ETV Bharat / state

ಟಾರ್ಗೆಟ್ 150 ಗುರಿ ತಲುಪಲ್ಲ: ಬಿಜೆಪಿ ಹೈಕಮಾಂಡ್​​ಗೆ ಆಂತರಿಕ ಸಮೀಕ್ಷಾ ವರದಿಗಳ ಆಘಾತ - ಆಂತರಿಕ ಸಮೀಕ್ಷೆಯ ಪ್ರಕಾರ ಬಿಜೆಪಿಗೆ ಬಹುಮತ ಕಷ್ಟ

ಕೇಸರಿ ನಾಯಕರು ಹೋದಲ್ಲಿ ಬಂದಲ್ಲಿ 150 ಸೀಟು ಗೆಲ್ಲುತ್ತೇವೆ ಎಂದು ಭಾಷಣ ಮಾಡುತ್ತಿದ್ದಾರೆ. ಆದರೆ, ಅಂದುಕೊಂಡಷ್ಟು ಬಿಜೆಪಿಗೆ ಗೆಲುವು ಸುಲಭವಲ್ಲ ಎನ್ನುವ ಮಾಹಿತಿ ಇದೀಗ ಮತ್ತೊಮ್ಮೆ ಹೊರ ಬಂದಿದೆ. ಬಿಜೆಪಿಯೇ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ ಪಕ್ಷಕ್ಕೆ ಬಹುಮತ ಕಷ್ಟವಂತೆ..

bjp-high-command-worry-about-internal-survey-on-karnataka-elections
ಟಾರ್ಗೆಟ್ 150 ಗುರಿ ತಲುಪಲ್ಲ: ಬಿಜೆಪಿ ಹೈಕಮಾಂಡ್​​ಗೆ ಆಂತರಿಕ ಸಮೀಕ್ಷಾ ವರದಿಗಳ 'ತಲೆ ನೋವು'
author img

By

Published : Jun 28, 2022, 6:30 PM IST

Updated : Jun 28, 2022, 7:29 PM IST

ಬೆಂಗಳೂರು : ಆಡಳಿತಾರೂಢ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆಗಳಿಗೆ ಪೂರಕವಲ್ಲದ ಸಮೀಕ್ಷಾ ವರದಿಗಳು ಬಿಜೆಪಿ ಹೈಕಮಾಂಡ್ ಕೈ ಸೇರಿವೆ. ದಕ್ಷಿಣ ಭಾರತದ ಹೆಬ್ಬಾಗಿಲಿನಲ್ಲಿ ಮತ್ತೊಮ್ಮೆ ಕಮಲ ಧ್ವಜ ಹಾರಿಸಬೇಕು ಎನ್ನುವ ಆಶಯಕ್ಕೆ ಹಿನ್ನಡೆಯಾಗುವ ಸಾಧ್ಯತೆ ವರಿಷ್ಠರ ನಿದ್ದೆಗೆಡಿಸಿದೆ.

ಆಪರೇಷನ್ ಕಮಲದ ಮೂಲಕ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿರುವ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ನಂತರವೂ ಪರಿಸ್ಥಿತಿ ಬದಲಾಗಿಲ್ಲ. ಯಡಿಯೂರಪ್ಪ ಅವರನ್ನು ಬದಲಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂರಿಸಲಾಗಿದ್ದರೂ ಸಮೀಕ್ಷೆಗಳು ಮಾತ್ರ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರಕ್ಕೆ ಬರುವುದು ಕಷ್ಟ ಎನ್ನುವ ವರದಿಯ್ನನೇ ನೀಡುತ್ತಿವೆ.

ಯಡಿಯೂರಪ್ಪ ಅವಧಿಯಲ್ಲಿ ಮೊದಲ ಬಾರಿಗೆ ಹೈಕಮಾಂಡ್ ನೇರವಾಗಿ ಖಾಸಗಿ ಏಜೆನ್ಸಿ ಮೂಲಕ ಆಂತರಿಕ ಸಮೀಕ್ಷೆ ನಡೆಸಿತ್ತು. ಆ ಸಮೀಕ್ಷಾ ವರದಿಯಲ್ಲಿ 80 ಸ್ಥಾನಕ್ಕಿಂತ ಹೆಚ್ಚು ಗೆಲ್ಲುವುದು ಕಷ್ಟ ಎನ್ನುವುದನ್ನು ತಿಳಿಸಲಾಗಿತ್ತು. ಮುಖ್ಯಮಂತ್ರಿ ಬದಲಾದ ನಂತರ ಬೊಮ್ಮಾಯಿ ಆಡಳಿತದಲ್ಲಿಯೂ ಮತ್ತೊಂದು ಸಮೀಕ್ಷೆ ನಡೆಸಲಾಯಿತು.

