ETV Bharat / state

ಕಾಂಗ್ರೆಸ್ ಸೇ ಸಿಎಂಗೆ ಬಿಜೆಪಿ ಟಕ್ಕರ್​​​: ವಾಚ್ ಪೇ, ಪಿಲ್ಲೋ ಪೇ ಮೂಲಕ ತಿರುಗೇಟು..!

ಕಾಂಗ್ರೆಸ್​ ಪೇ ಸಿಎಂ ನಂತರ ಸೇ ಸಿಎಂ ಅಭಿಯಾನ ಪ್ರಾರಂಭಿಸಿದೆ. ಇದಕ್ಕೆ ಉತ್ತರ ಎಂಬಂತೆ ಬಿಜೆಪಿ ಟ್ವೀಟ್​​ ​ ಮಾಡಿ ವಾಚ್ ಪೇ, ಪಿಲ್ಲೋ ಪೇ ಎಂಬ ಹಳೇ ಹಗರಣಗಳ ಬಗ್ಗೆ ಪ್ರಶ್ನೆ ಮಾಡಿ ತಿರುಗೇಟು ನೀಡಿದೆ.

bjp-tweet-against-congress-say-cm-campaign
ಕಾಂಗ್ರೆಸ್ ಸೇ ಸಿಎಂಗೆ ಬಿಜೆಪಿ ಟಕ್ಕರ್
author img

By

Published : Oct 19, 2022, 5:26 PM IST

ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ಪೇ ವಾರ್ ಇಂದೂ ಕೂಡಾ ಮುಂದುವರೆದಿದೆ. ಕಾಂಗ್ರೆಸ್​ನ ಸೇ ಸಿಎಂ ಅಭಿಯಾನಕ್ಕೆ ಪ್ರತಿಯಾಗಿ ಬಿಜೆಪಿ ವಾಚ್ ಪೇ, ಪಿಲ್ಲೋ ಪೇ ಪ್ರಸ್ತಾಪಿಸಿದೆ. ಸಿದ್ದರಾಮಯ್ಯ ಅವರ ಪಂಚೆ ಮಾತ್ರ ಶುಭ್ರ, ಮೈಯೆಲ್ಲಾ ಭ್ರಷ್ಟಾಚಾರದ ಕೊಳೆ! ಎಂದು ಟೀಕಿಸಿ ಬಿಜೆಪಿ ಸರಣಿ ಟ್ವೀಟ್ ಮಾಡಿದೆ.

ಗಾಳಿಯಲ್ಲಿ ಗುಂಡು ಹೊಡೆದಂತೆ, ಕೇವಲ ಸಾಕ್ಷ್ಯ ರಹಿತ ಆರೋಪ ಮಾಡಿದ್ದೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಾಧನೆ!. ಸಿದ್ದರಾಮಯ್ಯ ಅವರೇ, ಯಾವ ಕಾರಣಕ್ಕಾಗಿ ನಿಮಗೆ ದುಬಾರಿ ವಾಚ್ ಉಡುಗೊರೆಯಾಗಿ ಸಿಕ್ಕಿದ್ದು? ನೀವು ವಾಚ್ ಪೇ ಮೂಲಕ ಪಡೆದ ಲಂಚವೆಷ್ಟು? ಟಾಯ್ಲೆಟ್ ಚೊಂಬಿನಲ್ಲಿ ಲಂಚ, ಹಾಸ್ಟೆಲ್ ದಿಂಬಿನಲ್ಲಿ ಲಂಚ!. ಸಿದ್ದರಾಮಯ್ಯ ಅವರೇ, ಪರಿಶಿಷ್ಟರ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್ ಅನುದಾನವನ್ನು ಕಬಳಿಸಿದವರು ನಿಮ್ಮ ಸಂಪುಟದಲ್ಲಿ ಸಚಿವರಾಗಿದ್ದು, ಮರೆತು ಹೋಯಿತೇ?. ಪಿಲ್ಲೋ ಪೇ ಹಗರಣದ ಸೂತ್ರಧಾರರು ನೀವೇ ಅಲ್ವೇ ಸಿದ್ದರಾಮಯ್ಯ? ಎಂದು ಬಿಜೆಪಿ ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.

ಸೇ ಡಿಕೆ: ಈಗ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು ಇಂಧನ ಸಚಿವರಾಗಿದ್ದಾಗ ಸೋಲಾರ್ ಹಗರಣದಲ್ಲಿ 'ಲಕ್ಷ್ಮಿ ಭಾಗ್ಯ' ಪಡೆದಿದ್ದು ಯಾರು?‌ ಸಂಬಂಧಿಕರೇ ಸೋಲಾರ್ ಉತ್ಪಾದಕರಾಗಿದ್ದು, ಯಾರ ಕೃಪೆಯಿಂದ? ಈ ಹಗರಣದಲ್ಲಿ ಲಕ್ಷ್ಮಿ ಪೇ ಯಿಂದ ಎಷ್ಟು ಲಂಚ, ಪೇ ಡಿಕೆ ಆಗಿದೆ?
ಮೌನವೇಕೆ? ಸೇ ಡಿಕೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

  • ಲೋಕಾಯುಕ್ತಕ್ಕೆ ಮೊಳೆ ಹೊಡೆದು, #ACB ಯನ್ನು #ActiveCollectionBureau ರೀತಿ ಬಳಸಿಕೊಂಡಿದ್ದೇ @siddaramaiah ಸಾಧನೆ.

