ETV Bharat / state

ಬಿಜೆಪಿ ಎಂದರೆ ಭ್ರಷ್ಟ ಜನತಾ ಪಕ್ಷ: ಸುರ್ಜೇವಾಲಾ ಆಕ್ರೋಶ - ಈಟಿವಿ ಭಾರತ ಕನ್ನಡ

ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ರಣದೀಪ್ ಸಿಂಗ್ ಸುರ್ಜೇವಾಲಾ - ಬಿಜೆಪಿ ಎಂದರೆ ಭ್ರಷ್ಟ ಜನತಾ ಪಕ್ಷ - ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಕಾಂಗ್ರೆಸ್​ ಪ್ರತಿಭಟನೆ

bjp-means-corrupt-janata-party-says-aicc-secretary-randeep-singh-surjewala
ಬಿಜೆಪಿ ಎಂದರೆ ಭ್ರಷ್ಟ ಜನತಾ ಪಕ್ಷ: ಸುರ್ಜೇವಾಲಾ
author img

By

Published : Mar 4, 2023, 7:15 PM IST

ಬೆಂಗಳೂರು : ಬಿಜೆಪಿ ತನ್ನ ಹೆಸರನ್ನು ಭಾರತೀಯ ಜನತಾ ಪಕ್ಷದಿಂದ, ಭ್ರಷ್ಟ ಜನತಾ ಪಕ್ಷ ಎಂದು ಮರುನಾಮಕರಣ ಮಾಡಿಕೊಳ್ಳಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅಭಿಪ್ರಾಯಪಟ್ಟಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ವಿರುದ್ಧ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೊಮ್ಮಾಯಿ ಅವರ ಸರ್ಕಾರವನ್ನು ಭ್ರಷ್ಟಾಸುರ ಬೊಮ್ಮಾಯಿ ಸರ್ಕಾರ ಎಂದು ಕರೆಯಬೇಕು. ಬಿಜೆಪಿ ಹಾಗೂ ಬೊಮ್ಮಾಯಿ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ದೇಶದಲ್ಲೇ ಭ್ರಷ್ಟಾಚಾರದ ಮಾದರಿ ನೀಡಿದೆ. ಈ ಸರ್ಕಾರವನ್ನು ಶೇ 40ರಷ್ಟು ಸರ್ಕಾರ, ಇಲ್ಲಿನ ಮುಖ್ಯಮಂತ್ರಿಯನ್ನು ಪೇಸಿಎಂ ಎಂದು ಕರೆಯುತ್ತಾರೆ. ಈ ಮಾತನ್ನು ನಾವು ಮಾತ್ರ ಹೇಳುತ್ತಿಲ್ಲ. ರಾಜ್ಯ ಗುತ್ತಿಗೆದಾರರ ಸಂಘ ಪ್ರಧಾನಿಗೆ ಪತ್ರ ಬರೆದು ಈ ಸರ್ಕಾರದಲ್ಲಿ ಕಮಿಷನ್ ನೀಡದೇ ಏನು ನಡೆಯುವುದಿಲ್ಲ ಎಂದು ಹೇಳಿದ್ದಾರೆ ಎಂದರು.

ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ ಸುರ್ಜೇವಾಲಾ: ಈ ಬಿಜೆಪಿ ಸರ್ಕಾರ ಕೇವಲ ಲಂಚದ ಸಿದ್ಧಾಂತವನ್ನು ಹೊಂದಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಬಿಜೆಪಿ ಕಾರ್ಯಕರ್ತನಾದರೂ ಆತ ತಾನು ಮಾಡಿದ ಕೆಲಸಕ್ಕೆ ಬಿಲ್ ಕೇಳಿದಾಗ ಶೇ 40ರಷ್ಟು ಲಂಚ ಕೇಳಿದರು. ಅದನ್ನು ನೀಡಲಾಗದೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸಂತೋಷ್ ಪಾಟೀಲ್ ಅವರ ಮನೆಗೆ ಹೋದಾಗ ಅವರು ಬಿಜೆಪಿ ಸದಸ್ಯನಾಗಿ ಬೂತ್ ಮಟ್ಟದಲ್ಲಿ ಕೆಲಸ ಮಾಡಿದ್ದವನಿಂದಲೇ ಬಿಜೆಪಿ ಸರ್ಕಾರ ಲಂಚ ಕೇಳಿ ಅವರ ಪ್ರಾಣ ಬಲಿ ಪಡೆದಿದೆ ಎಂದು ಹೇಳಿದರು.

