ETV Bharat / state

ತೇಜಸ್ವಿನಿ ಅನಂತ್​ಕುಮಾರ್​ಗೆ ಕೈಕೊಟ್ಟ ಕಮಲ... ಹುಸಿಯಾದ ನಿರೀಕ್ಷೆ - undefined

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯಗೆ ಮಣೆ... ಟಿಕೆಟ್ ನಿರೀಕ್ಷೆಯಲ್ಲಿದ್ದ ತೇಜಸ್ವಿನಿ ಅನಂತಕುಮಾರ್​ಗೆ ಅಚ್ಚರಿ. ಬೆಂಬಲಿಗರಿಗೂ ಶಾಕ್​. ಅಕ್ಷರಶಃ ತಬ್ಬಲಿಯಾದ್ರಾ ತೇಜಸ್ವಿನಿ?

ತೇಜಸ್ವಿನಿ ಅನಂತ್​ಕುಮಾರ್​
author img

By

Published : Mar 26, 2019, 10:01 AM IST

ಬೆಂಗಳೂರು: ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ನೀವೇ ಕಮಲದ ಅಭ್ಯರ್ಥಿ..., ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಿ..., ತಳಮಟ್ಟದಲ್ಲಿ ಪ್ರಚಾರವನ್ನೂ ಆರಂಭಿಸಿ... ದೆಹಲಿಯಲ್ಲಿ ನಿಮ್ಮ ಪತಿ ಕೇಂದ್ರ ಸಚಿವ ಅನಂತಕುಮಾರ್​​ ತಂಗಿದ್ದ ಸರ್ಕಾರಿ ಬಂಗಲೆ ಖಾಲಿ ಮಾಡಬೇಡಿ ಸಂಸದರಾಗಿ ನೀವೇ ಅಲ್ಲಿ ವಾಸಿಸುವಿರಂತೆ...!!

ಹೌದು, ಹೀಗೆ ಹತ್ತು ಹಲವು ಆಸೆಗಳನ್ನು ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್​​ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಹುಟ್ಟಿಸಿ ಬಿಜೆಪಿ ಕೊನೇ ಘಳಿಗೆಯಲ್ಲಿ ಟಿಕೆಟ್ ನೀಡದೇ ಅವರಿಗೆ ಕೈಕೊಟ್ಟಿದೆ.

ಬಿಜೆಪಿ ಟಿಕೆಟ್ ತನಗೆ ಸಿಕ್ಕೇ ಸಿಗುತ್ತದೆ ಎಂದು ಬೆಟ್ಟದಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದ ತೇಜಸ್ವಿನಿ ಅನಂತಕುಮಾರ್ ಅವರಿಗೆ ಈಗ ಅನಿರೀಕ್ಷಿತ ರಾಜಕೀಯ ವಿದ್ಯಮಾನದಿಂದ ಭ್ರಮನಿರಸನವಾಗಿದೆ. ಕ್ಯಾನ್ಸರ್​​ಗೆ ತುತ್ತಾಗಿ ಅಕಾಲಿಕ ಮರಣವನ್ನಪ್ಪಿದ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್​​ ಪಕ್ಷದಲ್ಲಿ ಈಗ ಅಕ್ಷರಶಃ ತಬ್ಬಲಿಯಾಗಿದ್ದಾರೆ.

ಆರಂಭದಲ್ಲಿ ಚುನಾವಣೆ ರಾಜಕೀಯಕ್ಕೆ ಒಲವು ತೋರದ ತೇಜಸ್ವಿನಿ ಅವರಿಗೆ ಪಕ್ಷದ ಮುಖಂಡರೇ ಒತ್ತಡ ಹೇರಿ, ಉತ್ಸಾಹ ತುಂಬಿ ಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ಧಪಡಿಸಿದ್ದರು. ಅದರಂತೆ ತೇಜಸ್ವಿನಿ ಅವರೂ ಬೆಂಗಳೂರು ದಕ್ಷಿಣದಲ್ಲಿ ತಾವು ಅಭ್ಯರ್ಥಿಯಾಗುತ್ತೇನೆಂದು ಭಾವಿಸಿ ಕ್ಷೇತ್ರದಲ್ಲಿ ಒಂದು ರೀತಿ ಅನಂತ ನಮನ ಕಾರ್ಯಕ್ರಮ ನಡೆಸುತ್ತ ಪ್ರಚಾರವನ್ನೂ ಮಾಡುತ್ತಾ ಬಂದಿದ್ದರು. ಟಿಕೆಟ್ ಘೋಷಣೆಯಾದಾಗಲೂ ಸಹ ಮೊದಲ ಪಟ್ಟಿಯಲ್ಲೇ ತಮ್ಮ ಹೆಸರು ಪ್ರಕಟವಾಗುತ್ತದೆ ಎಂದು ಭಾವಿಸಿದ್ದರು. ಆದರೆ ನಿರೀಕ್ಷೆ ಹುಸಿಯಾಗಿತ್ತು. ಎರಡನೇ ಪಟ್ಟಿಯಲ್ಲಿ ಹೆಸರು ಬಂದೇ ಬರುತ್ತದೆ ಅಂದುಕೊಂಡಿದ್ದರು. ಆಗಲೂ ಬರದಿದ್ದಾಗ ತೇಜಸ್ವಿನಿ ಅವರಿಗೆ ಬಹಳ ನಿರಾಸೆಯಾಗಿದೆ.

