ETV Bharat / state

ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡುವ ಮೂಲಕ ಕೋಮು ಗಲಭೆ ಸೃಷ್ಟಿಸಿದ್ರು: ಕಟೀಲ್​​

ಇಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮಾರಂಭವೊಂದರಲ್ಲಿ ಟಿಪ್ಪು ಜಯಂತಿ ರದ್ಧತಿ ಕುರಿತು ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ತಿರುಗೇಟು ನೀಡಿದರು. ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯು ವಿರುದ್ಧ ವಾಗ್ದಾಳಿ ನಡೆಸಿದರು.

BJP President Nalin Kumar Kateel
author img

By

Published : Nov 2, 2019, 4:46 PM IST

ದೊಡ್ಡಬಳ್ಳಾಪುರ: ಇಸ್ಲಾಂನಲ್ಲಿ ಜಯಂತಿ ಆಚರಣೆಗಳೇ ಇಲ್ಲ. ಇಸ್ಲಾಂ ಸಮುದಾಯದವರು ಯಾರು ಕೂಡ ಟಿಪ್ಪು ಜಯಂತಿಯನ್ನು ಆಚರಣೆ ಮಾಡಿ ಎಂದು ಯಾವುದೇ ಬೇಡಿಕೆ ಇಟ್ಟಿಲ್ಲ. ಆದರೆ ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಮಾಡುವ ಮೂಲಕ ಕೋಮು ಗಲಭೆ ಸೃಷ್ಟಿ ಮಾಡಿದ್ರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ದೊಡ್ಡಬಳ್ಳಾಪುರ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪು ಜಯಂತಿ ರದ್ಧತಿ ವಿಚಾರದ ಬಗ್ಗೆ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಆಗಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಮಾಡುವ ಮೂಲಕ ಕೋಮು ಗಲಭೆ ಸೃಷ್ಟಿ ಮಾಡಿದರು. ಇದರಿಂದ ಅನೇಕ ಗಲಾಟೆಗಳಾದವು ಎಂದು ಆರೋಪಿಸಿದರು.

ಇದೇ ವೇಳೆ ಮಂಗಳೂರಿನಲ್ಲಿ ಮಂಗಳೂರು ದರ್ಶನ ಎಂಬ ಪುಸ್ತಕ ಬಿಡುಗಡೆ ಮಾಡಿದರು. ಆ ಪುಸ್ತಕದಲ್ಲಿ ಟಿಪ್ಪು ಒಬ್ಬ ಮತಾಂಧ, ಕೋಮುವಾದಿ ಎಂದು ಉಲ್ಲೇಖಿಸಲಾಗಿದೆ. ಇದನ್ನು ಬಿಡುಗಡೆ ಮಾಡಿದ್ದು, ಪ್ರಿಂಟ್ ಮಾಡಿಸಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿಯಲ್ಲ. ಕಾಂಗ್ರೆಸ್​​ನಲ್ಲಿಯೇ ಟಿಪ್ಪು ಬಗ್ಗೆ ಭಿನ್ನಾಭಿಪ್ರಾಯಗಳಿವೆ ಎಂದು ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು.

ಇನ್ನು ಉಪ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಆರ್​ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಂದಾಗಿಲ್ಲ. ರೈತರು ಭಯ ಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದರು.

ಬಿಜೆಪಿ ಸರ್ಕಾರದ 100 ದಿನದ ಸಾಧನೆ ಏನು ಇಲ್ಲ ಎನ್ನುವ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿ, ಸಿದ್ದು ಸರ್ಕಾರದಲ್ಲಿ ಕೇವಲ ಕೊಲೆಗಳಾಗುತ್ತಿದ್ದವು. ಆದರೆ ನಮ್ಮ ಸರ್ಕಾರ ರಾಜ್ಯದ ಅಭಿವೃದ್ಧಿ, ನೆರೆಯನ್ನ ಸಮರ್ಪಕವಾಗಿ ನಿಭಾಯಿಸಿ ಶಾಂತಿ ನೆಲಸುವ ಕೆಲಸವನ್ನ ಮಾಡಿದೆ ಎಂದರು.

