ETV Bharat / state

ಉಪಸಮರದಲ್ಲಿ 15 ಕ್ಷೇತ್ರದಲ್ಲೂ ಬಿಜೆಪಿಗೆ ಜಯ: ನಳೀನ್ ಕುಮಾರ್ ಕಟೀಲ್ ವಿಶ್ವಾಸ - karnataka political news

ರಾಜ್ಯದ 15 ಕ್ಷೇತ್ರಗಳಿಗೆ ಅಕ್ಟೋಬರ್ 21 ರಂದು ಉಪಚುನಾವಣೆ ನಡೆಯಲಿದೆ. ಅನರ್ಹರ ಭವಿಷ್ಯವನ್ನು ನ್ಯಾಯಾಲಯ ಹಾಗೂ ಚುನಾವಣಾ ಆಯೋಗ ನಿರ್ಧರಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ರು.

ನಳೀನ್ ಕುಮಾರ್ ಕಟೀಲ್
author img

By

Published : Sep 21, 2019, 4:20 PM IST

ಬೆಂಗಳೂರು: 15 ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಸಿದ್ದವಿದ್ದು, ಎಲ್ಲಾ ಕ್ಷೇತ್ರಗಳಲ್ಲಿಯೂ ಪಕ್ಷ ಜಯಗಳಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಚುನಾವಣಾ ಆಯೋಗ 15 ಸ್ಥಾನಗಳಿಗೆ ಉಪಚುನಾವಣೆ ಘೋಷಿಸಿದೆ. ಅನರ್ಹ ಶಾಸಕರ ಬಗ್ಗೆ ನ್ಯಾಯಾಲಯ, ಚುನಾವಣಾ ಆಯೋಗ ತೀರ್ಮಾನ‌ ಕೈಗೊಳ್ಳಲಿದೆ. ಆದರೆ ನಮ್ಮ ಪಕ್ಷ ಚುನಾವಣೆಗೆ ಪೂರ್ಣ ಸಿದ್ಧತೆ ಮಾಡಿಕೊಂಡಿದ್ದು, ಎದುರಿಸಲು ಸಿದ್ಧವಿದೆ ಎಂದರು.

ಅನರ್ಹ ಶಾಸಕರ ಕೆಲ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಅಸಮಾಧಾನ ಸಹಜವಾದದ್ದು. ಯಾರೇ ಅಭ್ಯರ್ಥಿಯಾಗಲೀ ಕೆಲವೆಡೆ ಪರ-ವಿರೋಧಗಳು ಇದ್ದೇ ಇರುತ್ತವೆ. ಇವೆಲ್ಲವನ್ನು ಸರಿಪಡಿಸಿಕೊಂಡು ಪಕ್ಷ ಚುನಾವಣೆಗೆ ಸಿದ್ಧತೆ ನಡೆಸಲಿದೆ ಎಂದು ತಿಳಿಸಿದ್ರು.

ಈಗಾಗಲೇ 26 ಜಿಲ್ಲೆಗಳ ಪ್ರವಾಸ ಮಾಡಿದ್ದೇನೆ. ಎಲ್ಲಾ ಕಡೆ ಪಕ್ಷದ‌ ಪರ ಅಲೆ ಇದೆ. ‌ನಿಶ್ಚಿತವಾಗಿ ನಾವು 15 ಕ್ಷೇತ್ರಗಳಲ್ಲೂ ಗೆಲುವು ಸಾಧಿಸಲಿದ್ದೇವೆ ಎಂದರು.

ಅನರ್ಹ ಶಾಸಕರು ಬಿಜೆಪಿ ಸರ್ಕಾರ ರಚನೆಗೆ ತ್ಯಾಗ ಮತ್ತು ಪರಿಶ್ರಮ ಹಾಕಿದ್ದು ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದ್ರು.

Intro:

ಬೆಂಗಳೂರು:15 ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿ ಸಿದ್ದವಿದ್ದು ಎಲ್ಲಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಗಳಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗ 15 ಸ್ಥಾನಗಳಿಗೆ ಉಪಚುನಾವಣೆ ಘೋಷಣೆ ಮಾಡಿದೆ.ಅನರ್ಹ ಶಾಸಕರ ಬಗ್ಗೆ ನ್ಯಾಯಾಲಯ ಹಾಗು ಚುನಾವಣಾ ಆಯೋಗ ತೀರ್ಮಾನ‌ ಮಾಡಲಿದೆ ಆದರೆ ನಮ್ಮ ಪಕ್ಷ ಚುನಾವಣೆಗೆ ಪೂರ್ಣ ಸಿದ್ದತೆ ಮಾಡಿಕೊಂಡಿದೆ ಯಾವುದೇ ಸಂದರ್ಭದಲ್ಲಿ ಚುನಾವಣೆ ಬಂದರೂ ಎದುರಿಸಲು ಬಿಜೆಪಿ ಸಿದ್ಧವಿದೆ ಎಂದರು.

ಅನರ್ಹ ಶಾಸಕರ‌ಕೆಲ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರು ಅಸಮಧಾನಗೊಂಡಿದ್ದಾರೆ ಚುನಾವಣೆಗಳು ಬಂದಾಗ ಅಸಮಧಾನ ಸಹಜ.ಯಾರೇ ಅಭ್ಯರ್ಥಿಯಾಗಬೇಂದಾಗಲೂ ಕೆಲವು ಕಡೆ ಪರ-ವಿರೋಧ ಇದ್ದಿದ್ದೆ ಅದನ್ನು ಸರಿಪಡಿಸಿಕೊಂಡು ಪಕ್ಷ ಚುನಾವಣೆಗೆ ಸಿದ್ಧತೆ ನಡೆಸಲಿದೆ ಎಂದರು.

ರಾಜ್ಯಾಧ್ಯಕ್ಷರಾದ ನಂತರ ಎದುರಾಗುತ್ತಿರುವ ಮೊದಲ‌ ಚುನಾವಣೆ ಇದು,ರಾಜಕಾರಣದಲ್ಲಿ ಸವಾಲು ಇದ್ದೇ ಇರುತ್ತದೆ. ನನಗೆ ವಿಶ್ವಾಸವಿದೆ ಎಲ್ಲಾ 15 ಸ್ಥಾನಗಳನ್ನು ನಾವು ಗೆಲ್ಲಲಿದ್ದೇವೆ ‌ಈಗಾಗಲೇ 26 ಜಿಲ್ಲೆಗಳ ಪ್ರವಾಸ ಮಾಡಿದ್ದಾನೆ ಎಲ್ಲಾ ಕಡೆ ಪಕ್ಷದ‌ ಪರ ಅಲೆ ಇದರ ‌ನಿಶ್ಚಿತವಾಗಿ ನಾವು ಎಲ್ಲಾ ಕಡೆ ಗೆಲುವು ಸಾಧಿಸಲಿದ್ದೇವೆ ಎಂದರು.

ಅನರ್ಹ ಶಾಸಕರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ತ್ಯಾಗ ಮತ್ತು ಪರಿಶ್ರಮ ಹಾಕಿದ್ದು ಅವರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ, ಪಕ್ಷದ ಎಲ್ಲಾ ಪ್ರಮುಖರು ಸಭೆ ನಡೆಸಿ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಿದ್ದೇವೆ ಎಂದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.