ETV Bharat / state

ಆನಂದ್​ ಸಿಂಗ್​, ಯಡಿಯೂರಪ್ಪ ಪುತ್ರರಿಗೆ ಬಿಜೆಪಿ ಟಿಕೆಟ್ ಘೋಷಣೆ ​ - ಕುಟುಂಬ ರಾಜಕಾರಣಕ್ಕೆ ವಿರೋಧ

ಶಿಕಾರಿಪುರದಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಮತ್ತು ವಿಜಯನಗದರಲ್ಲಿ ಆನಂದ್​ ಸಿಂಗ್​ ಪುತ್ರ ಸಿದ್ಧಾರ್ಥ್ ಸಿಂಗ್​ಗೆ ಬಿಜೆಪಿ ಟಿಕೆಟ್​ ನೀಡಿದೆ.

Etv Bharat
Etv Bharat
author img

By

Published : Apr 11, 2023, 10:55 PM IST

Updated : Apr 12, 2023, 10:32 AM IST

ಬೆಂಗಳೂರು: ಬಿಜೆಪಿ ತನ್ನ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನು ಇಂದು ಘೋಷಿಸಿದ್ದು, 189 ಜನರ ಹೆಸರು ಪ್ರಕಟಿಸಿದೆ. ಇದರಲ್ಲಿ 52 ಹೊಸ ಮುಖಗಳಿಗೆ ಟಿಕೆಟ್​ ನೀಡಲಾಗಿದೆ. ಲಿಂಗಾಯತ 51 ಮಂದಿ, ಒಕ್ಕಲಿಗರು 41 ಜನ, ಒಬಿಸಿ 32 ಮಂದಿ, ಎಸ್​ಸಿ 30, ಎಸ್​ಟಿ 16 ಹಾಗೂ 9 ವೈದ್ಯರು, ನಿವೃತ್ತ ಐಎಎಸ್, ಐಪಿಎಸ್ ಅಧಿಕಾರಿಗಳಿಗೆ, 8 ಮಂದಿ ಮಹಿಳೆಯರು, ಐವರು ವಕೀಲರು, ಮೂವರು ಶಿಕ್ಷಕರು, 9 ಸ್ನಾತಕೋತ್ತರ ಪದವೀಧರರಿಗೆ ಟಿಕೆಟ್ ಘೋಷಿಸಲಾಗಿದೆ.

ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವೀಯ, ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಕೆ.ಅಣ್ಣಾಮಲೈ, ಕೇಂದ್ರ ಗಣಿ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕುಟುಂಬ ರಾಜಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಬಜೆಪಿ ಎರಡು ಕಡೆ ರಾಜಕೀಯ ಹಿನ್ನೆಲೆಯುಳ್ಳವರ ಮಕ್ಕಳಿಗೆ ಟಿಕೆಟ್​ ಕೊಟ್ಟಿದೆ. ನಿರೀಕ್ಷೆಯಂತೆ ಬಿ.ವೈ.ವಿಜಯೇಂದ್ರ ಅವರಿಗೆ ಶಿಕಾರಿಪುರದಿಂದ ಟಿಕೆಟ್ ಸಿಕ್ಕಿದೆ. ವಿಜಯೇಂದ್ರ ಅವರು ವರುಣಾದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಸ್ವತಃ ಯಡಿಯೂರಪ್ಪ ಅವರೇ ಬೇಡ ಎಂದು ಹೇಳಿದ್ದರು. ಅದರಂತೆ ವರುಣಾ ಕ್ಷೇತಕ್ಕೆ ವಿ.ಸೋಮಣ್ಣ ಅವರಿಗೆ ಟಿಕೆಟ್​ ಕೊಡಲಾಗಿದೆ.

ಇನ್ನು ವಿಜಯನಗರ ಕ್ಷೇತ್ರಕ್ಕೆ ಆನಂದ್​ ಸಿಂಗ್ ಅವರ ಮಗ ಸಿದ್ದಾರ್ಥ್ ಸಿಂಗ್​ ಅವರಿಗೆ ಟಿಕೆಟ್​ ಕೊಡಲಾಗಿದೆ. ಆನಂದ್​ ಸಿಂಗ್​ ತಮ್ಮ ಮಗನ ಟಿಕೆಟ್‌ಗಾಗಿ ಲಾಬಿ ನಡೆಸಿದ್ದರು.

ಟಿಕೆಟ್ ಮಿಸ್ ಮಾಡಿಕೊಂಡ ಹಾಲಿ ಶಾಸಕರು: ಕೆಲ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್​ ಸಿಕ್ಕಿಲ್ಲ. ಹೊಸದುರ್ಗ ಕ್ಷೇತ್ರದ ಗೂಳಿಹಟ್ಟಿ ಶೇಖರ್, ಬೆಳಗಾವಿ ಉತ್ತರದ ಅನಿಲ್ ಬೆನಕೆ, ಪುತ್ತೂರಿನ ಸಂಜೀವ ಮಠಂದೂರು, ಕಾಪುವಿನ ಲಾಲಾಜಿ ಮೆಂಡನ್, ಉಡುಪಿಯ ರಘುಪತಿ ಭಟ್, ಕುಂದಾಪುರದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಟಿಕೆಟ್​ ಮಿಸ್​ ಆಗಿದೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆ: 189 ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ, ವರುಣದಲ್ಲಿ ಸಚಿವ ವಿ ಸೋಮಣ್ಣಗೆ ಟಿಕೆಟ್

Last Updated : Apr 12, 2023, 10:32 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.