ಆ ವರದಿಯಲ್ಲಿಯೂ ಪಕ್ಷ ಚುನಾವಣೆಯಲ್ಲಿ ಬಹುಮತ ಪಡೆಯುವ ನಿಟ್ಟಿನಲ್ಲಿ ಹಿಂದೆ ಬೀಳಲಿದೆ ಎನ್ನುವ ವರದಿಯನ್ನೇ ನೀಡಿತು. 70-80 ಸ್ಥಾನಗಳಲ್ಲಿ ಮಾತ್ರ ಕಮಲ ಅರಳಲಿದೆ ಎನ್ನುವ ವರದಿಯನ್ನು ನೀಡಿದ್ದು, ಇದರಿಂದ ತೃಪ್ತರಾಗದ ವರಿಷ್ಠರು ಇತ್ತೀಚೆಗೆ ಮತ್ತೊಂದು ಸಮೀಕ್ಷೆ ನಡೆಸಿದ್ದಾರೆ.

ಮೂರನೇ ಸಮೀಕ್ಷೆಯೂ ಪೂರಕವಲ್ಲ : ಅಲ್ಲದೇ, ಖಾಸಗಿ ಏಜೆನ್ಸಿ ನಡೆಸಿದ ಮೂರನೇ ಸಮೀಕ್ಷೆಯೂ ಹೈಕಮಾಂಡ್ ಆಶಯಕ್ಕೆ ವಿರುದ್ಧವಾದ ವರದಿಯನ್ನು ನೀಡಿದೆ. ಕೇಸರಿ ನಾಯಕರು ಹೋದಲ್ಲಿ ಬಂದಲ್ಲಿ 150 ಸೀಟು ಗೆಲ್ಲುತ್ತೇವೆ ಎಂದು ಭಾಷಣ ಮಾಡುತ್ತಿದ್ದಾರೆ. ಆದರೆ, ಅಂದುಕೊಂಡಷ್ಟು ಬಿಜೆಪಿಗೆ ಗೆಲುವು ಸುಲಭವಲ್ಲ ಎನ್ನುವ ಮಾಹಿತಿ ಇದೀಗ ಮತ್ತೊಮ್ಮೆ ಹೊರ ಬಂದಿದೆ.

ಬಿಜೆಪಿಯೇ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ ಪಕ್ಷಕ್ಕೆ ಬಹುಮತ ಕಷ್ಟ. ಅಷ್ಟು ಮಾತ್ರವಲ್ಲ ಹಾಲಿ ಇರುವ ಹಲವು ಶಾಸಕರಿಗೂ ಸೋಲಿನ ಭೀತಿ ಇದೆ ಎನ್ನುವ ವರದಿ ವರಿಷ್ಠರ ಕೈಸೇರಿದೆ. ಹೀಗಾಗಿ, ಈ ಬಾರಿ ಹೈಕಮಾಂಡ್ ನೇರವಾಗಿ ಚುನಾವಣಾ ಉಸ್ತುವಾರಿ ವಹಿಸುವ ಸಾಧ್ಯತೆ ಸ್ಪಷ್ಟವಾಗಿದೆ.

ಯಾವ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ?: ಹಳೆ ಮೈಸೂರು ಭಾಗಗಳಾದ ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ ಚಾಮರಾಜನಗರ ಜಿಲ್ಲೆಗಳಲ್ಲಿ ಗೆಲುವು ಸುಲಭದ ಮಾತಲ್ಲ. ಈ ಭಾಗದಲ್ಲಿ ಪಕ್ಷ ಗಟ್ಟಿಯಾಗಬೇಕಿದೆ. ವರದಿ ಆಧರಿಸಿ ಈಗಾಗಲೇ ಕೆಲಸ ಆರಂಭ ಮಾಡಿರುವ ಬಿಜೆಪಿ ಪಕ್ಷ ವೀಕ್ ಇರುವ ಕಡೆ ಅನ್ಯ ಪಕ್ಷದ ಶಾಸಕರನ್ನು, ಸ್ಥಳೀಯ ನಾಯಕರನ್ನು ಸೆಳೆದು ಸಂಘಟನೆ ಮಾಡಲು ಕಸರತ್ತು ಆರಂಭಿಸಿದೆ. ಇದು ಹೈಕಮಾಂಡ್​ನ ಮೊದಲ ಅಸ್ತ್ರವಾಗಿದೆ ಎನ್ನಲಾಗುತ್ತಿದೆ.

