ಬೆಂಗಳೂರು: ವಿಜಯಪುರ ಮಹಾನಗರ ಪಾಲಿಕೆಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ವಿಜಯಶಾಲಿಯಾದ ನೂತನ ಸದಸ್ಯರು ಹಾಗೂ ಜಿಲ್ಲೆಯ ಶಾಸಕರು ಇಂದು ಮಲ್ಲೇಶ್ವರಂ ನಲ್ಲಿರುವ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅಭಯ್ ಪಾಟೀಲ್, ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ್, ವಿಭಾಗ ಪ್ರಭಾರಿ ಚಂದ್ರಶೇಖರ್ ಕವಟಗಿ ಮತ್ತು ಪಕ್ಷದ ಮುಖಂಡರು ವಿಜಯಪುರ ಪಾಲಿಕೆಯಲ್ಲಿ ಸ್ಥಾನಗಳನ್ನು ಗೆದ್ದ ಅಭ್ಯರ್ಥಿಗಳು, ಸ್ಥಳೀಯ ಮುಖಂಡರು ಹಾಗೂ ರಾಜ್ಯದ ಮುಖಂಡರನ್ನು ಅಭಿನಂದಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು. ಇದೇ ಸಂದರ್ಭದಲ್ಲಿ ನೂತನ ಸದಸ್ಯರನ್ನು ಅಭಿನಂದಿಸಲಾಯಿತು.
ಸಂಘಟಿತ ಪ್ರಯತ್ನದಿಂದ ಗೆಲುವು: ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ನಿರ್ಮಲ್ ಕುಮಾರ್ ಸುರಾಣ, ಶಾಸಕರು ಮತ್ತು ಇತರ ಮುಖಂಡರ ಸಂಘಟಿತ ಪ್ರಯತ್ನ ಮತ್ತು ನಿರ್ಣಯಗಳಿಂದ ಈ ಫಲಿತಾಂಶ ಲಭಿಸಿದೆ. ಹಿಂದುತ್ವ ಮತ್ತು ಅಭಿವೃದ್ಧಿಯ ಆಧಾರದಲ್ಲಿ ಸ್ಪರ್ಧಿಸಲಾಯಿತು. 35 ವಾರ್ಡ್‍ಗಳಲ್ಲಿ 2.5 ಲಕ್ಷ ಹಿಂದೂಗಳ ಮತ ಇದೆ ಎಂದು ವಿವರಿಸಿದರು. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯ, ಹಿಂದುತ್ವದ ಕುರಿತ ಗಟ್ಟಿ ನಿಲುವಿನಿಂದ ಗೆಲುವು ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.
ಟಿಕೆಟ್ ಹಂಚುವ ವೇಳೆ ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೇಗೆದುಕೊಂಡು, ಎಲ್ಲ 33 ವಾರ್ಡ್‍ಗಳಲ್ಲಿ ಪ್ರವಾಸ ಮಾಡಿದ್ದೇನೆ. ಎಲ್ಲ ಹೊಸ ಅಭ್ಯರ್ಥಿಗಳೇ ಇದ್ದರು. ಬಿಜೆಪಿ ಇದ್ದರಷ್ಟೇ ಗೆಲುವು ಎಂಬ ಭಾವನೆ ಇತ್ತು. ಇದರಿಂದ ಗೆಲುವು ಸುಲಭವಾಯಿತು ಎಂದು ತಿಳಿಸಿದರು.
ಇದನ್ನೂ ಓದಿ:ಶಾಸಕ ಸಿದ್ದು ಸವದಿ-ನೇಕಾರರ ಮಧ್ಯೆ ಮಾತಿನ ಚಕಮಕಿ