ETV Bharat / state

ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿ ರಿಲೀಸ್, ಮೋದಿ, ಯೋಗಿ ಸೇರಿ 40 ಮಂದಿಗೆ ಅವಕಾಶ: ಪಟ್ಟಿಯಲ್ಲಿಲ್ಲ ಕಿಚ್ಚ ಸುದೀಪ್ ಹೆಸರು - ಕರ್ನಾಟಕ ವಿಧಾನಸಭೆ ಚುನಾವಣೆ 2023

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆ ಇಂದು ಬಿಜೆಪಿ ಹೈಕಮಾಂಡ್​ 40 ಮಂದಿ ಸ್ಟಾರ್​ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಈ ಕೆಳಗಿದೆ ಮಾಹಿತಿ.

ಸ್ಟಾರ್​ ಪ್ರಚಾರಕರ ಪಟ್ಟಿ ಬಿಡುಗಡೆ
ಸ್ಟಾರ್​ ಪ್ರಚಾರಕರ ಪಟ್ಟಿ ಬಿಡುಗಡೆ
author img

By

Published : Apr 19, 2023, 11:51 AM IST

ಬೆಂಗಳೂರು: ಟಿಕೆಟ್ ಹಂಚಿಕೆಯಲ್ಲಿ ಹೊಸ ಪ್ರಯೋಗ ನಡೆಸಿದ ಬಿಜೆಪಿ ಹೈಕಮಾಂಡ್ ಅಳೆದು ತೂಗಿ ರಾಜ್ಯ ವಿಧಾನಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ 40 ಮಂದಿ ತಾರಾ ಪ್ರಚಾರಕರ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಆದರೆ, ಸಿಎಂ ಪರ ಪ್ರಚಾರ ಮಾಡುವ ಘೋಷಣೆ ಮಾಡಿರುವ ಕಿಚ್ಚ ಸುದೀಪ್ ಹೆಸರು ಪಟ್ಟಿಯಲ್ಲಿಲ್ಲ. ಹಾಗಾಗಿ ಸುದೀಪ್ ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಅಲ್ಲ ಎಂದು ಸ್ಪಷ್ಟವಾಗಿದೆ.

ಬಿಜೆಪಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೈಕಮಾಂಡ್ ನಾಯಕರ ಜೊತೆ ಯುಪಿ ಸಿಎಂ, ಮಧ್ಯಪ್ರದೇಶ ಸಿಎಂ, ಅಸ್ಸೋಂ, ಮಹಾರಾಷ್ಟ್ರ ಡಿಸಿಎಂ ಜೊತಗೆ ರಾಜ್ಯದಲ್ಲಿ ಮೊದಲಿಗರಾಗಿ ಯಡಿಯೂರಪ್ಪ, ಚುನಾವಣಾ ರಾಜಕೀಯ ನಿವೃತ್ತಿ ಘೋಷಿಸಿದ ಈಶ್ವರಪ್ಪ, ಟಿಕೆಟ್ ವಂಚಿತ ಅರವಿಂದ ಲಿಂಬಾವಳಿ, ಬಿಜೆಪಿ ರೆಬೆಲ್ ನಾಯಕ ಎಂದೇ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮೂವರು ಸಿನಿಮಾ ತಾರೆಯರಿಗೆ ಅವಕಾಶ ಕಲ್ಪಿಸಲಾಗಿದೆ.

ತಾರಾ ಪ್ರಚಾರಕರ ಪಟ್ಟಿ:

  1. ನರೇಂದ್ರ ಮೋದಿ, ಪ್ರಧಾನ ಮಂತ್ರಿ
  2. ಜೆಪಿ ನಡ್ಡಾ , ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
  3. ರಾಜನಾಥ್ ಸಿಂಗ್, ರಕ್ಷಣಾ ಸಚಿವ
  4. ಅಮಿತ್ ಶಾ, ಕೇಂದ್ರ ಗೃಹ ಸಚಿವ
  5. ನಿತಿನ್ ಗಡ್ಕರಿ, ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ
  6. ಬಿಎಸ್ ಯಡಿಯೂರಪ್ಪ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ
  7. ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ
  8. ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
  9. ಪ್ರಹ್ಲಾದ್ ಜೋಶಿ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ
  10. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ
  11. ಕೆ.ಎಸ್ ಈಶ್ವರಪ್ಪ, ಮಾಜಿ ಡಿಸಿಎಂ.
  12. ಗೋವಿಂದ ಕಾರಜೋಳ, ಜಲಸಂಪನ್ಮೂಲ ಸಚಿವ
  13. ಆರ್.ಅಶೋಕ್​, ಕಂದಾಯ ಸಚಿವ
  14. ನಿರ್ಮಲಾ ಸೀತಾರಾಮನ್, ಕೇಂದ್ರ ಹಣಕಾಸು ಸಚಿವೆ
  15. ಸ್ಮೃತಿ ಇರಾನಿ, ಕೇಂದ್ರ ಸಚಿವೆ
  16. ಧರ್ಮೇಂದ್ರ ಪ್ರಧಾನ್, ರಾಜ್ಯ ಚುನಾವಣಾ ಉಸ್ತುವಾರಿ
  17. ಮನ್ಸೂಕ್ ಮಾಂಡವಿಯ, ಕೇಂದ್ರ ಸಚಿವ
  18. ಅಣ್ಣಾಮಲೈ, ರಾಜ್ಯ ಚುನಾವಣಾ ಸಹ ಉಸ್ತುವಾರಿ
  19. ಅರುಣ್ ಸಿಂಗ್, ಬಿಜೆಪಿ ರಾಜ್ಯ ಉಸ್ತುವಾರಿ
  20. ಡಿಕೆ ಅರುಣಾ, ರಾಜ್ಯ ಬಿಜೆಪಿ ಸಹ ಉಸ್ತುವಾರಿ
  21. ಸಿಟಿ ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
  22. ಯೋಗಿ ಆದಿತ್ಯನಾಥ್, ಉತ್ತರ ಪ್ರದೇಶ ಸಿಎಂ
  23. ಶಿವರಾಜ್ ಸಿಂಗ್ ಚೌಹಾಣ್, ಮಧ್ಯಪ್ರದೇಶ ಸಿಎಂ
  24. ಹೇಮಂತ ಬಿಸ್ವ ಶರ್ಮಾ, ಅಸ್ಸೋಂ ಸಿಎಂ
  25. ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಡಿಸಿಎಂ
  26. ಪ್ರಭಾಕರ ಕೋರೆ, ಮಾಜಿ ರಾಜ್ಯಸಭಾ ಸದಸ್ಯ
  27. ಶೋಭಾ ಕರಂದ್ಲಾಜೆ, ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿ
  28. ಎ ನಾರಾಯಣಸ್ವಾಮಿ, ಕೇಂದ್ರ ಸಚಿವ
  29. ಭಗವಂತ್ ಖೂಬಾ, ಕೇಂದ್ರ ಸಚಿವ
  30. ಅರವಿಂದ ಲಿಂಬಾವಳಿ, ಶಾಸಕ
  31. ಶ್ರೀರಾಮುಲು, ಸಾರಿಗೆ ಸಚಿವ
  32. ಕೋಟ ಶ್ರೀನಿವಾಸ ಪೂಜಾರಿ, ಪರಿಷತ್ ಸಭಾ ನಾಯಕ
  33. ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ
  34. ಉಮೇಶ್ ಜಾದವ್, ಸಂಸದ
  35. ಚಲವಾದಿ ನಾರಾಯಣಸ್ವಾಮಿ, ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ
  36. ಎನ್ ರವಿ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ
  37. ಜಿ ವಿ ರಾಜೇಶ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ
  38. ಜಗ್ಗೇಶ್, ರಾಜ್ಯಸಭಾ ಸದಸ್ಯ
  39. ಶ್ರುತಿ, ನಟಿ
  40. ತಾರಾ ಅನೂರಾಧ, ನಟಿ, ಬಿಜೆಪಿಯ ಸ್ಟಾರ್​ ಪ್ರಚಾರಕರಾಗಿದ್ದಾರೆ.

ಸುದೀಪ್ ಹೆಸರಿಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪರ ಚುನಾವಣಾ ಪ್ರಚಾರ ನಡೆಸುವ ಘೋಷಣೆ ಮಾಡಿರುವ ನಟ ಕಿಚ್ಚ ಸುದೀಪ್ ಹೆಸರು ಪಟ್ಟಿಯಲ್ಲಿ ಇಲ್ಲ. ಸಿಎಂ ಬೊಮ್ಮಾಯಿ‌ ಮತ್ತು ಅವರು ಹೇಳಿದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಾಗಿ ಸುದೀಪ್ ಹೇಳಿದ್ದಾರೆ. ಆದರೆ ಅವರು ಇಡೀ ಬಿಜೆಪಿ ಪಕ್ಷದ ಪರ ಪ್ರಚಾರ ಮಾಡುತ್ತಿಲ್ಲ ಹಾಗಾಗಿ ಅವರನ್ನು ಬಿಜೆಪಿ ತಾರಾ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಿಲ್ಲ, ಅವರು ಬಿಜೆಪಿಯ ಸ್ಟಾರ್ ಕ್ಯಾಂಪೇನರ್ ಅಲ್ಲ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.

ಇದನ್ನೂ ಓದಿ: ಇಂದು ಭರ್ಜರಿ ರೋಡ್ ಶೋ ಮೂಲಕ ಸಿಎಂ ನಾಮಪತ್ರ ಸಲ್ಲಿಕೆ.. ಬೊಮ್ಮಾಯಿಗೆ ಸುದೀಪ್​, ನಡ್ಡಾ ಸಾಥ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.