ತಮ್ಮ ಬದಲಿಗೆ ಬೆಂಗಳೂರು ದಕ್ಷಿಣದಲ್ಲಿ ಪ್ರಧಾನಿ ಮೋದಿಯೇ ಸ್ಪರ್ಧಿಸಲಿದ್ದಾರೆನ್ನುವ ಸುದ್ದಿ ಬಿಜೆಪಿ ಪಡಸಾಲೆಯಿಂದಲೇ ದಟ್ಟವಾಗಿ ಹಬ್ಬಿತ್ತು. ಪ್ರಧಾನಿ ಅಭ್ಯರ್ಥಿಯಾಗುವುದಾದರೆ ಪ್ರಶ್ನಿಸಲಾದೀತೆ? ಎಂದು ಬೇಸರದಿಂದ ಮೌನವಾಗಿದ್ದರು. ಯಾವಾಗ ಕೊನೆಯ ಕ್ಷಣದಲ್ಲಿ ಮೂರನೇ ವ್ಯಕ್ತಿಯ ಹೆಸರು ತೇಜಸ್ವಿ ಸೂರ್ಯ ಅಭ್ಯರ್ಥಿ ಎಂದು ಘೋಷಣೆಯಾಯಿತೋ ಆಗ ತೇಜಸ್ವಿನಿಯವರಿಗೆ ಟಿಕೆಟ್ ನೀಡುವಲ್ಲಿ ತಮಗಾದ ಮೋಸದ ಅರಿವಾಗತೊಡಗಿತು. ಟಿಕೆಟ್ ಕೊಡದಿರುವುದಕ್ಕೆ ಬಂಡಾಯವೆದ್ದು ಪ್ರತಿಭಟಿಸಲೂ ಸಹ ಅವಕಾಶ ನೀಡದೆ ಬಿಜೆಪಿ ವರಿಷ್ಠರು ಅಂತಿಮ ಕ್ಷಣದಲ್ಲಿ ಬೇರೆ ವ್ಯಕ್ತಿಗೆ ಟಿಕೆಟ್ ಹಂಚಿಕೆ ಮಾಡಿರುವುದನ್ನು ಖಚಿತಪಡಿಸಿದೆ. 'ಬಲಿ ಕಾ ಬಕರಾ' ಎನ್ನುವಂತೆ ತಮ್ಮ ಸ್ಥಿತಿ ಆಯಿತಲ್ಲಾ ಎಂದು ಪತಿ ಅನಂತಕುಮಾರ್​​ ಇದ್ದಿದ್ದರೆ ಹೀಗೆ ಅನ್ಯಾಯ ಆಗುತ್ತಿತ್ತಾ ಎಂದು ಮರಗುವಂತಾಗಿದೆ.

ಹೀಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಈಗ ಕೊನೆಯ ಕ್ಷಣದಲ್ಲಿ ಏನು ಮಾಡಬೇಕು. ಯಾರಲ್ಲಿ ಮೊರೆ ಇಡಬೇಕು ಎನ್ನುವುದು ತಿಳಿಯದೇ, ಅನಂತ ಅಭಿಮಾನಿ ಪಡೆ ಹೊಂದಿದ್ದ ಅನಂತಕುಮಾರ್​​ ಪತ್ನಿಗೆ ಯಾರ ಬೆಂಬಲವೂ ಇಲ್ಲದೇ ಏಕಾಂಗಿಯಾಗುವಂತಾಗಿದೆ.

