ಬೆಂಗಳೂರು: ಆತ್ಮಸಾಕ್ಷಿ ಶಬ್ದ ಪ್ರಯೋಗ ಮಾಡುವುದಕ್ಕೆ ನಿಮಗೆ ನೈತಿಕತೆ ಇದೆಯೇ? ಆತ್ಮವಂಚಕತನಕ್ಕೆ ನಿಮಗಿಂತ ಬೇರೆ ಉದಾಹರಣೆ ಇಲ್ಲ. ಹೀಗಿರುವಾಗ ಇಂತಹ ಪದ ಬಳಕೆ ನಿಮಗೆ ಶೋಭೆಯಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ 24ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆ ನಡೆದು ಹೋಯಿತು. ಆಗ ನಿಮ್ಮ ಆತ್ಮಸಾಕ್ಷಿ ಎಲ್ಲಿ ಹೋಗಿತ್ತು? ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಬಿಜೆಪಿ ಪ್ರಶ್ನಿಸಿದೆ.
-
ಆತ್ಮಸಾಕ್ಷಿ!
— BJP Karnataka (@BJP4Karnataka) June 10, 2022 " class="align-text-top noRightClick twitterSection" data="
ಸಿದ್ದರಾಮಯ್ಯ ಅವರೇ ಈ ಶಬ್ದ ಪ್ರಯೋಗ ಮಾಡುವುದಕ್ಕೆ ನಿಮಗೆ ನೈತಿಕತೆ ಇದೆಯೇ?
ಆತ್ಮವಂಚಕತನಕ್ಕೆ ನಿಮಗಿಂತ ಬೇರೆ ಉದಾಹರಣೆ ಇಲ್ಲ. ಹೀಗಿರುವಾಗ ಇಂಥ ಪದ ಬಳಕೆ ನಿಮಗೆ ಶೋಭೆಯಲ್ಲ.#ಸಿದ್ದುಆತ್ಮಸಾಕ್ಷಿ
">ಆತ್ಮಸಾಕ್ಷಿ!
— BJP Karnataka (@BJP4Karnataka) June 10, 2022
ಸಿದ್ದರಾಮಯ್ಯ ಅವರೇ ಈ ಶಬ್ದ ಪ್ರಯೋಗ ಮಾಡುವುದಕ್ಕೆ ನಿಮಗೆ ನೈತಿಕತೆ ಇದೆಯೇ?
ಆತ್ಮವಂಚಕತನಕ್ಕೆ ನಿಮಗಿಂತ ಬೇರೆ ಉದಾಹರಣೆ ಇಲ್ಲ. ಹೀಗಿರುವಾಗ ಇಂಥ ಪದ ಬಳಕೆ ನಿಮಗೆ ಶೋಭೆಯಲ್ಲ.#ಸಿದ್ದುಆತ್ಮಸಾಕ್ಷಿಆತ್ಮಸಾಕ್ಷಿ!
— BJP Karnataka (@BJP4Karnataka) June 10, 2022
ಸಿದ್ದರಾಮಯ್ಯ ಅವರೇ ಈ ಶಬ್ದ ಪ್ರಯೋಗ ಮಾಡುವುದಕ್ಕೆ ನಿಮಗೆ ನೈತಿಕತೆ ಇದೆಯೇ?
ಆತ್ಮವಂಚಕತನಕ್ಕೆ ನಿಮಗಿಂತ ಬೇರೆ ಉದಾಹರಣೆ ಇಲ್ಲ. ಹೀಗಿರುವಾಗ ಇಂಥ ಪದ ಬಳಕೆ ನಿಮಗೆ ಶೋಭೆಯಲ್ಲ.#ಸಿದ್ದುಆತ್ಮಸಾಕ್ಷಿ
ಸಿದ್ದುಆತ್ಮಸಾಕ್ಷಿ ಹ್ಯಾಷ್ ಟ್ಯಾಗ್ನೊಂದಿಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, 2013ರಿಂದ 2017ರ ಅವಧಿಯಲ್ಲಿ ಕರ್ನಾಟಕದಲ್ಲಿ 3 ಸಾವಿರಕ್ಕೂ ರೈತರ ಆತ್ಮಹತ್ಯೆ ಪ್ರಕರಣಗಳು ನಡೆದಿತ್ತು. ಅನ್ನದಾತರು ಆತ್ಮಹತ್ಯೆ ಮಾಡಿಕೊಳ್ಳುವಾಗ ಸಿದ್ದರಾಮಯ್ಯ ಅವರ ಆತ್ಮಸಾಕ್ಷಿ ಎಲ್ಲಿತ್ತು? ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಆದಾಗ, ಅಂದಿನ ಗೃಹ ಸಚಿವ ಜಾರ್ಜ್ ಹಿಂದೆ ನಿಂತಾಗ ನಿಮ್ಮ ಆತ್ಮಸಾಕ್ಷಿ ಎಲ್ಲಿತ್ತು? ಎಂದು ಕುಟುಕಿದೆ.