ನಾಲ್ಕು ದಿನಗಳ ಹಿಂದೆ ರಾಜ್ಯಕ್ಕೆ ಬಂದಿದ್ದ ಮೋದಿ ಅವರು ಬೆಳಗಾವಿಗೆ ಭೇಟಿ ನೀಡಿದ್ದರು. ಆದರೆ, ಸಂತೋಷ್ ಪಾಟೀಲ್ ನಿವಾಸಕ್ಕೆ ಭೇಟಿ ನೀಡಲಿಲ್ಲ. ಬಿಜೆಪಿ ತನ್ನದೇ ಕಾರ್ಯಕರ್ತನನ್ನು ಬಿಡಲಿಲ್ಲ, ಇನ್ನು ಬೇರೆಯವರನ್ನು ಬಿಡುತ್ತಾರಾ? ಇನ್ನು ಬೆಂಗಳೂರಿನ ಗುತ್ತಿಗೆದಾರ ಪ್ರಶಾಂತ್, ತುಮಕೂರಿನಲ್ಲಿ ಗುತ್ತಿಗೆದಾರ ರಾಜೇಂದ್ರ ಅವರು ಲಂಚ ನೀಡಲಾಗದೇ ಪ್ರಾಣ ಬಿಟ್ಟಿದ್ದಾರೆ. ಈ 40ರಷ್ಟು ಸರ್ಕಾರದ ಬಗ್ಗೆ ಈ ಪರಿವಾರದವರನ್ನು ಕೇಳಬೇಕು. ಬೊಮ್ಮಾಯಿ ಅವರೇ, ಕಟೀಲ್ ಅವರೇ, ನಡ್ಡಾ ಅವರೇ, ಅಮಿತ್ ಶಾ ಅವರೇ, ನಿಮ್ಮ ಧನದಾಹ ಯಾವಾಗ ನೀಗಲಿದೆ? ಎಂದು ಹೇಳಿ. ಬೆಂಗಳೂರಿನ ಜನರೆಲ್ಲಾ ಸೇರಿ ಆ ಹಣವನ್ನು ಸಂಗ್ರಹಿಸಿ ನೀಡುತ್ತೇವೆ ಎಂದು ಟೀಕಿಸಿದರು.

ಬಿಜೆಪಿ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ : ನೀವು ಸಂತೋಷ್ ಪಾಟೀಲ್, ಪ್ರಶಾಂತ್, ರಾಜೇಂದ್ರ ಅವರನ್ನು ಅವರ ಕುಟುಂಬದವರಿಗೆ ವಾಪಸ್ ನೀಡಿ. ಈ 40ರಷ್ಟು ಕಮಿಷನ್ ಬಗ್ಗೆ ತಿಳಿಯಬೇಕಾದರೆ ಶಾಲಾ ಒಕ್ಕೂಟ ರೂಪ್ಸಾ ಸಂಸ್ಥೆಯನ್ನು ಕೇಳಿ. ಪ್ರಧಾನಮಂತ್ರಿಗಳು ರಾಜ್ಯಕ್ಕೆ 8 ಬಾರಿ ಆಗಮಿಸಿದ್ದು, ಇದುವರೆಗೂ ಕೆಂಪಣ್ಣ ಅವರ ಪತ್ರಕ್ಕೆ ಉತ್ತರ ನೀಡಿಲ್ಲ. ಈ ಸರ್ಕಾರದ ಕಮಿಷನ್ ಬಗ್ಗೆ ಮಠಾಧೀಶರು 30ರಷ್ಟು ಕಮಿಷನ್ ನೀಡಬೇಕು ಎಂದಿದ್ದಾರೆ. ಕೆಂಪಣ್ಣ ಅವರು ತುಮಕೂರಿನ ಬಿಜೆಪಿ ಶಾಸಕರ ಅಕ್ರಮದ ಬಗ್ಗೆ ಆಡಿಯೋ ದಾಖಲೆ ಬಿಡುಗಡೆ ಮಾಡಿದರು. 90 ಲಕ್ಷ ಲಂಚ ಪಡೆದ ಬಗ್ಗೆ ಮಾಹಿತಿ ನೀಡಿದರು. ಅವರ ವಿರುದ್ಧ ಯಾವ ಕ್ರಮ ಕೈಗೊಂಡರು? ಈ ಸರ್ಕಾರದ 8 ಸಚಿವರ ವಿರುದ್ಧ ದಾಖಲೆ ಇವೆ. ಎಲ್ಲರೂ ಸೇರಿ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು.

