ETV Bharat / state

ಬಿಜೆಪಿ‌ ಮುಖಂಡ ಮುನಿರಾಜು ಮನೆ ಮೇಲೆ ಚುನಾವಣಾ ಅಧಿಕಾರಿಗಳಿಂದ ದಾಳಿ - ಈಟಿವಿ ಭಾರತ ಕನ್ನಡ

ಬಿಜೆಪಿ ಮುಖಂಡ ಮುನಿರಾಜು ಮನೆ ಮೇಲೆ ಚುನಾವಣಾ ಅಧಿಕಾರಿಗಳ ತಂಡ ಮತ್ತು ಜಿಎಸ್​ಟಿ ಅಧಿಕಾರಿಗಳ ದಾಳಿ ನಡೆಸಿದೆ.

bjp-leader-munirajus-house-raided-by-election-officials
ಬಿಜೆಪಿ‌ ಮುಖಂಡ ಮುನಿರಾಜು ಮನೆ ಮೇಲೆ ಚುನಾವಣಾ ಅಧಿಕಾರಿಗಳಿಂದ ದಾಳಿ
author img

By

Published : Apr 4, 2023, 6:43 PM IST

ಬೆಂಗಳೂರು : ಬಿಜೆಪಿ ಮುಖಂಡ ಮುನಿರಾಜು ಮನೆ ಮೇಲೆ ಚುನಾವಣಾ ಫ್ಲೈಯಿಂಗ್ ಸ್ವ್ಕಾಡ್ ಮತ್ತು ಜಿಎಸ್​​ಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಚುನಾವಣಾ ಅಧಿಕಾರಿಗಳಿಗೆ ಬಂದ ದೂರಿನ ಮೇರೆಗೆ ಅಗ್ರಹಾರ ಬಡಾವಣೆಯ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ 2,500 ಸೀರೆಗಳು ಪತ್ತೆಯಾಗಿವೆ. ಹೀಗಾಗಿ ಇವುಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರ ನೀಡಿರುವ ಮುನಿರಾಜು, ನಮಗೆ ಎಸ್​​ಎಲ್​ವಿ ಎಂಟರ್ ಪ್ರೈಸಸ್ ಎಂಬ ರಿಜಿಸ್ಟರ್ ಉದ್ಯಮವಿದೆ. ಇದಕ್ಕೆ ಜಿಎಸ್​​ಟಿ ಕೂಡ ಇದೆ. ನಾವು ಸೀರೆ ತಂದು ಮಾರಾಟ ಮಾಡುತ್ತೇವೆ. ಇದು ಯಾವುದೂ ಚುನಾವಣಾ ಉದ್ದೇಶಕ್ಕೆ ತಂದಿರುವುದಲ್ಲ. ಸೀರೆ ಖರೀದಿಗೆ ಸಂಬಂಧಿಸಿದಂತೆ ನಮ್ಮ ಬಳಿ ಜಿಎಸ್​​ಟಿ ಬಿಲ್ ಇದೆ. ಇದು ನಾವು ಮೊದಲಿನಿಂದಲೂ ನಡೆಸಿಕೊಂಡು ಬಂದಿರುವ ಉದ್ಯಮ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮುನಿರಾಜು ನೀಡಿರುವ ಎಲ್ಲಾ ಜಿಎಸ್​​ಟಿ ಬಿಲ್​​ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಈ ವೇಳೆ ಇವರ ಮನೆಯಲ್ಲಿ ವೋಟರ್ ಐಡಿಗೆ ಸಂಬಂಧಿಸಿದ ಕೆಲವು ಫಾರ್ಮ್​ಗಳು ಪತ್ತೆಯಾಗಿವೆ. ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆ ಮಾಡುವ 1,200 ಫಾರ್ಮ್ ಸಿಕ್ಕಿದೆ. ಈ ಬಗ್ಗೆ ವೋಟರ್ ಐಡಿ ಇಲ್ಲದೆ ಇರುವವರಿಗೆ ವೋಟರ್ ಐಡಿ ಮಾಡಲು ಸಹಾಯ ಮಾಡುತ್ತಿದ್ದೇವೆ. ಯಾರಾದರೂ ವೋಟರ್ ಐಡಿ ಬೇಕು ಎಂದು ಬಂದರೆ ಈ ಫಾರ್ಮ್ ಗೆ ಅವರ ಪೊಟೋ ಅಂಟಿಸಿ ಕೊಡುತ್ತಿದ್ದೆವು. ಇದನ್ನು ಮಾಡುವುದು ಕಾನೂನು ಬಾಹಿರ ಅಲ್ಲ. ವೋಟರ್ ಫಾರ್ಮ್​ನಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿರುವ ಕಂಡು ಬಂದಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ವಿವಿಧ ಜಾಗೃತ ದಳಗಳು, ಪೊಲೀಸರು, ಚುನಾವಣಾ ಅಧಿಕಾರಿಗಳು ಎಲ್ಲೆಡೆ ತಪಾಸಣೆ ನಡೆಸುತ್ತಿದ್ದಾರೆ. ಚೆಕ್​ಪೋಸ್ಟ್​ಗಳನ್ನು ಸ್ಥಾಪಿಸಿ ಅಕ್ರಮವಾಗಿ ಸಾಗಾಟ ಮಾಡುವ ವಸ್ತುಗಳು, ನಗದು ಮತ್ತು ಗಾಂಜಾ, ಚಿನ್ನಾಭರಣ ಸೇರಿದಂತೆ ವಿವಿಧ ವಸ್ತುಗಳನ್ನು ಮುಟ್ಟುಗೋಲು ಹಾಕುತ್ತಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಮೈಸೂರಿನಲ್ಲಿ ದಾಳಿ ನಡೆಸಿದ್ದ ಚುನಾವಣಾ ಫ್ಲೈಯಿಂಗ್​ ಸ್ಕ್ವಾಡ್ 19 ಲಕ್ಷ ಮೌಲ್ಯದ ಆಹಾರ ಸಾಮಗ್ರಿಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ಸನ್‌ಪ್ಯೂರ್ ಗಾರ್ಡನ್ ಲೇಔಟ್‌ನ ಮನೆಯೊಂದರ ಗೋದಾಮಿನ ಮೇಲೆ ದಾಳಿ ನಡೆಸಿದ ವೇಳೆ ಆಹಾರ ಸಾಮಗ್ರಿಗಳು ಪತ್ತೆಯಾಗಿದ್ದವು.