Intro:ಅನಂತ ಆಸೆ ಹುಟ್ಟಿಸಿ ಅನಂತಕುಮಾರ್ ಪತ್ನಿಗೆ ' ಕೈ' ಕೊಟ್ಟ ಕಮಲ....!

" ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರ ಕ್ಕೆ ನೀವೆ ಕಮಲದ ಅಭ್ಯರ್ಥಿ....., ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಿ....., ತಳಮಟ್ಟದಲ್ಲಿ ಪ್ರಚಾರವನ್ನೂ ಆರಂಭಿಸಿ, .....ದೆಹಲಿಯಲ್ಲಿ ನಿಮ್ಮ ಪತಿ ಕೇಂದ್ರ ಸಚಿವ ಅನಂತಕುಮಾರ ತಂಗಿದ್ದ ಸರಕಾರಿ ಬಂಗಲೆ ಖಾಲಿ ಮಾಡಬೇಡಿ ಸಂಸದರಾಗಿ ನೀವೆ ಅಲ್ಲಿ ವಾಸಿಸುವಿರಂತೆ ......"

ಹೀಗೆ.... ಹತ್ತು ಹಲವಾರು ಆಸೆಗಳನ್ನು ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರಿಗೆ ಹುಟ್ಟಿಸಿ ಬಿಜೆಪಿ ಕೊನೇ ಘಳಿಗೆಯಲ್ಲಿ ಟಿಕೆಟ್ ನೀಡದೇ ಅವರಿಗೆ ಕೈ ಕೊಟ್ಟಿದೆ.

Body: ಬಿಜೆಪಿ ಟಿಕೆಟ್ ತನಗೆ ಸಿಕ್ಕೇ ಸಿಗುತ್ತದೆ ಎಂದು ಬೆಟ್ಟದಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದ ತೇಜಸ್ವಿನಿ ಅನಂತಕುಮಾರ್ ಅವರಿಗೆ ಈಗ ಅನಿರೀಕ್ಷಿತ ವಿದ್ಯಮಾನ ದಿಂದ ಭ್ರಮನಿರಸನವಾಗಿದೆ.

ಕ್ಯಾನ್ಸರ್ ರೋಗಕ್ಕೆ ತುತ್ತಾಗಿ, ಅನಾರೋಗ್ಯ ಲೆಕ್ಕಿಸದೇ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಗಲಿರಳು ಪಕ್ಷಕ್ಕಾಗಿ ಶ್ರಮಿಸಿ ಸಕಾಲಕ್ಕೆ ಚಿಕಿತ್ಸೆ ಪಡೆಯದೇ ಅಕಾಲಿಕ ಮರಣವನ್ನಪ್ಪಿದ ಕೇಂದ್ರ ಸಚಿವರಾಗಿದ್ದ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ ಪಕ್ಷದಲ್ಲಿ ಈಗ ಅಕ್ಷರಶಃ ತಬ್ಬಲಿಯಾಗಿದ್ದಾರೆ.

ಆರಂಭದಲ್ಲಿ ಚುನಾವಣೆ ರಾಜಕೀಯಕ್ಕೆ ಒಲವು ತೋರದ ತೇಜಸ್ವಿನಿ ಅವರಿಗೆ ಪಕ್ಷದ ಮುಖಂಡರೇ ಒತ್ತಡ ಹೇರಿ, ಉತ್ಸಾಹ ತುಂಬಿ ಚುನಾವಣೆಗೆ ಸ್ಪರ್ಧಿಸಲು ಮಾನಸಿಕವಾಗಿ ಸಿದ್ದಪಡಿಸಿದ್ದರು. ಅದರಂತೆ ತೇಜಸ್ನಿನಿ ಅವರೂ ಬೆಂಗಳೂರು ದಕ್ಷಿಣದಲ್ಲಿ ತಾವು ಅಭ್ಯರ್ಥಿಯಾಗುತ್ತೇನೆಂದು ಭಾವಿಸಿ ಕ್ಷೇತ್ರ ದಲ್ಲಿ ಒಂದು ರೀತಿ ಅನಂತ ನಮನ ಕಾರ್ಯಕ್ರಮ ನಡೆಸುತ್ತಾ ಪ್ರಚಾರವನ್ನೂ ಮಾಡುತ್ತಾ ಬಂದಿದ್ದರು.