    ಸಿದ್ದರಾಮಯ್ಯ ಅವರಿಗೆ ಅಂದು ತನಿಖೆ ಮಾಡಿಸುವ ತಾಕತ್ತು ಇರಲಿಲ್ಲವೇ ಅಥವಾ ತನಿಖೆಯಾದರೆ ಜೈಲಿಗೆ ಹೋಗಬೇಕಾದೀತು ಎಂಬ ಭಯ ಕಾಡಿತ್ತೇ?

    ಪಂಚೆ ಮಾತ್ರ ಶುಭ್ರ, ಮೈಯೆಲ್ಲಾ ಭ್ರಷ್ಟಾಚಾರದ ಕೊಳೆ!#ಭ್ರಷ್ಟರಾಮಯ್ಯ

    — BJP Karnataka (@BJP4Karnataka) October 19, 2022 " class="align-text-top noRightClick twitterSection" data=" ">

ಬ್ಯಾಂಕ್​ ಪೇ : ಕೆಪಿಸಿಸಿ ಈ ಒಂದು ಪ್ರಶ್ನೆಗೆ ಒಂದೇ ವಾಕ್ಯದಲ್ಲಿ ಉತ್ತರಿಸಲಿ ಎಂದು ಸವಾಲೆಸೆದಿರುವ ಬಿಜೆಪಿ ಸಿದ್ದರಾಮಯ್ಯ ಅವಧಿಯಲ್ಲಿ ಸಚಿವರಾಗಿದ್ದ ಆಂಜನೇಯ ಅವರ 'ವಿಜಯ ಬ್ಯಾಂಕ್' ಖಾತೆಯಲ್ಲಿ ಠೇವಣಿಯಾಗಿದ್ದು ಯಾರ ಹಣ? ಆಯ್ಕೆ : 1 - ಸಿದ್ದರಾಮಯ್ಯ 2 - ಅಂದಿನ ಕಾಂಗ್ರೆಸ್ ಸಿಎಂ 3 - ಇಂದಿನ ವಿಪಕ್ಷ ನಾಯಕ. ಬ್ಯಾಂಕ್ ಪೇ ಮೂಲಕ ಸಿದ್ದರಾಮಯ್ಯಗೆ ಎಷ್ಟು ಸಂದಾಯವಾಗಿದೆ? ಎಂದು ಪ್ರಶ್ನಿಸಿದೆ.

ಹುದ್ದೆಗೆ ಅರ್ಜಿ ಸಲ್ಲಿಸದವರ ನೇಮಕ: ಹುದ್ದೆಗಾಗಿ ಅರ್ಜಿ ಸಲ್ಲಿಸದವರನ್ನು ಲಂಚ ಪಡೆದು ನೇಮಕಾತಿ ಮಾಡಿದ್ದು‌ ಕಾಂಗ್ರೆಸ್. ರೈತರಿಗೆ ಮೋಸ ಮಾಡಿ ಸೋಲಾರ್ ಹಗರಣ ಮಾಡಿದ್ದು ಕಾಂಗ್ರೆಸ್. ಬಿಡಿಎಯನ್ನು ಭ್ರಷ್ಟರ ಅಂಗಳ ಮಾಡಿದ್ದು ಕಾಂಗ್ರೆಸ್. ಇದನ್ನು ಹಿರಿಯ ಯುವನಾಯಕ ರಾಹುಲ್‌ ಗಾಂಧಿ ಅವರ ಗಮನಕ್ಕೆ ಏಕೆ ತಂದಿಲ್ಲ ಭ್ರಷ್ಟರಾಮಯ್ಯ? ಲೋಕಾಯುಕ್ತಕ್ಕೆ ಮೊಳೆ ಹೊಡೆದು, ಎಸಿಬಿಯನ್ನು ಆ್ಯಕ್ಟಿವ್​ ಕಲೆಕ್ಷನ್ ಬ್ಯೂರೋ ರೀತಿ ಬಳಸಿಕೊಂಡಿದ್ದೇ ಸಿದ್ದರಾಮಯ್ಯ ಸಾಧನೆ.

ಸಿದ್ದರಾಮಯ್ಯ ಅವರಿಗೆ ಅಂದು ತನಿಖೆ ಮಾಡಿಸುವ ತಾಕತ್ತು ಇರಲಿಲ್ಲವೇ ಅಥವಾ ತನಿಖೆಯಾದರೆ ಜೈಲಿಗೆ ಹೋಗಬೇಕಾದೀತು ಎಂಬ ಭಯ ಕಾಡಿತ್ತೇ? ಪಂಚೆ ಮಾತ್ರ ಶುಭ್ರ, ಮೈಯೆಲ್ಲಾ ಭ್ರಷ್ಟಾಚಾರದ ಕೊಳೆ! ಎಂದು ಟೀಕಿಸಿ ಟ್ವೀಟ್ ಮಾಡಿದೆ.

ಇದನ್ನೂ ಓದಿ : Paycm ಆಯ್ತು ಈಗ ಕಾಂಗ್ರೆಸ್ ನಿಂದ Saycm ಅಭಿಯಾನ ಆರಂಭ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.