ಹಾಗೂ ಕಿತ್ತೂರು ಕ್ಲಸ್ಟರ್​ಗಳ ವ್ಯಾಪ್ತಿಯ ಸಭೆ ನಾಳೆ ಬೆಳಗ್ಗೆ 9ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿದೆ. ಮಂಗಳೂರು ಕ್ಲಸ್ಟರ್ ನಡಿ ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಕ್ಷೇತ್ರಗಳು, ಕಿತ್ತೂರು ಕ್ಲಸ್ಟರ್ ನಡಿ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ವಿಜಯಪುರ ಕ್ಷೇತ್ರಗಳು, ಧಾರವಾಡ ಕ್ಲಸ್ಟರ್ ನಡಿ ಧಾರವಾಡ, ಹಾವೇರಿ, ದಾವಣಗೆರೆ, ಚಿತ್ರದುರ್ಗ ಕ್ಷೇತ್ರಗಳು, ಬೆಂಗಳೂರು ಕ್ಲಸ್ಟರ್ ನಡಿ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ , ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಗಳ ಚುನಾವಣಾ ಸಿದ್ದತೆ ಕುರಿತು ಕ್ಷೇತ್ರವಾರು ಸಭೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.