Intro:
ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡೋ ಮುಖಾಂತರ ಕೋಮುಗಲಭೆ ಸೃಷ್ಟಿಸಿದ್ರು

ಮಂಗಳೂರು ದರ್ಶನ ಪುಸ್ತಕ ಬಿಡುಗಡೆ ಮಾಡಿದ ಕಾಂಗ್ರೆಸ್ ಅದರಲ್ಲಿದೆ ಟಿಪ್ಪು ಮತಾಂದ ಅಂತಾ- ನಳೀನ್ ಕುಮಾರ್ ಆರೋಪ
Body:ದೊಡ್ಡಬಳ್ಳಾಪುರ: ಇಸ್ಲಾಂನಲ್ಲಿ ಜಯಂತಿ ಆಚರಣೆಗಳೇ ಇಲ್ಲ ಹೀಗಿದ್ದರೂ ಸಿದ್ದರಾಮಯ್ಯ ನವರು ರಾಜ್ಯದಲ್ಲಿ ಟಿಪ್ಪು ಜಯಂತಿ ಮಾಡೋ ಮೂಲಕ ಕೋಮುಗಲಭೆ ಸೃಷ್ಟಿ ಮಾಡಿದ್ರು ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟಿಲ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಬೂತ್ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ನಳಿನ್ ಕುಮಾರ್ ಕಟೀಲು . ಇನ್ನೂ ಟಿಪ್ಪು ಜಯಂತಿ ರದ್ದಿನ ಬಗ್ಗೆ ವಿರೋಧ ಪಕ್ಷಗಳ ಮಾಡುತ್ತಿರುವ ಟೀಕೆಯ ಬಗ್ಗೆ ಮಾತನಾಡಿದ ಕಟಿಲ್ ಕಾಂಗ್ರೆಸ್‌ನ ಮಾಜಿ ಸಚಿವರೇ ಮಂಗಳೂರು ದರ್ಶನ ಎಂಬ ಪುಸ್ತಕ ಬಿಡುಗಡೆ ಮಾಡಿದ್ರು. ಆ ಪುಸ್ತಕದಲ್ಲಿ ಟಿಪ್ಪು ಒಬ್ಬ ಮತಾಂದ. ಕೋಮುವಾದಿ ಎಂದು ಉಲ್ಲೇಖಿಸಲಾಗಿದೆ. ಇದನ್ನು ಬಿಡುಗಡೆ ಮಾಡಿದ್ದು, ಪ್ರಿಂಟ್ ಮಾಡಿಸಿದ್ದು ಕಾಂಗ್ರೆಸ್ ಸರ್ಕಾರವೇ ಹೊರತು ಬಿಜೆಪಿಯಲ್ಲ. ಕಾಂಗ್ರೆಸ್ ನಲ್ಲಿಯೇ ಟಿಪ್ಪು ಬಗ್ಗೆ ಭಿನ್ನಾಭಿಪ್ರಾಯಗಳಿವೆ ಅಂತಾ ವಿರೋಧ ಪಕ್ಷಗಳ ಟಿಕೆಗೆ ಉತ್ತರಿಸಿದ್ರು. ಜತೆಗೆ ಉಪಚುನಾವಣೆ ಯಲ್ಲಿ ೧೫ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಗಳಿಸಲಿದೆ ಎಂದ ನಳಿನ್ ಆರ್ ಸಿಇಪಿ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮುಂದಾಗಿಲ್ಲ. ರೈತರು ಯಾವುದೇ ಭಯಪಡುವ ಅಗತ್ಯವಿಲ್ಲ ಅಂತಾ ಅಭಯ ನೀಡಿದ್ರು. ಜತೆಗೆ ಬಿಜೆಪಿ ಸರ್ಕಾರ ೧೦೦ ದಿನದ ಸಾಧನೆ ಏನು ಇಲ್ಲ ಎನ್ನುವ ಸಿದ್ದರಾಮಯ್ಯ ಆರೋಪದ ಬಗ್ಗೆ ಮಾತನಾಡಿದ ಕಟಿಲ್ ಸಿದ್ದು ಸರ್ಕಾರದಲ್ಲಿ ಕೇವಲ ಕೊಲೆಗಳನ್ನ ನಡೆಸುತ್ತಿದ್ರು, ಆದ್ರೆ ನಮ್ಮ ಸರ್ಕಾರ ರಾಜ್ಯದ ಅಭಿವೃದ್ದಿ, ನೆರೆಯನ್ನ ಸಮರ್ಪಕವಾಗಿ ನಿಭಾಯಿಸಿ, ಶಾಂತಿ ನೆಲಸುವ ಕೆಲಸವನ್ನ ಬಿಎಸ್‌ವೈ ಮಾಡಿದ್ದಾರೆ ಅಂತಾ ಟಾಂಗ್ ನೀಡಿದ್ರು.

ಬೈಟ್: ನಳಿನ್ ಕುಮಾರ್ ಕಟಿಲ್, ಬಿಜೆಪಿ ರಾಜ್ಯಾಧ್ಯಕ್ಷ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.