ETV Bharat / state

ಅಂದು ಇಂದಿರಾ, ಸಂಜಯ್ ಬ್ರಿಗೇಡ್ ಹೆಸರಲ್ಲಿ ನಡೆದಿತ್ತು, ಇಂದು ನಾನು ಜನಸಂಖ್ಯೆ ನಿಯಂತ್ರಣದ ಚರ್ಚೆ ಹುಟ್ಟು ಹಾಕಿದ್ದೇನೆ.. ಸಿ ಟಿ ರವಿ

ನಾನು ಇಷ್ಟು ಹೇಳಿದ್ದಕ್ಕೆ ಕೆಲವರಿಗೆ ಉರಿ ಪ್ರಾರಂಭವಾಗಿದೆ. ಇನ್ನು, ದೇಶ ಬಿಟ್ಟು ಕಳಿಸಿ ಎಂದರೆ ಎಷ್ಟಾಗಬೇಡ. ನಾನು ಹೇಳಿದ ತಕ್ಷಣ ಎಲ್ಲವೂ ಆಗಿಬಿಡುತ್ತಾ? ನಾನು ವಿಚಾರವನ್ನು ಸಾರ್ವಜನಿಕವಾಗಿ ಬಿಟ್ಟಿದ್ದೇನೆ. ಪಾರ್ಟಿ ಫೋರಂನಲ್ಲಿ ಚರ್ಚೆಯಾಗಬೇಕು. ನಂತರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು‌. ಬಳಿಕ ಸದನದಲ್ಲಿ ಚರ್ಚೆಯಾಗಲಿದೆ. ಆ ನಂತರ ತಾನೇ ಅದು ನಿರ್ಣಯ ಆಗುವುದು. ಅದು ಎಲ್ಲರ ಸಹಮತ ಇದ್ದರೆ ನಿರ್ಣಯವಾಗುತ್ತದೆ..

author img

By

Published : Jul 14, 2021, 4:42 PM IST

BJP national general secretary CT Ravi on population control
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ

ಬೆಂಗಳೂರು : ಕೆಲವು ಪಕ್ಷಕ್ಕೆ ದೇಶಕ್ಕಿಂತ ರಾಜಕೀಯವೇ ಮುಖ್ಯ. ಆದರೆ, ನಮಗೆ (ಬಿಜೆಪಿಗೆ) ರಾಜಕೀಯ ಮುಖ್ಯವಲ್ಲ, ದೇಶಮುಖ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ದೇಶಕ್ಕೆ‌ ಸ್ವಾತಂತ್ರ್ಯ ಬಂದಾಗ 30 ಕೋಟಿ ಜನಸಂಖ್ಯೆಯಿತ್ತು. ಈಗ ದೇಶದ ಜನಸಂಖ್ಯೆ 140 ಕೋಟಿ ಇದೆ. ಇಂದು ರಾಜ್ಯದ ಜನಸಂಖ್ಯೆ 7 ಕೋಟಿ ದಾಟಿದೆ. ಇದರಿಂದ ಪ್ರಾಕೃತಿಕ ಸಂಪನ್ಮೂಲ ಹೆಚ್ಚಾಗಲು ಸಾಧ್ಯವಿಲ್ಲ.

ಗುಡ್ಡಗಳು‌ ಮಾಯವಾಗಿವೆ. ಅರಣ್ಯ ಮಾಯವಾಗಿವೆ. ಅಂದು ಒಂದು ಸಾವಿರಕ್ಕೆ 24 ಜನ ಸಾವಿನ ಸರಾಸರಿ ಇತ್ತು. ಇವತ್ತು ಸಾವಿನ ಸರಾಸರಿ ಕೇವಲ 7 ಮಾತ್ರ. ಅದಕ್ಕೆ ಜನಸಂಖ್ಯೆ ಮಿತಿ ಬಗ್ಗೆ ಚರ್ಚೆ ಹುಟ್ಟು ಹಾಕಬೇಕಿದೆ ಎಂದು ಹೇಳಿದರು.

ಕಾಂಗ್ರೆಸ್ ಚರ್ಚೆ ಮಾಡದೆ ಆಪರೇಷನ್ ಮಾಡಿದೆ : ಕಾಂಗ್ರೆಸ್ ಚರ್ಚೆ ಮಾಡದೆ ಆಪರೇಷನ್ ಮಾಡಿದೆ. ಅಂದು ಇಂದಿರಾ ಬ್ರಿಗೇಡ್, ಸಂಜಯ್ ಬ್ರಿಗೇಡ್ ಹೆಸರಲ್ಲಿ ನಡೆದಿತ್ತು. ಆದರೆ, ನಾನು ಜನಸಂಖ್ಯೆ ನಿಯಂತ್ರಣದ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದೇನೆ. ಸಾರ್ವಜನಿಕವಾಗಿ ಚರ್ಚೆಯಾಗಲಿ. ಸದನವೇ ಸಾರ್ವಭೌಮವಾದುದು. ಸದನದಲ್ಲೇ ಚರ್ಚೆಯಾಗಲಿ. ಇದರ ಸಾಧಕ-ಬಾಧಕಗಳ ಕುರಿತು ಚರ್ಚೆಯಾಗಲಿ ಎಂದರು.

