ETV Bharat / state

ಪ್ರತಿಪಕ್ಷ ನಾಯಕ, ರಾಜ್ಯಾಧ್ಯಕ್ಷರ ನೇಮಕ: ಸರ್ವಸಮ್ಮತ ಅಭ್ಯರ್ಥಿ ಆಯ್ಕೆಯೇ ಬಿಜೆಪಿ ಹೈಕಮಾಂಡ್​​ಗೆ ಸವಾಲು!

author img

By

Published : Jul 6, 2023, 8:03 AM IST

ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ಬಿಜೆಪಿಗೆ ಸವಾಲಾಗಿ ಪರಿಣಮಿಸಿದೆ. ಕಾಂಗ್ರೆಸ್ ಸರ್ಕಾರ ರಚನೆಯಾಗಿ ಒಂದೂವರೆ ತಿಂಗಳಾದರೂ ಆಯ್ಕೆ ಆಗದೇ ಇರುವುದು ಆಡಳಿತ ಪಕ್ಷಕ್ಕೆ ಅಸ್ತ್ರವಾಗಿದೆ.

ಪ್ರತಿಪಕ್ಷ ನಾಯಕ bjp opposition leader
ಪ್ರತಿಪಕ್ಷ ನಾಯಕ

ಬೆಂಗಳೂರು: ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಹಾಗು ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಎಲ್ಲರಿಗೂ ಒಪ್ಪಿತವಾಗುವ ಸರ್ವ ಸಮ್ಮತ ಅಭ್ಯರ್ಥಿ ಆಯ್ಕೆ ಮಾಡುವುದು ಬಿಜೆಪಿ ಹೈಕಮಾಂಡ್​​ಗೆ ಬಹು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಕಾರಣದಿಂದಲೇ ವಿಧಾನಸಭೆ ಅಧಿವೇಶನ ಆರಂಭವಾದರೂ ಪ್ರತಿಪಕ್ಷ ನಾಯಕರ ನೇಮಕ ಘೋಷಣೆ ಮಾಡಲು ಭಾಜಪದ "ಪ್ರಬಲ" ಹೈಕಮಾಂಡ್​​ಗೆ ಸಾಧ್ಯವಾಗಿಲ್ಲ. ಇದು ರಾಜ್ಯದ ರಾಜಕೀಯದಲ್ಲಿ ತರಹೇವಾರಿ ಚರ್ಚೆಯನ್ನು ಸಹ ಹುಟ್ಟುಹಾಕಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ತಿಂಗಳು ಕಳೆದರೂ ಪ್ರತಿಪಕ್ಷ ನಾಯಕನ ನೇಮಕ ಮಾಡಲು ಬಿಜೆಪಿ ಹೈಕಮಾಂಡ್​ಗೆ ಸಾಧ್ಯವಾಗಿಲ್ಲ. ಇದು ಹೈಕಮಾಂಡ್​ಗೆ ಇರುವ ಸವಾಲು ಮತ್ತು ಪೈಪೋಟಿಯ ಗಂಭೀರತೆಗೆ ಸ್ಪಷ್ಟ ನಿದರ್ಶನ. ಅಷ್ಟೇ ಅಲ್ಲ, ವಿಧಾನಮಂಡಲ ಅಧಿವೇಶನ ಆರಂಭವಾಗಿ ನಾಲ್ಕನೇ ದಿನಕ್ಕೆ ಕಾಲಿಟ್ಟರೂ ಪ್ರತಿಪಕ್ಷ ನಾಯಕರ ಹೆಸರು ಅಂತಿಮಗೊಂಡಿಲ್ಲ. ಇದು ಆಡಳಿತ ಪಕ್ಷ ಕಾಂಗ್ರೆಸ್​ನ ಕಟು ಟೀಕೆಗೂ ಗುರಿಯಾಗಿದೆ.

