ಬೆಂಗಳೂರು: ರಾಜ್ಯ ಹಾಗೂ ದೇಶದಲ್ಲಿ ಮಾಧ್ಯಮಗಳನ್ನು ನಿಯಂತ್ರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಸದನದಲ್ಲಿ ಆಗುವ ಚರ್ಚೆಗಳನ್ನು ಸಾರ್ವಜನಿಕರಿಗೆ ತೋರಿಸುವ ಮುಕ್ತ ಅವಕಾಶವನ್ನು ಕಿತ್ತುಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕೆಪಿಸಿಸಿ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಆಡಳಿತರ ಸರ್ಕಾರವಿದ್ದಾಗ, ಮಾಧ್ಯಮದವರು ಎಷ್ಟೆ ಆರೋಪ, ಟೀಕೆಗಳನ್ನು ಮಾಡಿದರೂ ಅವುಗಳನ್ನು ನಿಷೇಧ ಮಾಡಿರಲಿಲ್ಲ.ಬಿಜೆಪಿಯ ಈ ಕ್ರಮವನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಪರಮೇಶ್ವರ್ ಮನೆ ಮೇಲೆ ಐಟಿ ದಾಳಿ ಪ್ರಕರಣ: ಬಿಜೆಪಿ ವಿರುದ್ಧ ಮಾತನಾಡುವವರನ್ನು ಹತ್ತಿಕ್ಕಲು ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗಳನ್ನು ಬಳಸಿಕೊಳ್ಳಲಾಗುತ್ತಿದೆ. ದ್ವೇಷ ರಾಜಕೀಯದಿಂದ ಬಿಜೆಪಿ ಹೀಗೆ ಮಾಡುತ್ತಿದೆ ಎಂದು ಆರೋಪಿಸಿದರು.
ಸೆಕ್ಸ್ ಟೇಪ್ ನೋಡಿದವರಾರು? ಅವರು ಯಾವ ಪಕ್ಷದಲ್ಲಿ ಇದ್ದಾರೆ? ಆ ಸುದ್ದಿಯನ್ನು ಬಯಲಿಗೆ ತಂದಿದ್ದು ಮಾಧ್ಯಮದವರು. ಕೆಲವು ನಿಯಮ ಅಥವಾ ಸಲಹೆಗಳನ್ನು ಮಾಡಿ ಮಾಧ್ಯಮದವರಿಗೆ ಅವಕಾಶ ಕಲ್ಪಿಸಬೇಕು ಎಂದು ಹೇಳಿದರು.