ETV Bharat / state

ಬಿಎಸ್​ವೈ ಕಡೆಗಣಿಸಿದ್ರೆ ಸಾಮೂಹಿಕ ರಾಜೀನಾಮೆ: ಕಟೀಲ್​ಗೆ ಬಿಜೆಪಿ ಯುವ ಮೋರ್ಚಾ ಎಚ್ಚರಿಕೆ

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನ ಕಡೆಗಣಿಸಿ, ಅವರನ್ನು ವಿರೋಧಿಸಿ ಪಕ್ಷ ಸಂಘಟನೆಗೆ ಮುಂದಾದರೆ ಉತ್ತರ ಕರ್ನಾಟಕದ 13 ಜಿಲ್ಲೆಗಳ ಸಾವಿರಾರು ಸಂಖ್ಯೆಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿ ಪಕ್ಷಕ್ಕೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದು ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾ‌ಶಂಕರ ಪಾಟೀಲ್ ಪತ್ರ ಬರೆದಿದ್ದಾರೆ.

ಬಿಎಸ್​ವೈ ಕಡೆಗಣಿಸಿದ್ರೆ ಸಾಮೂಹಿಕ ರಾಜೀನಾಮೆ: ರಾಜ್ಯಾಧ್ಯಕ್ಷರಿಗೆ‌ ಪತ್ರ ಬರೆದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ
author img

By

Published : Sep 27, 2019, 1:37 PM IST

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನ ಕಡೆಗಣಿಸಿ ಪಕ್ಷ ಸಂಘಟನೆಗೆ ಮುಂದಾದರೆ, ಉತ್ತರ ಕರ್ನಾಟಕದ 13 ಜಿಲ್ಲೆಗಳ ಸಾವಿರಾರು ಸಂಖ್ಯೆಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸಾಮೂಹಿಕ ರಾಜೀನಾಮೆ ನೀಡಿ ಪಕ್ಷಕ್ಕೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದು ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾ‌ಶಂಕರ ಪಾಟೀಲ್ ಪತ್ರ ಬರೆದಿದ್ದಾರೆ.

BJp young Morcha Vice-President Bhimashankar Patil Writes Letter to the nalin kumar katil
ಬಿಎಸ್​ವೈ ಕಡೆಗಣಿಸಿದ್ರೆ ಸಾಮೂಹಿಕ ರಾಜೀನಾಮೆ: ರಾಜ್ಯಾಧ್ಯಕ್ಷರಿಗೆ‌ ಪತ್ರ ಬರೆದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ

ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ತಳ ಮಟ್ಟದಿಂದ ಕಟ್ಟಿ ಪಕ್ಷವನ್ನು ಅಧಿಕಾರಕ್ಕೆ ತಂದ ಜನ ನಾಯಕ ಯಡಿಯೂರಪ್ಪ ಅವರನ್ನು ಪಕ್ಷ ಸಂಘಟನೆ, ಆಡಳಿತಾತ್ಮಕ ವಿಚಾರ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ನೀವು ಸೇರಿದಂತೆ ಅನೇಕರು ಕಡೆಗಣಿಸುತ್ತಿರುವ ವಿಚಾರವನ್ನು ಬಲವಾಗಿ ಖಂಡಿಸುತ್ತೇನೆ. ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ಜನ ನಾಯಕರಾಗಿ, ರೈತ, ಕಾರ್ಮಿಕ, ಬಡವ-ಬಲ್ಲಿದರಾದಿಯಾಗಿ ಸರ್ವ ಜನಾಂಗದ, ಸರ್ವ ಸಮುದಾಯದ ಜನರು ಯಡಿಯೂರಪ್ಪ ಅವರನ್ನು ಅಭಿಮಾನದಿಂದ ನೋಡುತ್ತಾರೆ. ಅವರ ಜನಪರ ಸಾಮಾಜಿಕ ಕಳಕಳಿ ಮೆಚ್ಚಿ ಬಿಎಸ್​ವೈ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಕ್ಷಕ್ಕೆ ಮತ ಹಾಕಿ, ರಾಜ್ಯದಲ್ಲಿ ಬಿಜೆಪಿ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ. ಮನೆ,ಮಠ ಬಿಟ್ಟು ತಮ್ಮ ಆರೋಗ್ಯವನ್ನು ಲೆಕ್ಕಿಸದೆ, ಇಳಿ ವಯಸ್ಸಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುತ್ತಿ ಪಕ್ಷ ಕಟ್ಟಿದವರು. ನಮ್ಮ ಹೆಮ್ಮೆಯ ನಾಯಕ ಯಡಿಯೂರಪ್ಪನವರು ಜಾತಿ ಧರ್ಮದ ಎಲ್ಲೆ ಮೀರಿ, ರಾಜ್ಯದ ಜನರ ನಾಡಿ ಮಿಡಿತವಾಗಿ ಇಂದು ಅವರ ಹೃದಯದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಇಂತಹ ನಾಯಕರ ಕಡೆಗಣನೆ ಸಲ್ಲದು ಎಂದು ಭೀಮಾಶಂಕರ್​ ಪತ್ರದಲ್ಲಿ ಉಲ್ಲೇಖಿದ್ದಾರೆ.