ಪರಮೇಶ್ವರ್ಗೆ ವಂಚನೆ: ನಾನು ರೈತ ಪರ. ನಾನು ನಂಜುಂಡಸ್ವಾಮಿ ಅವರ ಶಿಷ್ಯ ಎಂದು ಭಾಷಣ ಬಿಗಿಯುವ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ರೈತರು ಕುಡಿದು ಸತ್ತರು ಎಂದು ಹೇಳಿಕೆ ನೀಡಿ ರೈತರಿಗೆ ಅವಮಾನ ಮಾಡಿದ್ದರು. ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಆತ್ಮಸಾಕ್ಷಿ? ಕೆಪಿಸಿಸಿಯ ಅಂದಿನ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರನ್ನು ಸೋದರನಂತೆ ನೋಡಿಕೊಂಡರು. ಆದರೆ ಸಿದ್ದರಾಮಯ್ಯ ಅವರು ದಲಿತ ನಾಯಕನನ್ನೇ ವಂಚನೆಯಿಂದ ಸೋಲಿಸಿದರು. ದಲಿತ ನಾಯಕನ ಬೆನ್ನಿಗೆ ಚೂರಿ ಹಾಕಿದ್ದು ಆತ್ಮಸಾಕ್ಷಿಯೇ? ಎಂದು ಬಿಜೆಪಿ ಟೀಕಿಸಿದೆ.
ಶಾದಿಭಾಗ್ಯ ಯೋಜನೆ: 70 ಲಕ್ಷದ ಹುಬ್ಲೋಟ್ ಕೈಗಡಿಯಾರವನ್ನು ಗಿಫ್ಟ್ ಹೆಸರಿನಲ್ಲಿ ತೆಗೆದುಕೊಂಡು ಕೈಗೆ ಕಟ್ಟಿಕೊಳ್ಳುವಾಗ ಸಿದ್ದರಾಮಯ್ಯ ಆತ್ಮಸಾಕ್ಷಿ ಎಲ್ಲಿತ್ತು? ತಾನು ಸಾಮಾಜಿಕ ನ್ಯಾಯದ ಪರ ಎಂದು ಘೋಷಿಸಿಕೊಂಡು ವಿದ್ಯಾರ್ಥಿಗಳ ಪ್ರವಾಸ ಯೋಜನೆಯಲ್ಲೂ ಜಾತಿ ಹುಡುಕಿದರು. ಶಾದಿಭಾಗ್ಯ ಯೋಜನೆ ತಂದು ಹೆಣ್ಣು ಮಕ್ಕಳಲ್ಲೂ ಧರ್ಮ ಹುಡುಕಿದರು. ಸಿದ್ದರಾಮಯ್ಯನವರೇ, ಇದೇನಾ ನಿಮ್ಮ ಆತ್ಮಸಾಕ್ಷಿ? ನಾನು ಪ್ರಾಮಾಣಿಕ, ಪ್ರಾಮಾಣಿಕ ಎಂದು ಸುಳ್ಳು ಹೇಳುತ್ತಲೇ ಅರ್ಕಾವತಿ ರೀಡು ಪ್ರಕರಣದಲ್ಲಿ ಸಾವಿರಾರು ಕೋಟಿ ಕೈ ಬದಲಾಗುವಂತೆ ನೋಡಿಕೊಂಡಿರಿ. ಆಹಾ ಎಂತಹ ಆತ್ಮಸಾಕ್ಷಿ ನಿಮ್ಮದು ಸಿದ್ದರಾಮಯ್ಯ!!! ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕ್ರಿಮಿನಲ್ ಪ್ರಕರಣ ಹಿಂದಕ್ಕೆ: ಬೆಂಗಳೂರು ನಗರದಲ್ಲಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಡ್ರಗ್ಸ್ ಹಾವಳಿ ಮಿತಿ ಮೀರಿತ್ತು. ಯುವಜನತೆಗೆ ದುಃಸ್ವಪ್ನವಾಗಿದ್ದ ದಂಧೆಯ ನಿಯಂತ್ರಣಕ್ಕೆ ಶ್ರಮಿಸದೇ ಸುಮ್ಮನಿದ್ದಿದ್ದು ಆತ್ಮಸಾಕ್ಷಿಯೇ? ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಎಸ್‌ಡಿಪಿಐ, ಪಿಎಫ್ಐನಂತಹ ಮತಾಂಧ ಸಂಘಟನೆಗಳ ಕಾರ್ಯಕರ್ತರ ಮೇಲಿದ್ದ ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಂಡರು. ಈಗ ಬಿಜೆಪಿ ಸರ್ಕಾರ ಇವುಗಳನ್ನು ಬ್ಯಾನ್ ಮಾಡಬೇಕು ಎಂದು ಆಗ್ರಹಿಸುವಾಗ ಸಿದ್ದು ಆತ್ಮಸಾಕ್ಷಿ ಎಲ್ಲಿತ್ತು? ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
