ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ವಿಚಾರದಲ್ಲಿ ನಿರೀಕ್ಷೆಗೂ ಮೀರಿ ಬಿಜೆಪಿ ಗೆಲುವು ಸಾಧಿಸಿದ್ದು ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಮಿಷನ್ 22 ವರ್ಕೌಟ್ ಆಗಿದೆ.
ಕರುನಾಡದಲ್ಲಿ ಅಭೂತಪೂರ್ವ ಜಯಗಳಿಸಿರುವ ಬಿಜೆಪಿ ಇದೇ ಹುಮ್ಮಸ್ಸಿನಲ್ಲಿ ತಮ್ಮ ಟ್ವಿಟರ್ನಲ್ಲಿ 'ಡಿಯರ್ ಕರ್ನಾಟಕ ಹೌ ಇಸ್ ದಿ ಜೋಶ್?'ಎಂದು ಟ್ವೀಟ್ ಮಾಡಿ ವಿಪಕ್ಷಗಳನ್ನು ಅಣಕಿಸಿದೆ.
'ಮೋದಿ ಆ ಗಯಾ' ಟ್ವಿಟರ್ ತುಂಬೆಲ್ಲಾ ಫಲಿತಾಂಶದ್ದೇ ಹವಾ!
-
Dear Karnataka,
— BJP Karnataka (@BJP4Karnataka) May 23, 2019 " class="align-text-top noRightClick twitterSection" data="
How is the Josh ?
">Dear Karnataka,
— BJP Karnataka (@BJP4Karnataka) May 23, 2019
How is the Josh ?Dear Karnataka,
— BJP Karnataka (@BJP4Karnataka) May 23, 2019
How is the Josh ?
ಒಟ್ಟಾರೆ 28 ಕ್ಷೇತ್ರಗಳ ಪೈಕಿ ಭಾರತೀಯ ಜನತಾ ಪಾರ್ಟಿ 22 ಸ್ಥಾನ ಜಯ ಗಳಿಸಿದ್ದರೆ ಮೂರು ಸೀಟುಗಳಲ್ಲಿ ಮುನ್ನಡೆಯಲ್ಲಿದೆ. ಮೈತ್ರಿ ಮೂಲಕ ಲೋಕಸಮರ ಎದುರಿಸಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಕೇವಲ ಎರಡು ಸೀಟಿಗೆ ಕುಸಿದು ಮುಖಭಂಗ ಅನುಭವಿಸಿದೆ. ಹೈವೋಲ್ಟೇಜ್ ಕ್ಷೇತ್ರ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಜಯಭೇರಿ ಬಾರಿಸಿದ್ದಾರೆ.