ETV Bharat / state

ಬನ್ನಂಜೆ ಗೋವಿಂದಾಚಾರ್ಯ ನಿಧ‌ನಕ್ಕೆ ಬಿಜೆಪಿ ನಾಯಕರಿಂದ ಸಂತಾಪ - Bangalore Latest Update News

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ (85) ಅವರು ಇಂದು ಜಿಲ್ಲೆಯ ಅಂಬಲಪಾಡಿಯ ನಿವಾಸದಲ್ಲಿ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಕೇಂದ್ರ ಸಚಿವರು, ಸಿಎಂ ಸಂಪುಟ ಸಹೋದ್ಯೋಗಿಗಳು ಹಾಗೂ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.

Bangalore
ನಳಿನ್ ಕುಮಾರ್ ಕಟೀಲ್ , ಕೇಂದ್ರ ಸಚಿವ ಡಿ.ವಿ ಸದಾನಂದಗೌಡ
author img

By

Published : Dec 13, 2020, 4:20 PM IST

ಬೆಂಗಳೂರು: ವಿದ್ಯಾ ವಾಚಸ್ಪತಿ, ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ನಿಧನಕ್ಕೆ ಕೇಂದ್ರ ಸಚಿವರು, ಸಿಎಂ ಸಂಪುಟ ಸಹೋದ್ಯೋಗಿಗಳು ಹಾಗೂ ಬಿಜೆಪಿ ನಾಯಕರು ಸಂತಾಪ ಸೂಚಿಸಿದ್ದಾರೆ.

ದೇಶ ಕಂಡ ಶ್ರೇಷ್ಠ ಬಹುಶ್ರುತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನವು ಆಘಾತ ತಂದಿದೆ. ಅವರ ಅಗಲಿಕೆಯು ಕನ್ನಡ ಸಾರಸ್ವತ ಲೋಕದಲ್ಲಿ ದೊಡ್ಡ ಶೂನ್ಯ ಸೃಷ್ಟಿಸಿದೆ. ಅವರಿಗೆ ಸದ್ಗತಿ ಉಂಟಾಗಲಿ. ಭಗವಂತನು ಕುಟುಂಬಕ್ಕೆ, ಅನುಯಾಯಿಗಳಿಗೆ ಅವರ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಸಂತಾಪ ಸೂಚಿಸಿದ್ದಾರೆ.

ಡಿಸಿಎಂ ಸಂತಾಪ: ವೇದ, ಪುರಾಣಗಳ ಕುರಿತ ಅವರ ಪ್ರವಚನಗಳು, ಕೃತಿಗಳು ಹಾಗೂ ಅಸಂಖ್ಯ ಬರಹಗಳು ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಂತಿದ್ದವು. ಪ್ರವಚನ, ಸಂಪಾದಿತ ಕೃತಿಗಳು, ಸಂಶೋಧನೆಗಳ ಮೂಲಕ ಗ್ರಂಥಗಳ ಮೂಲಕ ಶ್ರೀ ವೇದವ್ಯಾಸ, ಶ್ರೀಕೃಷ್ಣ, ಮಧ್ವರನ್ನು ಜನಮಾನಸದಲ್ಲಿ ಪ್ರತಿಷ್ಠಾಪಿಸಿದ ಮಹಾನ್ ಚೇತನ ಡಾ. ಬನ್ನಂಜೆ ಗೋವಿಂದಾಚಾರ್ಯರು ಶ್ರೀಹರಿಯ ಪಾದವನ್ನು ಸೇರಿದ್ದಾರೆ. ಅವರ ನಿಧನದಿಂದ ಸಾರಸ್ವತ ಲೋಕದ ಅಗಾಧ ಪ್ರತಿಭೆಯೊಂದನ್ನು ಕಳೆದುಕೊಂಡಂತಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಓದಿ: ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ಅಸ್ತಂಗತ

ಸುರೇಶ್ ಕುಮಾರ್ ಸಂತಾಪ: ಸನಾತನ ಧರ್ಮದ ಕುರಿತಂತೆ ಅವರ ಅಪ್ರತಿಮ ಜ್ಞಾನ, ಸಂಶೋಧನಾತ್ಮಕವಾದ ಅವರ ನಿಲುವುಗಳು ಸಮಾಜದ ಧಾರ್ಮಿಕ ಪ್ರಜ್ಞೆಯನ್ನು ಉದ್ದೀಪಿಸುವಂತಿದ್ದವು ಎಂದಿದ್ದಾರೆ.

ಓದಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಬದುಕು-ಬರಹ

ಕಟೀಲ್ ಸಂತಾಪ: ಬಾಣಭಟ್ಟರ ಕಾದಂಬರಿ, ಶಾಕುಂತಲಾ ಹಾಗೂ ಪ್ರಮುಖ ಚಾರಿತ್ರಿಕ ಕೃತಿಗಳನ್ನು ಅವರು ಅನುವಾದಿಸಿದ್ದರು. ಭಗವಂತನು ಆಚಾರ್ಯರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.

ಆದಿಚುಂಚನಗಿರಿ ಶ್ರೀ ಸಂತಾಪ: ನಾಡಿನ ಶ್ರೇಷ್ಠ ಆಧ್ಯಾತ್ಮಿಕ ಪ್ರವಚನಕಾರರಾಗಿದ್ದ ಬನ್ನಂಜೆಯವರು ಮಧ್ವ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ಪತ್ರಕರ್ತರಾಗಿ ಶ್ರೇಷ್ಠ ಅಂಕಣಕಾರರಾಗಿ ಜನಮನಕ್ಕೆ ಹತ್ತಿರವಾಗಿದ್ದರು. ಹಲವು ಚಾರಿತ್ರಿಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ಶ್ರೀಯುತರು ಸಂಸ್ಕೃತದ ಕೃತಿಗಳನ್ನೂ ಕನ್ನಡಕ್ಕೆ ಭಾಷಾಂತರಿಸಿದ್ದರು. ಉಪನಿಷತ್ತಿನ ಅಧ್ಯಾಯಗಳಿಗೆ ಟಿಪ್ಪಣಿ ಬರೆದಿದ್ದ ಇವರು ಚಲನಚಿತ್ರ ಸಂಭಾಷಣಾಕಾರರಾಗಿಯೂ ಹೆಸರಾಗಿದ್ದರು ಎಂದು ಶೋಕಸಂದೇಶದಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.