ಪಕ್ಷದ ಸಂಘಟನೆ ಹಳಿ ತಪ್ಪಿದೆ. ಯೋಗ್ಯತೆ ಇಲ್ಲದವರು ಪಕ್ಷದ ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವಾಗ ಯಾವ ಮುಲಾಜಿಲ್ಲದೆ‌, ಅಂತವರನ್ನು ಪಕ್ಷದ ಸಂಘಟನೆ ಚಟುವಟಿಕೆಗಳಿಂದ ದೂರ ಇಟ್ಟು ಪಕ್ಷವನ್ನು ಸಮರ್ಥವಾಗಿ ಕಟ್ಟಿದವರು ಯಡಿಯೂರಪ್ಪನವರು. ಗ್ರಾಮ ಪಂಚಾಯತ್​ ಚುನಾವಣೆ ಗೆದ್ದು ಬರುವ ಸಾಮರ್ಥ್ಯ ಇಲ್ಲದವರೆಲ್ಲ, ಅಂದು ಯಡಿಯೂರಪ್ಪನವರ ಸಂಘಟನೆ ನಿರ್ಣಯಗಳನ್ನು ಟೀಕಿಸಿದ್ದರು. ಅಂಥವರ ಯಾವ ಟೀಕೆಗಳಿಗೆ ಗಮನ ಕೊಡದೆ, ರಾಜ್ಯದ 25 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿರುವುದರ ಹಿಂದೆ ಯಡಿಯೂರಪ್ಪ ಎನ್ನುವ ಹೆಸರಿನ ಪಾತ್ರ ತುಂಬಾ ದೊಡ್ಡದಿದೆ ಎನ್ನುವುದನ್ನು ಯಾರೂ ಮರೆಯಬಾರದು. ನಿಮ್ಮ ಗೆಲುವಿನ ಹಿಂದಿನ ಶಕ್ತಿಯೂ ಯಡಿಯೂರಪ್ಪನವರು ಎನ್ನುವುದು ನೀವೂ ಸಹ ಮರೆಯಬಾರದು ಕಟೀಲ್​ಗೆ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಅವರು ಮುಖ್ಯಮಂತ್ರಿ ಹುದ್ದೆಗೆ ಬಂದಾಗಿನಿಂದ ಮತ್ತೆ ಅವರ ವಿರುದ್ಧ ಷಡ್ಯಂತ್ರ, ಪಿತೂರಿಗಳು ಎಗ್ಗಿಲ್ಲದೆ ನಡೆಯುತ್ತಿವೆ. ಪಕ್ಷ ಅಧಿಕಾರಕ್ಕೆ ತರಲು ಯಡಿಯೂರಪ್ಪ ಬೇಕು. ಅಧಿಕಾರ ಸಿಕ್ಕ ನಂತರ ಯಡಿಯೂರಪ್ಪ ಬೇಡ ಎನ್ನುವ ಮನಸ್ಥಿತಿಯಲ್ಲಿ ನಮ್ಮ ಪಕ್ಷದ ಕೆಲ ಬುದ್ಧಿವಂತಿಕೆಯ ಮುಖವಾಡ ಧರಿಸಿರುವವರು ಮಾಡುತ್ತಿದ್ದಾರೆ. ಇಂತಹ ಬುದ್ಧಿವಂತ ನಾಯಕರು ಇಂತಹ ಕನಿಷ್ಠ ಯೋಚನೆ, ಪಕ್ಷಕ್ಕೆ ನಿಜಕ್ಕೂ ಅಪಾಯ. ಇದರಿಂದ ನೀವು ಸಹ ಹೊರಬರಬೇಕು ಎಂದು ಪತ್ರದ ಮೂಲಕ ಭೀಮಾಶಂಕರ್​ ಮನವಿ ಮಾಡಿದ್ದಾರೆ.