ನಾನು ಇಷ್ಟು ಹೇಳಿದ್ದಕ್ಕೆ ಕೆಲವರಿಗೆ ಉರಿ ಪ್ರಾರಂಭವಾಗಿದೆ. ಇನ್ನು, ದೇಶ ಬಿಟ್ಟು ಕಳಿಸಿ ಎಂದರೆ ಎಷ್ಟಾಗಬೇಡ. ನಾನು ಹೇಳಿದ ತಕ್ಷಣ ಎಲ್ಲವೂ ಆಗಿಬಿಡುತ್ತಾ? ನಾನು ವಿಚಾರವನ್ನು ಸಾರ್ವಜನಿಕವಾಗಿ ಬಿಟ್ಟಿದ್ದೇನೆ. ಪಾರ್ಟಿ ಫೋರಂನಲ್ಲಿ ಚರ್ಚೆಯಾಗಬೇಕು. ನಂತರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಬೇಕು‌. ಬಳಿಕ ಸದನದಲ್ಲಿ ಚರ್ಚೆಯಾಗಲಿದೆ. ಆ ನಂತರ ತಾನೇ ಅದು ನಿರ್ಣಯ ಆಗುವುದು. ಅದು ಎಲ್ಲರ ಸಹಮತ ಇದ್ದರೆ ನಿರ್ಣಯವಾಗುತ್ತದೆ ಎಂದು ಹೇಳಿದರು.

ಜನಸಂಖ್ಯೆ ನಿಯಂತ್ರಣ ಕಾಯ್ದೆ ತರಬೇಕು : ಜನಸಂಖ್ಯೆ ನಿಯಂತ್ರಣ ಕಾಯ್ದೆ ತರಬೇಕು. ಇದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆ ಮಾಡುತ್ತೇನೆ. ಮಕ್ಕಳಿರಬೇಕು ಮನೆತುಂಬ ಅನ್ನೋದು ಅವತ್ತಿನ ಕಾಲ. ಆದರೆ, ಇವತ್ತಿನ ಕಾಲ ಬದಲಾಗಿದೆ. ಲೀವಿಂಗ್ ಟುಗೆದರ್ ಇಚ್ಛೆ ಪಡುವವರು ಇದ್ದಾರೆ ಎಂದು ಹೇಳಿದರು.

ಸಮಾನ ನಾಗರಿಕ ಕಾಯ್ದೆ ಜಾರಿಗೆ ಬರಲಿ : ಜಾತಿ ಗಣತಿಯನ್ನ ಹೊರ ತರಲು ಪ್ರಯತ್ನ ನಡೆದಿದೆ. 2015 ರಿಂದ 2019ರವರೆಗೆ ಯಾಕೆ ಹೊರಗೆ ತರಲಿಲ್ಲ. ಜಾತಿ‌ ಗಣತಿ ಸರಿಯಿಲ್ಲವೆಂದು ಕಾಂಗ್ರೆಸ್​ನವರೇ ತರಲಿಲ್ಲ. ಸಂಪುಟದಲ್ಲೂ ಅದಕ್ಕೆ ಸಹಮತ ಸಿಕ್ಕಿರಲಿಲ್ಲ. ನಾಲ್ಕು ವರ್ಷ ಹಾಗೇ ಪೆಂಡಿಂಗ್ ಇಟ್ಟಿದ್ದರು. ಆಗ ಕಾಂತರಾಜು ಆಯೋಗದ ಅಧ್ಯಕ್ಷರಾಗಿದ್ದರು. ಅವತ್ತೇ ವರದಿಗೆ ಅಂದಿನ ಸರ್ಕಾರ ಅನುಮತಿ ನೀಡಿರಲಿಲ್ಲ.
ಆಗ ಇದ್ದ ಪಕ್ಷ ಯಾಕೆ ಮಂಡಿಸಲಿಲ್ಲ. ನಿಜವಾದ ಕಾಳಜಿಯಿದ್ದರೆ ಮಂಡಿಸಬಹುದಿತ್ತು. ಅವರಿಗೆ ನಿಜವಾದ ಕಾಳಜಿಯಿರಲಿಲ್ಲ. ಪೌರತ್ವ ಕಾಯ್ದೆಗೆ ವಿರೋಧವೇಕೆ?. ಹಿಂದು, ಮುಸ್ಲಿಂ ಬೇಧ ಭಾವವೇಕೆ?. ಸಮಾನ ನಾಗರಿಕ ಕಾಯ್ದೆ ಜಾರಿಗೆ ಬರಲಿ. ದೇಶದಲ್ಲಿರುವವರು ಎಲ್ಲರೂ ಒಂದೇ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.