ಟಿಕೆಟ್ ಘೋಷಿಸವಾಗಲೂ ಸಹ ಮೊದಲ ಪಟ್ಟಿಯಲ್ಲೇ ತಮ್ಮ ಹೆಸರು ಪ್ರಕಟವಾಗುತ್ತದೆ ಎಂದು ಭಾವಿಸಿದ್ದರು. ಆದರೆ ನಿರೀಕ್ಷೆ ಹುಸಿಯಾಗಿತ್ತು. ಎರಡನೇ ಪಟ್ಟಿಯಲ್ಲಿ ಹೆಸರು ಬಂದೇ ಬರುತ್ತದೆಂದು ಕೊಂಡಿದ್ದರು....ಆಗಲೂ ಬರದಿದ್ದಾಗ ತೇಜಸ್ವಿನಿ ಅವರಿಗೆ ಬಹಳ ನಿರಾಸೆಯಾಯಿತು. ತಮ್ಮ ಬದಲಿಗೆ ಬೆಂಗಳೂರು ದಕ್ಷಿಣದಲ್ಲಿ ಪ್ರಧಾನಿ ಮೋದಿಯೇ ಸ್ಪರ್ಧಿಸಲಿದ್ದಾರೆನ್ನುವ ಸುದ್ದಿ ಬಿಜೆಪಿ ಪಡಸಾಲೆಯಿಂದಲೇ ದಟ್ವಾಗಿ ಹಬ್ಬಿತು....ಪ್ರಧಾನಿ ಅಭ್ಯರ್ಥಿ ಯಾಗುವುದಾದರೆ...ಪ್ರಶ್ನಿನಿಸಲಾದೀತೆ....? ಎಂದು ಬೇಸರ ದಿಂದ ಮೌನವಾಗಿದ್ದರು. ಯಾವಾಗ...ಕೊನೇಕ್ಷಣದಲ್ಲಿ .ಮೂರನೇ ವ್ಯಕ್ತಿಯ ಹೆಸರು ತೇಜಸ್ವಿ ಸೂರ್ಯ ಅಭ್ಯರ್ಥಿ ಎಂದು ಘೋಷಣೆಯಾಯಿತೋ... ಆಗ ತೇಜಸ್ವಿನಿ ಯವರಿಗೆ ಟಿಕೆಟ್ ನೀಡುವಲ್ಲಿ ತಮಗಾದ ಮೋಸದ ಅರಿವಾಗತೊಡಗಿತು...ಟಿಕೆಟ್ ಕೊಡದಿರುವುದಕ್ಕೆ ಬಂಡಾಯವೆದ್ದು ಪ್ರತಿಭಟಿಸಲೂ ಸಹ ಅವಕಾಶ ನೀಡದೆ ಬಿಜೆಪಿ ವರಿಷ್ಠರು ಅಂತಿಮ ಕ್ಷಣದಲ್ಲಿ ಬೇರೆ ವ್ಯಕ್ತಿಗೆ ಟಿಕೆಟ್ ಹಂಚಿಕೆ ಮಾಡಿರುವುದನ್ನು ಖಚಿತಪಡಿಸಿದ್ದು " ಬಲಿ ಕಾ ಬಕರಾ " ಎನ್ನುವಂತೆ ತಮ್ಮಸ್ಥಿತಿ ಯಾಯಿತಲ್ಲಾ ಎಂದು ಕೊಂಡು ಪತಿ ಅನಂತಕುಮಾರ ಇದ್ದಿದ್ದರೆ ಹೀಗೆ ಅನ್ಯಾಯ ಆಗುತ್ತಿತ್ತಾ ಎಂದು ಮರಗುತ್ತಿದ್ದಾರೆ..‌‌

Conclusion:ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ಈಗ ಕೊನೆಯ ಕ್ಷಣದಲ್ಲಿ ಏನು ಮಾಡಬೇಕು.... ಯಾರಲ್ಲಿ ಮೊರೆ ಇಡಬೇಕು ಎನ್ನುವುದು ತಿಳಿಯದೇ.....ಅನಂತ ಅಭಿಮಾನಿ ಪಡೆ ಹೊಂದಿದ್ದ ಅನಂತಕುಮಾರ ಪತ್ನಿ ಯಾರ ಬೆಂಬಲವೂ ಇಲ್ಲದೇ ಏಕಾಂಗಿಯಾಗಿ ದಾರಿಕಾಣದೇ...ಬೇಸರದಲ್ಲಿ.ಇದ್ದಾರೆ...‌

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.