ಯಡಿಯೂರಪ್ಪ ಅವರಿಗೆ ಇಲ್ಲಿಯವರೆಗೆ ಕೊಟ್ಟ ಕಾಟ ಸಾಕು. ಮುಂದೆ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದಾದರೆ, ನೀವೂ ಸೇರಿದಂತೆ ಇನ್ನೂ ಅನೇಕ ನಾಯಕರು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಉತ್ತರ ಕರ್ನಾಟಕ ಭಾಗ ಸೇರಿದಂತೆ ಹಲವು ಕಡೆ ಪಕ್ಷ ಉಳಿಸಿಕೊಳ್ಳುವುದು ಮುಂದಿನ ದಿನಗಳಲ್ಲಿ ನಿಮಗೆ ಕಷ್ಟವಾಗಬಹುದು ಎಂದು ತಿಳಿಸಲು ಇಚ್ಛಿಸುವೆ ಎಂದು ಪತ್ರದಲ್ಲಿ ಯುವ ಮೋರ್ಚಾ ಉಪಾಧ್ಯಕ್ಷ ಭೀಮಾಶಂಕರ್​​ ಅವರು ಉಲ್ಲೇಖಿಸಿದ್ದಾರೆ.

Intro:

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಬಿ.ಎಸ್.ಯಡಿಯೂರಪ್ಪರನ್ನು ಕಡೆಗಣಿಸಿ ಅವರನ್ನು ವಿರೋಧಿಸಿ ಪಕ್ಷ ಸಂಘಟನೆಗೆ ಮುಂದಾದರೆ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟವಾಗಬಹುದು ಎಂದು ನೂತನ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಭೀಮಾ‌ಶಂಕರ ಪಾಟೀಲ್ ಪತ್ರ ಬರೆದಿದ್ದು ಬಿಜೆಪಿಯಲ್ಲಿ ಆಂತರಿಕ ಕಲಹ ನಡೆಯುತ್ತಿರಯವುದಕ್ಕೆ ಪುಷ್ಟಿ ನೀಡಿದೆ.

ಮೇಯರ್ ಅಭ್ಯರ್ಥಿ ಆಯ್ಕೆ ಪದಾಧಿಕಾರಿಗಳ ನೇಮಕ ಸೇರಿದಂತೆ ಹಲವು ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವೆ ಪರಸ್ಪರ ವಿರುದ್ಧ ನಿಲುವುಗಳಿರುವುದಕ್ಕೆ ನಿದರ್ಶನವಾಗಿದ್ದು‌ಅದರ ಬೆನ್ನಲ್ಲೇ ಪತ್ರದ ವಿಚಾರ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡಿದೆ.

