ಬೆಂಗಳೂರು : ಬಿಜೆಪಿ ದೇಶಾದ್ಯಂತ ಧರ್ಮದ ಹೆಸರಿನಲ್ಲಿ ಕಾನೂನಿನ ಉಲ್ಲಂಘನೆ ಮಾಡುತ್ತಿದೆ ಎಂದು ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ. ಬಿಜೆಪಿಯನ್ನು ಗುರಿಯಾಗಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಸಂವಿಧಾನದ 15 ಹಾಗೂ 25ನೇ ಪರಿಚ್ಛೇದದ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯದ ನಿಷೇಧ.
ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ, ಆಚರಣೆ ಮತ್ತು ಧರ್ಮಾಚರಣೆಯ ಸ್ವತಂತ್ರವಿದೆ. ಆದರೆ, ದೇಶದಲ್ಲಿ ಇವೆರಡರ ಉಲ್ಲಂಘನೆಯೂ ಆಗುತ್ತಿದೆ. ಬಿಜೆಪಿ ಈ ಪರಿಚ್ಛೇದಗಳನ್ನೂ ಮಾರಿಕೊಂಡಿದೆಯೇ?! ಎಂದು ಪ್ರಶ್ನಿಸಿದೆ.
ಇದಕ್ಕೆ ಪೂರಕವಾಗಿ ದೇಶದ ವಿವಿಧ ಭಾಗಗಳಲ್ಲಿ ಬಲವಂತವಾಗಿ ವಿವಿಧ ಧರ್ಮೀಯರಿಗೆ ಜೈಶ್ರೀರಾಮ್ ಹೇಳಿಸಲು ಬಿಜೆಪಿ ಕಾರ್ಯಕರ್ತರು ಪ್ರಯತ್ನ ಮಾಡುತ್ತಿರುವ ವಿಡಿಯೋವನ್ನು ಲಗತ್ತಿಸಿದೆ. ಈ ವಿಡಿಯೋ ಮೂಲಕ ಬಿಜೆಪಿ ಪಕ್ಷದ ನಿಲುವು ಏನೆಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದೆ.
-
ಸಂವಿಧಾನದ 15 ನೇ ಹಾಗೂ 25ನೇ ಪರಿಚ್ಛೇದದ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯದ ನಿಷೇಧ.
— Karnataka Congress (@INCKarnataka) August 30, 2021 " class="align-text-top noRightClick twitterSection" data="
ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ, ಆಚರಣೆ ಮತ್ತು ಧರ್ಮಾಚರಣೆಯ ಸ್ವತಂತ್ರವಿದೆ.
ಆದರೆ ದೇಶದಲ್ಲಿ ಇವೆರೆಡರ ಉಲ್ಲಂಘನೆಯೂ ಆಗುತ್ತಿದೆ.
ಬಿಜೆಪಿ ಈ ಪರಿಚ್ಚೇದಗಳನ್ನೂ ಮಾರಿಕೊಂಡಿದೆಯೇ?! https://t.co/bV0mg8YRh7
">ಸಂವಿಧಾನದ 15 ನೇ ಹಾಗೂ 25ನೇ ಪರಿಚ್ಛೇದದ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯದ ನಿಷೇಧ.
— Karnataka Congress (@INCKarnataka) August 30, 2021
ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ, ಆಚರಣೆ ಮತ್ತು ಧರ್ಮಾಚರಣೆಯ ಸ್ವತಂತ್ರವಿದೆ.
ಆದರೆ ದೇಶದಲ್ಲಿ ಇವೆರೆಡರ ಉಲ್ಲಂಘನೆಯೂ ಆಗುತ್ತಿದೆ.
ಬಿಜೆಪಿ ಈ ಪರಿಚ್ಚೇದಗಳನ್ನೂ ಮಾರಿಕೊಂಡಿದೆಯೇ?! https://t.co/bV0mg8YRh7ಸಂವಿಧಾನದ 15 ನೇ ಹಾಗೂ 25ನೇ ಪರಿಚ್ಛೇದದ ಪ್ರಕಾರ ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳದ ಆಧಾರದ ಮೇಲೆ ತಾರತಮ್ಯದ ನಿಷೇಧ.