ಪರಿಷತ್ ಕದನದಲ್ಲೂ ಹಳೆ ಮೈಸೂರಿನಲ್ಲಿ ಹೊಡೆತ : ಹಳೆ ಮೈಸೂರು ಭಾಗಕ್ಕೆ ಈ ಬಾರಿ ಬಿಜೆಪಿ ಹೆಚ್ಚಿನ ಆದ್ಯತೆ ನೀಡುತ್ತಿದೆಯಾದರೂ ಕಾಂಗ್ರೆಸ್, ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ರಾಜ್ಯ ನಾಯಕರು ವಿಫಲರಾಗುತ್ತಿದ್ದಾರೆ. ಇತ್ತೀಚೆಗೆ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್​ಗೆ ನಡೆದ ಚುನಾವಣೆಯಲ್ಲಿ ದ್ವಿಸದಸ್ಯ ಆಯ್ಕೆಯ ಅವಕಾಶ ಪಡೆದಿರುವ ಮೈಸೂರು ಕ್ಷೇತ್ರದಲ್ಲಿ ಬಿಜೆಪಿ ಸೋತಿತು.

ಮೊನ್ನೆ ನಡೆದ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿಯೂ ಪಕ್ಷ ಪರಾಜಿತಗೊಂಡಿದೆ. ಹಳೆ ಮೈಸೂರು ಭಾಗದ ಟಾರ್ಗೆಟ್​ಗೆ ತೀವ್ರ ಹಿನ್ನಡೆಯಾಗಿದೆ. ಹಳೆ ಮೈಸೂರು ಬಿಜೆಪಿಯ ಬೇಸ್ ​ಅಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಹಳೆ ಮೈಸೂರು ಭಾಗದ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿದ್ದ ಕೇಸರಿ ಕಲಿಗಳಿಗೆ ತೀವ್ರ ನಿರಾಸೆಯನ್ನುಂಟು ಮಾಡಿದೆ. ಅಷ್ಟು ಮಾತ್ರವಲ್ಲ ಬಹುಮತಕ್ಕೆ ಕೊರತೆಯಾಗುತ್ತಿರುವ ಕ್ಷೇತ್ರಗಳನ್ನು ಹಳೆ ಮೈಸೂರು ಭಾಗದಿಂದ ಸರಿದೂಗಿಸಿಕೊಳ್ಳಬಹುದು ಎನ್ನುವ ಲೆಕ್ಕಾಚಾರವೇ ಇದೀಗ ತಲೆಕೆಳಗಾಗುವಂತಾಗಿದ್ದು, ವರಿಷ್ಠರ ನಿದ್ದೆಗೆಡುವಂತೆ ಮಾಡಿದೆ.

ಸಮೀಕ್ಷಾ ವರದಿ ಆಧರಿಸಿ ಆಪರೇಷನ್?: ಬಿಜೆಪಿಯ ಪ್ಲಸ್ ಮತ್ತು ಮೈನಸ್ ಲೆಕ್ಕಾಚಾರದ ಮೇಲೆ ಬಿಜೆಪಿ ತನ್ನ ಕಾರ್ಯತಂತ್ರ ವಿಸ್ತರಿಸಿದೆ. ಅನ್ಯ ಪಕ್ಷದ ಪ್ರಮುಖ ಶಾಸಕರು, ಮಾಜಿ ಶಾಸಕರು, ಜಾತಿವಾರು ಲೆಕ್ಕಾಚಾರದ ಆಧಾರದ ಮೇಲೆ ಹಳೆ ಮೈಸೂರು ಸೇರಿದಂತೆ, ಕಲ್ಯಾಣ ಕರ್ನಾಟಕ ಭಾಗದಲ್ಲಿನ ಅನ್ಯ ಪಕ್ಷದ ಪ್ರಮುಖ ಲೀಡರ್​ಗಳನ್ನು ಬಿಜೆಪಿ ಸಂಪರ್ಕ ಮಾಡಿದೆ ಎನ್ನುತ್ತಿವೆ ಮೂಲಗಳು.