ಭಾರತೀಯ ಜನತಾ ಪಕ್ಷವನ್ನು ಕರ್ನಾಟಕದಲ್ಲಿ ತಳ ಮಟ್ಟಕ್ಕೆ ಕಟ್ಟಿ ಪಕ್ಷವನ್ನು ಅಧಿಕಾರಕ್ಕೆ ತಂದ ಜನ ನಾಯಕ ಯಡಿಯೂರಪ್ಪನವರನ್ನು ಪಕ್ಷ ಸಂಘಟನೆ ಅಡಳಿತಾತ್ಮಕ ವಿಚಾರ ಸೇರಿದಂತೆ ಇನ್ನಿತರ ವಿಚಾರಗಳಲ್ಲಿ ನೀವು ಸೇರಿದಂತೆ ಅನೇಕ ಕಡೆಗಣಿಸುತ್ತಿರುವ ವಿಚಾರವನ್ನು ಬಲವಾಗಿ ಖಂಡಿಸಿದ್ದಾರೆ.

ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ಜನ ನಾಯಕರಾಗಿ ರೈತ, ಕಾರ್ಮಿಕ, ಬಡವ-ಬಲ್ಲಿದರಾದಿಯಾಗಿ ಸರ್ವ ಜನಾಂಗದ ಸರ್ವ ಸಮುದಾಯದ ಜನರು ಅವರನ್ನು ಅಭಿಮಾನದಿಂದ ಆರಾಧಿಸಿ ಅವರ ಜನಪರ ಸಾಮಾಜಿಕ ಕಳಕಳಿ ಮೆಚ್ಚಿ ಅವರು ಅಧ್ಯಕ್ಷರಾಗಿದ್ದ
ಅವಧಿಯಲ್ಲಿ ಪಕ್ಷಕ್ಕೆ ಮತ ಹಾಕಿ ರಾಜ್ಯದಲ್ಲಿ ಪಕ್ಷ ಆಡಳಿತ ಚುಕ್ಕಾಣಿ ಹಿಡಿಯುವಂತೆ ಮಾಡಿದ್ದಾರೆ,ಮನೆ ಮಠ ಬಿಟ್ಟು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಇಳಿ ವಯಸ್ಸಿನಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯ ಸುದ್ದಿ ಪಕ್ಷ ಕಟ್ಟಿದವರು ನಮ್ಮ
ಹೆಮ್ಮೆಯ ನಾಯಕ ಯಡಿಯೂರಪ್ಪ ನವರ ಜಾತಿ ಧರ್ಮದ ಎಲ್ಲೆ ಮೀರಿ ರಾಜ್ಯದ ಜನರ ನಾಡು ಮಿಡಿತವಾಗಿ ಇಂದು ಅವರ ಹೃದಯದಲ್ಲಿ ಸ್ಥಾನ ಪಡೆದು ಕೊಂಡಿದ್ದಾರೆ ಇಂತಹ ನಾಯಕರ ಕಡೆಗಣನೆ ಸಲ್ಲದು ಎಂದು ಟೀಕಿಸಿದ್ದಾರೆ.