ಪ್ರತಿಪಕ್ಷ ನಾಯಕರ ಹುದ್ದೆಗೆ ಸಮರ್ಥ ಮತ್ತು ಸರ್ವಸಮ್ಮತ ಅಭ್ಯರ್ಥಿ ನೇಮಕ ಮಾಡಲು ಬಿಜೆಪಿ ಹೈಕಮಾಂಡ್ ಹರಸಾಹಸ ಪಡುತ್ತಿದೆ. ಜಾತಿ ಸಮೀಕರಣ, ಸಾಮರ್ಥ್ಯತೆ, ಶಾಸಕರ ಬೆಂಬಲ, ಪಕ್ಷ ನಿಷ್ಠೆ, ಹಿಂದುತ್ವಪರ ಧೋರಣೆ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಬೆಂಬಲ, ಆಡಳಿತ ಪಕ್ಷ ಕಾಂಗ್ರೆಸ್ ವೈಫಲ್ಯಗಳ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸುವ ಮನೋಭಾವ ಸೇರಿದಂತೆ ಹಲವಾರು ಆಯಾಮಗಳಿಂದ ಬಿಜೆಪಿ ಹೈಕಮಾಂಡ್ ಅಳೆದೂ ತೂಗಿ ಲೆಕ್ಕಾಚಾರ ಹಾಕತೊಡಗಿದೆ.

ವಿಧಾನಸಭೆ ಪ್ರತಿಪಕ್ಷ ನಾಯಕರ ಹುದ್ದೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಉಪ ಮುಖ್ಯಮಂತ್ರಿಗಳಾದ ಆರ್. ಅಶೋಕ್, ಡಾ. ಅಶ್ವತ್ಥ ನಾರಾಯಣ, ಹಿರಿಯ ಶಾಸಕ ಬಸನಗೌಡ ಯತ್ನಾಳ್, ಮಾಜಿ ಸಚಿವ ವಿ. ಸುನೀಲ್ ಕುಮಾರ್ ಹಾಗೂ ಹಿರಿಯ ಶಾಸಕ ಸುರೇಶ್ ಕುಮಾರ್ ಹೆಸರುಗಳು ಪ್ರಮುಖವಾಗಿ ಕೇಳಿಬರುತ್ತಿವೆ. ಇವರಲ್ಲಿ ಕೆಲವರ ನೇಮಕಕ್ಕೆ ‌ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಒಪ್ಪುತ್ತಿಲ್ಲ. ಇನ್ನು ಕೆಲವರ ನೇಮಕಕ್ಕೆ ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಒಪ್ಪಿಗೆ ಇಲ್ಲ. ಇಬ್ಬರೂ ಮುಖಂಡರ ಭಿನ್ನ ನಿಲುವಿನಿಂದಾಗಿ ಸರ್ವಸಮ್ಮತವಾದ ಪ್ರತಿಪಕ್ಷ ನಾಯಕರು ಆಯ್ಕೆ ಮಾಡುವುದು ಬಿಜೆಪಿಯ ಹೈಕಮಾಂಡ್​​ಗೆ ಬಿಗ್ ಚಾಲೆಂಜ್ ಆಗಿದೆ.

ಯಡಿಯೂರಪ್ಪನವರ ಸಲಹೆಗಳನ್ನು ನಿರ್ಲಕ್ಷಿಸಿ, ಅವರನ್ನು ವಿಶ್ವಾಸಕ್ಕೆ ತಗೆದುಕೊಳ್ಳದೇ ವಿಧಾನಸಭೆ ಚುನಾವಣೆಯಲ್ಲಿ ಪೆಟ್ಟು ತಿಂದಿರುವ ಬಿಜೆಪಿ ಹೈಕಮಾಂಡ್ ಈ ಬಾರಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಯಡಿಯೂರಪ್ಪನವರ ವಿರೋಧ ಕಟ್ಟಿಕೊಂಡು ಮಹತ್ವದ ಹುದ್ದೆಗಳಾದ ವಿಧಾನಸಭೆ ಪ್ರತಿಪಕ್ಷ ನಾಯಕ ಆಯ್ಕೆ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷರ ಆಯ್ಕೆ ಮಾಡುವುದು ಹೈಕಮಾಂಡ್​​ಗೆ ಅಷ್ಟು ಸುಲಭವಾಗಿಲ್ಲ.