ಶಿವಮೊಗ್ಗ ಜಿಲ್ಲೆಯ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನರಿಗೆ ವಿತರಿಸಲು ಆಹಾರದ ಕಿಟ್​ಗಳನ್ನು ದಾಸ್ತಾನು ಇರಿಸಿದ್ದ ಗೋದಾಮಿನ ಮೇಲೆ ದಾಳಿ ನಡೆಸಿದ್ದರು. ಸುಮಾರು 10 ಲಕ್ಷ ಮೌಲ್ಯದ ದಿನಸಿ ಕಿಟ್​ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 00 ಕಿಟ್​ಗಳು ಪತ್ತೆಯಾಗಿದ್ದು ಇದರಲ್ಲಿ ಅಕ್ಕಿ, ಬೇಳೆ, ಶ್ಯಾವಿಗೆ, ಸಕ್ಕರೆ ಸೇರಿದಂತೆ ವಿವಿಧ ದಿನಸಿ ವಸ್ತುಗಳು ದೊರೆತಿದ್ದವು.

ಇದನ್ನೂ ಓದಿ : ಚುನಾವಣಾ ಅಕ್ರಮ: 2,78,798 ಲೀಟರ್ ಮದ್ಯ, 13.575 ಕೆ.ಜಿ ಚಿನ್ನ ಮತ್ತಿತರ ವಸ್ತುಗಳ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.