ಪಕ್ಷದ ಸಂಘಟನೆ ಹಳಿ ತಪ್ಪಿದೆ ಯೋಗ್ಯತೆ ಇಲ್ಲದವರು ಪಕ್ಷದ ಹೆಸರನ್ನು ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವಾಗ ಯಾವ ಮುಲಾಜಿಲ್ಲದೆ‌ ಅಂತವರನ್ನು ಪಕ್ಷದ ಸಂಘಟನೆ ಚಟುವಟಿಕೆಗಳಿಂದ ದೂರ ಇಟ್ಟು ಪಕ್ಷವನ್ನು ಸಮರ್ಥವಾಗಿ ಕಟ್ಟಿದವರು ಯಡಿಯೂರಪ್ಪನವರು ಗ್ರಾಮ
ಪಂಚಾಯತಿ ಚುನಾವಣೆಗೆ ಗೆದ್ದು ಬರುವ ಸಾಮರ್ಥ್ಯ ಇಲ್ಲದವರಿಲ್ಲ ಅಂದು ಯಡಿಯೂರಪ್ಪ ವಿವರ ಸಂಘಟನೆ ನಿರ್ಣಯಗಳನ್ನು ಟೀಕಿಸಿದರು. ಅಂಥವರ ಯಾವ ಟೀಕೆಗಳಿಗೆ ಲಕ್ಷ ಕೊಡದೆ ಸಮರ್ಥವಾಗಿ ಪಕ್ಷ ಕಟ್ಟಿ ರಾಜ್ಯದಲ್ಲಿ ಅಧಿಕಾರಕ್ಕೆ ತಂದ ಧೀಮಂತ ನಾಯಕ ನಮ್ಮ ಯಡಿಯೂರಪ್ಪ ನವರು ರಾಜ್ಯದ 25 ಲೋಕಸಭಾ ಕ್ಷೇತ್ರ ಗಳಲ್ಲಿ ಪಕ್ಷದ ಅಭ್ಯರ್ಥಿಗಳು ಜಯಭೇರಿ ಭಾರಿಸುವುದರ ಹಿಂದೆ ಯಡಿಯೂರಪ್ಪ ಎನ್ನುವ ಹೆಸರು ಪಾತ್ರ ತುಂಬಾ ದೊಡ್ಡದಿದೆ ಎನ್ನುವುದು ಯಾರು ಮರೆಯಬಾರದು, ನಿಮ್ಮ ಗೆಲುವಿನ ಹಿಂದಿನ ಶಕ್ತಿಯೂ
ಯಡಿಯೂರಪ್ಪನವರು ಎನ್ನುವುದು ನೀವೂ ಸಹ ಮರೆಯಬಾರದು,ಇತ್ತೀಚೆಗೆ ಅವರು ಮುಖ್ಯಮಂತ್ರಿ ಹುದ್ದೆಗೆ ಬಂದಾಗಿನಿಂದ ಮತ್ತೆ ಅವರ ವಿರುದ್ಧ ಷಡ್ಯಂತ್ರಗಳು ಪಿತೂರಿಗಳು ಇಲ್ಲದೆ ನಡೆಯುತ್ತಿವೆ ಪಕ್ಷ
ಅಧಿಕಾರಕ್ಕೆ ತರಲು ಯಡಿಯೂರಪ್ಪ ಬೇಕು ಅಧಿಕಾರ ಸಿಕ್ಕ ನಂತರ ಯಡಿಯೂರಪ್ಪ ಬೇಡ ಎನ್ನುವ ಮನಸ್ಥಿತಿಗೆ ನಮ್ಮ ಪಕ್ಷದ ಕೆಲ ಬುದ್ದಿವಂತರ ಮುಖವಾಡ ಧರಿಸಿರುವವರು ಮಾಡುತ್ತಿದ್ದಾರೆ ಬುದ್ದಿವಂತ ನಾಯಕರು ಇಂತಹ ಕನಿಷ್ಟ ಯೋಚನೆ ಪಕ್ಷಕ್ಕೆ ನಿಜಕ್ಕೂ ಅಪಾಯ ಇದರಿಂದ ನೀವು ಸಹ ಹೊರ ಬರಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಪಕ್ಷ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯ ಸ್ಥಾನದಲ್ಲಿದ್ದುಕೊಂಡು ರಾಜ್ಯಾದ್ಯಂತ ಲಕ್ಷಾಂತರ ಯುವ ಮಿತ್ರ ರನ್ನು ಪಕ್ಷಕ್ಕೆ ಸಳೆದು ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವ ವಿಜಯೇಂದ್ರವನ್ನು ಸಹ ತುಳಿಯುವ ಕೆಲಸ ವ್ಯವಸ್ಥಿತವಾಗಿ ಪಕ್ಷದಲ್ಲಿ ನಡೆಯುತ್ತಿದೆ. ಇದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಉತ್ತರ ಕರ್ನಾಟಕದ ಬಹುತೇಕ ಲಿಂಗಾಯತರು ಸೇರಿದಂತೆ ವಿವಿಧ ಸಮುದಾಯದ ಜನರು