ಯತ್ನಾಳ್ ಆಯ್ಕೆಗೆ ಸಂತೋಷ್ ಪಟ್ಟು, ಬಿಎಸ್​​ವೈ ಅಪಸ್ವರ?: ಹಿರಿಯ ಶಾಸಕ ಬಸನಗೌಡ ಯತ್ನಾಳ್ ಅವರನ್ನು ಪ್ರತಿಪಕ್ಷ ನಾಯಕರನ್ನಾಗಿ ನೇಮಕ ಮಾಡಲು ಹೈಕಮಾಂಡ್ ಪ್ರಸ್ತಾಪ ಮುಂದಿಟ್ಟಾಗ ಇದಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬಲವಾಗಿ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಯತ್ನಾಳ ನೇಮಕಕ್ಕೆ ಪಟ್ಟು ಹಿಡಿದಿದ್ದಾರೆನ್ನಲಾಗಿದೆ. ಯಡಿಯೂರಪ್ಪನವರ ವಿರೋಧದಿಂದಾಗಿ ಯತ್ನಾಳ್ ಆಯ್ಕೆಯ ಹಾದಿ ಸುಲಭವಾಗಿಲ್ಲ.

ಯತ್ನಾಳ್ ನೇಮಕಕ್ಕೆ ವಿರೋಧ ವ್ಯಕ್ತಪಡಿಸಿರುವ ಯಡಿಯೂರಪ್ಪನವರು ಬಿಜೆಪಿ ಶಾಸಕರ ಅಭಿಪ್ರಾಯ ಸಂಗ್ರಹ ಮಾಡುವಂತೆ ಸಲಹೆ ನೀಡಿದ್ದಾರೆನ್ನಲಾಗಿದೆ. ಅದರಂತೆ ಹೈಕಮಾಂಡ್ ವೀಕ್ಷಕರನ್ನು ರಾಜ್ಯಕ್ಕೆ ಕಳಿಸಿ ಯಾರನ್ನು ಪ್ರತಿಪಕ್ಷ ನಾಯಕರನ್ನಾಗಿ ನೇಮಕ ಮಾಡಬೇಕೆನ್ನುವ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಿದೆ.

ಬೊಮ್ಮಾಯಿ, ಅಶೋಕ್ ಪರ ಬಿಎಸ್​​ವೈ ಒಲವು?: ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಥವಾ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಅವರನ್ನು ನೇಮಕ ಮಾಡುವಂತೆ ಯಡಿಯೂರಪ್ಪ ಹೈಕಮಾಂಡ್​​ಗೆ ಸಲಹೆ ನೀಡಿದ್ದಾರೆನ್ನಲಾಗಿದೆ. ಆದರೆ ಇವರ ನೇಮಕಕ್ಕೆ ಬಿ.ಎಲ್. ಸಂತೋಷ್ ಪ್ರತಿರೋಧ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಹೀಗಾಗಿ ಬಿಜೆಪಿ ಶಾಸಕರ ಒಲವು ಯಾರಿಗಿದೆ ಎನ್ನುವುದನ್ನು ತಿಳಿದು ಪ್ರತಿಪಕ್ಷ ನಾಯಕರ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರ ನೇಮಕ ಮಾಡುವ ನಿಲುವಿಗೆ ಹೈಕಮಾಂಡ್ ಆಸಕ್ತಿ ತೋರಿದೆ. ಅದರಂತೆ ಶಾಸಕರ ಮತ್ತು ಪ್ರಮುಖರ ಅಭಿಪ್ರಾಯಗಳನ್ನೂ ಸಂಗ್ರಹಿಸಿ ವರದಿ ಪಡೆದಿದ್ದು ಯಾವುದೇ ಕ್ಷಣದಲ್ಲಿ ಆಯ್ಕೆಯನ್ನು ಘೋಷಣೆ ಮಾಡಲಿದೆ.

ಇದನ್ನೂ ಓದಿ: ಇಂದೇ ಪ್ರತಿಪಕ್ಷ ನಾಯಕರ ಹೆಸರು ಪ್ರಕಟ.. ಯಾರಿಗೇ ಅವಕಾಶ ನೀಡಿದರೂ ಸ್ವಾಗತ: ಬಿ ಎಸ್​ ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.