ಅಮಿತ್ ಶಾ ಹಾಗೂ ಬೊಮ್ಮಾಯಿ ಅವರು ಭ್ರಷ್ಟಾಚಾರದ ಆರೋಪದ ಬಗ್ಗೆ ಸಾಕ್ಷಿ ಕೇಳುತ್ತಿದ್ದಿರಿ. ನಿಮ್ಮ ಸರ್ಕಾರ ಮೈಸೂರು ಸ್ಯಾಂಡಲ್ ಸೋಪಿನ ಚಂದನದ ಸುವಾಸನೆಯಲ್ಲೂ ಭ್ರಷ್ಟಾಚಾರದ ದುರ್ಗಂಧವನ್ನು ಹರಡಿದ್ದೀರಿ. ನಿಮಗೆ ನಾಚಿಕೆಯಾಗಬೇಕು. ಅವರ ಪುತ್ರ 40 ಲಕ್ಷ ಹಣದೊಂದಿಗೆ ಸಿಕ್ಕಿಬಿದ್ದಿದ್ದರೆ, ಬಿಜೆಪಿ ನಾಯಕರು ಮಕ್ಕಳಿಂದ ತಪ್ಪಾಗಿದೆ ಎಂದು ಹೇಳುತ್ತಿದ್ದಾರೆ. ಅವರ ಕಚೇರಿಯಿಂದ 1.20 ಕೋಟಿ, ಮನೆಯಲ್ಲಿ 6 ಕೋಟಿ ಹಣದ ಕಂತೆಗಳು ಸಿಕ್ಕರೂ ಸಣ್ಣ ತಪ್ಪಾಗಿದೆ ಎಂದಿದ್ದಾರೆ. ಅವರ ಮನೆಯಲ್ಲಿ ಸಿಕ್ಕಿರುವ ಹಣ ಅವರದಲ್ಲ, ಬಿಜೆಪಿ ಹಾಗೂ ಅದರ ನಾಯಕರು ರಾಜ್ಯದ ಜನರಿಂದ ಲೂಟಿ ಮಾಡುತ್ತಿರುವ ಹಣವಾಗಿದೆ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅಕ್ರಮದ ಬಗ್ಗೆ, ಬಿಜೆಪಿಯ ಯತ್ನಾಳ್ ಅವರು ಮುಖ್ಯಮಂತ್ರಿ ಕುರ್ಚಿ 2500 ಕೋಟಿಗೆ ಮಾರಾಟವಾಗಿದೆ ಎಂದರು. ಯತ್ನಾಳ್ ಅವರು ಸುಳ್ಳು ಹೇಳಿದ್ದರೆ ಅವರನ್ನು ಪಕ್ಷದಿಂದ ಕಿತ್ತುಹಾಕಿಲ್ಲ ಯಾಕೆ? ಅವರು ಸತ್ಯ ಹೇಳಿದ್ದರೆ ಬೊಮ್ಮಾಯಿ ಅವರು ಎಷ್ಟು ಹಣ ಕೊಟ್ಟು ಸಿಎಂ ಆಗಿದ್ದಾರೆ ಎಂದು ಹೇಳಬೇಕು. ಬಿಜೆಪಿ ನಾಯಕರ ಪುತ್ರರು ಸಿಕ್ಕಿಬಿದ್ದಿರುವುದು ಇದೇ ಮೊದಲಲ್ಲ. ಈ ರಾಜ್ಯದಲ್ಲಿ ಈ ಹಿಂದೆ ವಿಜಯೇಂದ್ರ ಟ್ಯಾಕ್ಸ್ ಹೆಚ್ಚು ಜನಪ್ರಿಯವಾಗಿತ್ತು. ಬಿಜೆಪಿಯ ಈ ಹಿಂದಿನ ಸಿಎಂ ಅವರ ಪುತ್ರರಿಗೆ ಗುತ್ತಿಗೆದಾರರು ಲಂಚ ನೀಡಬೇಕಿತ್ತು. ಆ ಮೂಲಕ ಬಿಜೆಪಿ ನಾಯಕರ ಪುತ್ರರ ಅಕ್ರಮಗಳು ಹೆಚ್ಚಾಗಿವೆ ಎಂದು ತಿಳಿಸಿದರು.