ಯಡಿಯೂರಪ್ಪನವರಿಗಾಗಿಯೇ ಪಕ್ಷವನ್ನು ಬೆಂಬಲಿಸಿದ್ದಾರೆ ಎನ್ನುವುದು ಮರೆಯಬಾರದು ರಾಜ್ಯಾಧ್ಯಕ್ಷರಾಗಿರುವಾಗಲೂ ಕಿರುಕುಳ ನೀಡಲಾಯಿತು ರಾಜ್ಯದ ಮುಖ್ಯಮಂತ್ರಿಯಾಗಿರುವಾಗಲೂ ಕಿರುಕುಳ ನೀಡುತ್ತಿರುವ ಪಕ್ಷದ ಕೆಲ ವರಿಷ್ಠರ ಬಗ್ಗೆ ನಮಗೆ ತುಂಬಾ ಬೇಸರ ವಿದೆ ಯಡಿಯೂರಪ್ಪ ನವರನ್ನು ಬಿಟ್ಟು ನಿಮಗೆ ಪಕ್ಷವನ್ನು ಅಧಿಕಾರಕ್ಕೆ ತರಲು ಆಗುತ್ತದೆಯೇ? ಅಂಥಹ ಸಮರ್ಥ ನಾಯಕ ಯಾರಾದರೂ ಇದ್ದಾರೆಯೇ ಎನ್ನುವುದು ಕಿರುಕುಳ ಕೊಡುತ್ತಿರುವವರು ಯೋಚನೆ ಮಾಡಬೇಕು, ನೀವು ಹೊಸದಾಗಿ ರಾಜ್ಯಾಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವಿರಿ ಅರ್ಹತೆ ಮತ್ತು ಯೋಗ್ಯತೆ ಇಲ್ಲದವರು ಮಾತು ಕೇಳಿಕೊಂಡು ಪಕ್ಷ ಸಂಘಟನೆಯಲ್ಲಿ ಯಡಿಯೂರಪ್ಪನವರನ್ನು ಕಡೆಗಣಿಸಿದ್ದೆ ಆದರೆ ನನ್ನನ್ನು ಸೇರಿದಂತೆ ಉತ್ತರ ಕರ್ನಾಟಕದ 13 ಜಿಲ್ಲೆಗಳ ಸಾವಿರಾರು ಸಂಖ್ಯೆಯ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಸಾಮೂಹಿಕ ರಾಜಿನಾಮೆ ನೀಡಿ ಪಕ್ಷಕ್ಕೆ ಸರಿಯಾದ ಪಾಠ ಕಲಿಸಬೇಕಾಗುತ್ತದೆ ಎಂದು ಈ ಮೂಲಕ ತಿಳಿಸಲು
ಇಚ್ಚಿಸುತ್ತಿರುತ್ತೇನೆ ಎಂದು ಸೂಚ್ಯವಾಗಿ ಎಚ್ಚರಿಕೆ ನೀಡಿದ್ದಾರೆ.

ಯಡಿಯೂರಪ್ಪ ಅವರಿಗೆ ಇಲ್ಲಿಯವರೆಗೆ ಕೊಟ್ಟ ಕಾಟ ಸಾಕು ಮುಂದೆ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದಾದರೆ ನೀವೂ
ಸೇರಿದಂತೆ ಇನ್ನೂ ಅನೇಕ ನಾಯಕರು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವಾದರೆ ಉತ್ತರ ಕರ್ನಾಟಕ ಭಾಗ ಸೇರಿದಂತೆ ಹಲವು ಕಡೆ ಪಕ್ಷ ಉಳಿಸಿಕೊಳ್ಳುವುದು ಮುಂದಿನ ದಿನಗಳಲ್ಲಿ ನಿಮಗೆ ಕಷ್ಟವಾಗಬಹುದು ಎಂದು ತಿಳಿಸಲು ಇಚ್ಚಿಸುವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.