ಜನಪ್ರಿಯತೆ ಇರುವ ತನ್ನ ಕ್ಷೇತ್ರದ ಹೊರತಾಗಿ ಅಕ್ಕಪಕ್ಕದ ಕ್ಷೇತ್ರದ ಮೇಲೆ ಪ್ರಭಾವ ಬೀರುವ ನಾಯಕರನ್ನು ಪಕ್ಷಕ್ಕೆ ಸೆಳೆಯಲು ಕೇಸರಿ ನಾಯಕರು ಈಗಾಗಲೇ ಕಾರ್ಯಾಚರಣೆ ಆರಂಭ ಮಾಡಿದ್ದಾರೆ. ಇದಕ್ಕೆ ಇತ್ತೀಚೆಗೆ ಹಳೆಮೈಸೂರು ಭಾಗದ ಕಾಂಗ್ರೆಸ್, ಜೆಡಿಎಸ್ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ನಿದರ್ಶನ ಎನ್ನಲಾಗಿದೆ.

ದಕ್ಷಿಣ ಭಾರತದಲ್ಲಿ ಪಕ್ಷದ ಬಾವುಟ ಹಾರಿಸಬೇಕು ಎನ್ನುವ ಗುರಿಯೊಂದಿಗೆ ಹಲವು ಕಾರ್ಯತಂತ್ರ ಹೆಣೆಯುತ್ತಿರುವ ಬಿಜೆಪಿ ಹೈಕಮಾಂಡ್​ಗೆ ಸದ್ಯದ ಮಟ್ಟಿಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ ಕಬ್ಬಿಣದ ಕಡಲೆಯಾಗಿದೆ. ಈ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕರ್ನಾಟಕದಲ್ಲಿ ಪಕ್ಷ ಭದ್ರವಾಗಿ ನೆಲೆಯೂರಿದರೆ ನೆರೆ ರಾಜ್ಯಗಳಿಗೆ ಅದನ್ನು ವಿಸ್ತರಿಸಬಹುದುದು ಎನ್ನುವ ಕಾರಣಕ್ಕೆ ಕರ್ನಾಟಕದಲ್ಲಿ ಪೂರ್ಣ ಬಹುಮತ ಸಿಗುವಂತೆ ಮಾಡಲು ಸರ್ಕಸ್ ಮಾಡಲಾತ್ತಿದೆ. ಆದರೆ, ಸಮೀಕ್ಷಾ ವರದಿಗಳು ಮಾತ್ರ ಕರ್ನಾಟಕದಲ್ಲಿ ಬಿಜೆಪಿಗೆ ಬಹುಮತ ಕಷ್ಟ ಸಾಧ್ಯ ಎನ್ನುವ ವರದಿಯನ್ನೇ ನೀಡುತ್ತಿರುವುದು ವರಿಷ್ಠರನ್ನು ಚಿಂತೆಗೀಡು ಮಾಡಿದೆ.

ಡ್ಯಾಮೇಜ್ ಕಂಟ್ರೋಲ್ : ಸದ್ಯ ಪಕ್ಷಕ್ಕೆ ಶೇ.40 ಕಮಿಷನ್ ಆರೋಪ, ಗುತ್ತಿಗೆದಾರನ ಆತ್ಮಹತ್ಯೆ, ಪಿಎಸ್ಐ ನೇಮಕಾತಿ ಹಗರಣ, ಹಿಜಾಬ್ ವಿವಾದ, ಮಸೀದಿ ಮಂದಿರ ಜಟಾಪಟಿ, ಪಠ್ಯಪುಸ್ತಕ ವಿವಾದ ಆಡಳಿತಾರೂಢ ಪಕ್ಷದ ವರ್ಚಸ್ಸಿಗೆ ಧಕ್ಕೆಯುಂಟು ಮಾಡಿವೆ. ಈ ವಿಚಾರಗಳಿಂದ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್‌ ಸೂಚನೆ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: 40% ಕಮೀಷನ್​ ಬಗ್ಗೆ ಸಿಬಿಐ ತನಿಖೆ ನಡೆದರೆ ಸತ್ಯ ಬಯಲು : ಸಂಸದ ಡಿ.ಕೆ. ಸುರೇಶ್​

Last Updated : Jun 28, 2022, 7:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.