ಸಾಲದ ಹೊರೆ: ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗಳನ್ನು ಪೂರ್ಣಗೊಳಿಸಲು ವಾರ್ಷಿಕ 10 ಸಾವಿರ ಕೋಟಿ ಅನುದಾನ ನೀಡುತ್ತೇನೆ ಎಂದವರು ಅಧಿಕಾರಕ್ಕೆ ಬಂದಾಗ ನೀಡಿದ್ದೆಷ್ಟು ಎಂದು ತಮ್ಮ ಆತ್ಮಸಾಕ್ಷಿ ಪ್ರಶ್ನಿಸಿಕೊಳ್ಳಲು ಸಿದ್ಧರಿರುವರೇ? ನಾನು ವಿತ್ತೀಯ ಶಿಸ್ತಿನ ಮಿತಿಯಲ್ಲೇ ಬಜೆಟ್ ಮಂಡಿಸಿದ್ದೇನೆ ಎನ್ನುತ್ತಿದ್ದ ಸಿದ್ದರಾಮಯ್ಯ ಅವರ ಕಾಲದಲ್ಲೇ ರಾಜ್ಯದ ಒಟ್ಟು ಸಾಲ 2 ಲಕ್ಷ ಕೋಟಿ ದಾಟಿತ್ತು. ಇದೆಂತಹ ಆತ್ಮಸಾಕ್ಷಿ ? ಎಂದು ಮೂದಲಿಸಿದೆ.
2012ರ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ನಿಮ್ಮ ಆಪ್ತರಿಗೆ ಟಿಕೆಟ್ ನೀಡಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹ್ಮದ್ ಸರಡಗಿ ಅವರನ್ನು ಅಡ್ಡಮತದಾನದ ಮೂಲಕ ಸೋಲಿಸಿದ್ದಿರಿ. ಇದು ನಿಮ್ಮ ಆತ್ಮಸಾಕ್ಷಿಯೇ? ಮಾಂಸ ತಿಂದು ಪವಿತ್ರ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿದ ಸಿದ್ದರಾಮಯ್ಯ ಅವರು ಈಗ ಚುನಾವಣೆಯ ಹೊಸ್ತಿಲಲ್ಲಿ ನಾನೂ ಹಿಂದೂ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಿಂದೂಗಳ ಭಾವನೆಗಳಿಗೆ ಧಕ್ಕೆಯಾದಾಗ ಸಿದ್ದರಾಮಯ್ಯ ಅವರ ಆತ್ಮಸಾಕ್ಷಿ ಎಲ್ಲಿತ್ತು?
ಕಾಂಗ್ರೆಸ್ ಸರ್ಕಾರ ಬಂದ ಬಳಿಕವೂ ಸಿದ್ದರಾಮಯ್ಯ ಅವರು ಮೂಲ ಕಾಂಗ್ರೆಸ್ಸಿಗರಾದ ಡಿ.ಕೆ ಶಿವಕುಮಾರ್, ರೋಶನ್ ಬೇಗ್, ಪರಮೇಶ್ವರ್ ಅವರನ್ನು ಒಂದೂವರೆ ವರ್ಷ ಸಂಪುಟದಿಂದ ಹೊರಗಿಟ್ಟರು. ಸಿದ್ದರಾಮಯ್ಯ ಅವರೇ, ಇದೇನಾ ನಿಮ್ಮ ಆತ್ಮಸಾಕ್ಷಿ? ಎಂದು ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಆರೋಪಗಳ ಸುರಿಮಳೆಗೈದಿದೆ.
ಇದನ್ನೂ ಓದಿ: ಶ್ರೀನಿವಾಸ್ ಗೌಡನಿಗೆ ಮಾನ ಮರ್ಯಾದೆ ಇದ್ದರೆ ರಿಸೈನ್ ಮಾಡಿ ರಾಜಕಾರಣ ಮಾಡಲಿ: ಹೆಚ್ಡಿಕೆ ವಾಗ್ದಾಳಿ