ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ 222 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸಿರುವ ಬಿಜೆಪಿ, ಟಿಕೆಟ್ ನೀಡುವಲ್ಲಿ ಲಿಂಗಾಯತ ಸಮುದಾಯಕ್ಕೆ ಅಗ್ರಸ್ಥಾನ ನೀಡಿದೆ. ಎರಡನೇ ಸ್ಥಾನ ಒಕ್ಕಲಿಗ ಸಮುದಾಯಕ್ಕೆ ದೊರೆತಿದ್ದು, ನಂತರ ಎಸ್ಸಿ, ಎಸ್ಟಿ ಸಮುದಾಯವನ್ನು ಗಣನೆಗೆ ತೆಗೆದುಕೊಂಡಿದೆ. ಬ್ರಾಹ್ಮಣ ಸಮುದಾಯ 5ನೇ ಸ್ಥಾನದಲ್ಲಿದೆ.
ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಬಿಜೆಪಿ ಕಡೆಗಣಿಸಿದೆ ಎನ್ನುವ ಆರೋಪದ ನಡುವೆ ಟಿಕೆಟ್ ಹಂಚಿಕೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಹೆಚ್ಚಿನ ಸ್ಥಾನ ನೀಡಿದ್ದು ಆ ಮೂಲಕ ಆರೋಪ ಸತ್ಯಕ್ಕೆ ದೂರ ಎನ್ನುವುದನ್ನು ಪ್ರತಿಪಾದಿಸಿದೆ. ಒಟ್ಟು 21 ಸಮುದಾಯದ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡಿದೆ.
ಜಾತಿವಾರು ಬಿಜೆಪಿ ಟಿಕೆಟ್ ಹಂಚಿಕೆ ಹೀಗಿದೆ...:
ಲಿಂಗಾಯತ- 67
ಒಕ್ಕಲಿಗ- 42
ಎಸ್ಸಿ- 37
ಎಸ್ಟಿ- 17
ಬ್ರಾಹ್ಮಣ- 13
ಈಡಿಗ-ಬಿಲ್ಲವ- 8
ಕುರುಬ- 7
ರೆಡ್ಡಿ- 7
ಬಂಟ್- 6
ಮರಾಠ-3
ಗಾಣಿಗ-2
ನಾಯ್ಡು-2
ರಜಪೂತ್-2
ಯಾದವ-2
ಬಲಿಜ-1
ಜೈನ್-1
ಕೊಡವ-1
ಕೋಲಿ ಕಬ್ಬಲಿಗ-1
ಕೊಮರ್ ಪಂತ್-1
ಮೊಗವೀರ-1
ತಿಗಳ- 1
ಇದನ್ನೂಓದಿ: ಕಾಂಗ್ರೆಸ್ನ ಐದನೇ ಪಟ್ಟಿ ಪ್ರಕಟ; ಇನ್ನೂ ಐದು ಕ್ಷೇತ್ರಗಳಿಗೆ ಫೈನಲ್ ಆಗದ ಟಿಕೆಟ್