— Karnataka Congress (@INCKarnataka) August 30, 2021
ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ, ಆಚರಣೆ ಮತ್ತು ಧರ್ಮಾಚರಣೆಯ ಸ್ವತಂತ್ರವಿದೆ.
ಆದರೆ ದೇಶದಲ್ಲಿ ಇವೆರೆಡರ ಉಲ್ಲಂಘನೆಯೂ ಆಗುತ್ತಿದೆ.
ಬಿಜೆಪಿ ಈ ಪರಿಚ್ಚೇದಗಳನ್ನೂ ಮಾರಿಕೊಂಡಿದೆಯೇ?! https://t.co/bV0mg8YRh7
ಅಭಿವೃದ್ಧಿಗೆ ದ್ರೋಹ
ಕಲಬುರಗಿ, ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಗಿರುವ ಸಂದರ್ಭದಲ್ಲಿ ಇಲ್ಲಿನ ಅಭಿವೃದ್ಧಿ ಬಗ್ಗೆ ಕಾಂಗ್ರೆಸ್, ಬಿಜೆಪಿಯನ್ನು ಪ್ರಶ್ನಿಸಿದೆ. ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ಹೀಗಿದ್ದೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ದ್ರೋಹ ಬಗೆದ ರಾಜ್ಯ ಬಿಜೆಪಿ ಕಲಬುರಗಿ ಪಾಲಿಕೆ ಚುನಾವಣೆಯಲ್ಲಿ ಯಾವ ಮುಖದೊಂದಿಗೆ ಮತ ಕೇಳುತ್ತದೆ? ಕಾಂಗ್ರೆಸ್ ಮಂಜೂರು ಮಾಡಿದ್ದ ಹಲವು ಅಭಿವೃದ್ಧಿ ಪರ ಯೋಜನೆಗಳನ್ನು ಎತ್ತಂಗಡಿ ಮಾಡಿ ದ್ರೋಹ ಬಗೆದಿದ್ದೇ ಬಿಜೆಪಿ ಸಾಧನೆ ಎಂದು ಲೇವಡಿ ಮಾಡಲಾಗಿದೆ.
ಬೆಳಗಾವಿ ಜನತೆ ಬಿಜೆಪಿಯನ್ನ ಆಯ್ಕೆ ಮಾಡಿದರೂ ಬಿಜೆಪಿಯಿಂದ ಬೆಳಗಾವಿಗೆ ಸಿಕ್ಕ ಕೊಡುಗೆ ಶೂನ್ಯ. ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ, ಸಂಸದರೂ ಬಿಜೆಪಿ, ಹಲವು ಶಾಸಕರೂ ಬಿಜೆಪಿ. ಹೀಗಿದ್ದೂ ಬೆಳಗಾವಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದ ರಾಜ್ಯ ಬಿಜೆಪಿ, ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಜನರ ಮತ ಕೇಳುವುದಕ್ಕೆ ನಾಚಿಕೆಯಾಗಬೇಕು ಎಂದು ವ್ಯಂಗ್ಯವಾಡಿದೆ.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ.. ಬೆಂಗಳೂರಲ್ಲಿ ಮಾಡೆಲ್, ಡಿಜೆ ಮನೆ ಮೇಲೆ ಪೊಲೀಸ್ ದಾಳಿ.. ಮೂವರು ವಶಕ್ಕೆ..
ಮೂರು ಮಹಾನಗರ ಪಾಲಿಕೆಗಳಿಗೆ ಸೆಪ್ಟೆಂಬರ್ 5ರಂದು ಚುನಾವಣೆ ನಡೆಯಲಿದೆ. ಎರಡು ರಾಷ್ಟ್ರೀಯ ಪಕ್ಷಗಳಿಗೆ ಈ ಚುನಾವಣೆ ಪ್ರತಿಷ್ಠೆಯಾಗಿ ಪರಿಗಣಿಸಿದೆ.