ಸರ್ಕಲ್ ಇನ್ಸ್​​​ಪೆಕ್ಟರ್ ನಂದೀಶ್ ಅವರ ಸಾವಿನ ಪ್ರಕರಣದ ಸಮಯದಲ್ಲಿ ಬಿಜೆಪಿ ಮಂತ್ರಿಗಳೇ ಲಂಚ ನೀಡಿ ಪೋಸ್ಟಿಂಗ್ ಪಡೆದಿರುವ ಬಗ್ಗೆ ಮಾತನಾಡಿದ್ದಾರೆ. ಇವರು ಟೆಂಡರ್ ಮಾರುತ್ತಾರೆ, ಶಾಲೆಗಳ ಅನುದಾನ, ಮಠಗಳಿಗೆ ನೀಡುವ ಅನುದಾನ, ವರ್ಗಾವಣೆ, ಪೋಸ್ಟಿಂಗ್ ನಲ್ಲಿ ಲೂಟಿ ಮಾಡುತ್ತಾರೆ. ಅಲ್ಲದೆ ರಾಜ್ಯದ ಯುವಕರ ಭವಿಷ್ಯವನ್ನು ಮಾರುತ್ತಾರೆ. ಪಿಎಸ್​​ಐ ನೇಮಕಾತಿಯಲ್ಲಿ ಅಕ್ರಮ ಮಾಡಿದರು. ಆಗಿನ ಗೃಹಮಂತ್ರಿ, ಮುಖ್ಯಮಂತ್ರಿಗಳ ವಿಚಾರಣೆ ನಡೆದಿಲ್ಲ ಯಾಕೆ? ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ಬಿಜೆಪಿ ಸರ್ಕಾರ ಮಾರಾಟ ಮಾಡಿಲ್ಲವೇ? ಜೆಇಇ ಹುದ್ದೆ, ಸಹಾಯಕ ರಿಜಿಸ್ಚ್ರಾರ್, ಜಿಲ್ಲಾ ಸಹಕಾರಿ ಬ್ಯಾಂಕ್ ಹುದ್ದೆಗಳನ್ನು ಮಾರಾಟ ಮಾಡಿಲ್ಲವೇ? ಇವರು ಪ್ರತಿಯೊಂದರಲ್ಲೂ ಹಣ ಲೂಟಿ ಮಾಡುತ್ತಾ ರಾಜ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯ ಭ್ರಷ್ಟಾಚಾರದಿಂದ ಮುಕ್ತ ಮಾಡುವ ಸಮಯ ಬಂದಿದೆ: ಇಂದು ಬಿಜೆಪಿಯ ಭ್ರಷ್ಟಾಚಾರದಿಂದ ರಾಜ್ಯವನ್ನು ಮುಕ್ತಿ ಮಾಡುವ ಸಮಯ ಬಂದಿದೆ. ನಾವೆಲ್ಲರೂ ಸೇರಿ ಇಂದು ಕೇವಲ ಸರ್ಕಾರ ಬದಲಿಸಿದರೆ ವ್ಯವಸ್ಥೆ ಬದಲಾಗುವುದಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ಮಾಡಿಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸುವ ಸಂಕಲ್ಪ ಮಾಡಬೇಕು. ಈ ಅಕ್ರಮದಲ್ಲಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ತನಿಖೆ ಮಾಡಿ ಅವರಿಗೆ ಶಿಕ್ಷೆ ನೀಡಲಾಗುವುದು. ರಾಜ್ಯದ ಯುವಕರ ಭವಿಷ್ಯ ನಾಶವಾಗಲು ಬಿಡಬಾರದು. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಅವರ ಸರ್ಕಾರವನ್ನು ಮುಗಿಸುವವರಿಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ : ಈ ಹಿಂದೆ ನನ್ನ ಕಡೆಯಿಂದ ಲಕ್ಷ್ಮಿ ಹೆಬ್ಬಾಳ್ಕರ್​ 50 ಸಾವಿರ ಹಣ ಪಡೆದಿದ್ದರು: ಸಂಜಯ್ ಪಾಟೀಲ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.