ETV Bharat / state

ಈಶ್ವರಪ್ಪ ನಾಲಿಗೆ ಹರಿತಕ್ಕೆ ಬಿಜೆಪಿ ನಾಯಕರೇ ವಿಲ ವಿಲ: ಪದೇ ಪದೆ ಮುಜುಗರಕ್ಕೊಳಗಾಗುತ್ತಿರುವ ಕೇಸರಿ ನಾಯಕರು - ಕೆ ಎಸ್ ಈಶ್ವರಪ್ಪ ಹೇಳಿಕೆಯಿಂದ ಬಿಜೆಪಿಗೆ ಮುಜುಗರ

ಬಿಜೆಪಿಗೆ ಸಚಿವ ಕೆ.ಎಸ್‌.ಈಶ್ವರಪ್ಪ ಬಿಸಿ ತುಪ್ಪವಾಗಿದ್ದಾರೆ. ಪ್ರತಿಪಕ್ಷ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸುವ ಭರದಲ್ಲಿ ನಾಲಿಗೆಯನ್ನೇ ಕತ್ತಿಯಂತೆ ಪ್ರಯೋಗಿಸುತ್ತಿದ್ದಾರೆ. ಸಂಘ ಪರಿವಾರದ ಬೆಂಬಲವಿರುವ ಕಾರಣಕ್ಕೆ ಈಶ್ವರಪ್ಪ ಹೇಳಿದ್ದು ತಪ್ಪು ಎಂದು ಹೇಳುವ ಧೈರ್ಯವನ್ನು ತೋರುತ್ತಿಲ್ಲ.

ಕೆ ಎಸ್ ಈಶ್ವರಪ್ಪ
ಕೆ ಎಸ್ ಈಶ್ವರಪ್ಪ
author img

By

Published : Feb 17, 2022, 5:54 PM IST

ಬೆಂಗಳೂರು : ಬಿಜೆಪಿ ಹಿರಿಯ ನಾಯಕ ಕೆ.ಎಸ್‌.ಈಶ್ವರಪ್ಪ ಆಗಾಗ ನಾಲಿಗೆ ಹರಿಬಿಟ್ಟು ಸುದ್ದಿಯಾಗುತ್ತಿದ್ದಾರೆ. ಇದರಿಂದ ಬಿಜೆಪಿ ಪದೇ ಪದೆ ಕಿರಿಕಿರಿ ಅನುಭವಿಸುವಂತಾಗಿದೆ. ಈಶ್ವರಪ್ಪ ಹೇಳಿಕೆ ಖಂಡಿಸಲೂ ಆಗದೆ, ಸಮರ್ಥಿಸಿಕೊಳ್ಳಲೂ ಆಗದೆ ಸಂದಿಗ್ಧ ಸ್ಥಿತಿಯನ್ನು ಎದುರಿಸುವಂತಾಗಿದೆ. ಈಗಲೂ ಕೂಡ ಪ್ರತಿಪಕ್ಷಗಳಿಗೆ ಈಶ್ವರಪ್ಪ ನೀಡಿರುವ ಹೇಳಿಕೆಯೇ ಆಹಾರವಾಗಿದ್ದು ಉಭಯ ಸದನಗಳಲ್ಲಿ ಗದ್ದಲ ಕೋಲಾಹಲವೆಬ್ಬಿಸಿದೆ.

ಬಿಜೆಪಿಗೆ ಸಚಿವ ಕೆ.ಎಸ್‌.ಈಶ್ವರಪ್ಪ ಬಿಸಿ ತುಪ್ಪವಾಗಿದ್ದಾರೆ. ಪ್ರತಿಪಕ್ಷ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸುವ ಭರದಲ್ಲಿ ನಾಲಿಗೆಯನ್ನೇ ಕತ್ತಿಯಂತೆ ಪ್ರಯೋಗಿಸುತ್ತಿದ್ದಾರೆ. ಸಂಘ ಪರಿವಾರದ ಬೆಂಬಲವಿರುವ ಕಾರಣಕ್ಕೆ ಈಶ್ವರಪ್ಪ ಹೇಳಿದ್ದು ತಪ್ಪು ಎಂದು ಹೇಳುವ ಧೈರ್ಯವನ್ನು ತೋರುತ್ತಿಲ್ಲ, ಕಳೆದ ಮೂರು ವರ್ಷಗಳಿಂದ ಈಶ್ವರಪ್ಪ ನೀಡಿರುವ ವಿವಾದಿತ ಹೇಳಿಕೆಗಳೇ ಬಿಜೆಪಿ ನಾಯಕರ ನಿದ್ದೆಗೆಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.

ವಿವಾದಿತ ಹೇಳಿಕೆಗಳು: ಮುಸ್ಲಿಂ ಸಮುದಾಯದವರಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದ ಕಾರಣ ಕುರಿತು ಈಶ್ವರಪ್ಪ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಬಿಜೆಪಿ ಕಚೇರಿಯಲ್ಲಿ ಮುಸ್ಲಿಂ ಸಮುದಾಯದವರು ಬಂದು ಕಸ ಗುಡಿಸಿದರೆ ನಂತರ ಅವರಿಗೆ ವಿಧಾನಸಭಾ ಟಿಕೆಟ್ ನೀಡಲಾಗುತ್ತದೆ ಎಂದು 2017 ರ ಮಾರ್ಚ್ ನಲ್ಲಿ ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ವೇಳೆ ಈಶ್ವರಪ್ಪ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.

ಕಲಾಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಎಷ್ಟು ಟಿಕೆಟ್ ನೀಡಿದ್ದೀರಿ ಎನ್ನುವ ಕಾಂಗ್ರೆಸ್ ಪ್ರಶ್ನೆಗೆ ಈಶ್ವರಪ್ಪ ಈ ರೀತಿಯ ಉತ್ತರ ನೀಡಿದ್ದರು. ಅಲ್ಲದೆ ಹೇಳಿಕೆಯನ್ನು ಸದನದಲ್ಲಿ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದರು.

ಇದಕ್ಕೆ ಕಾಂಗ್ರೆಸ್ ನಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು‌‌. ಅಲ್ಪಸಂಖ್ಯಾತರನ್ನು ಬಿಜೆಪಿ ನಡೆಸಿಕೊಳ್ಳುವ ಪರಿ ಇದು ಎಂದು ಟೀಕಿಸಿತ್ತು. ಇದು ಬಿಜೆಪಿ ನಾಯಕರನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿತು. ಇದನ್ನು ಸರಿಪಡಿಸಿಕೊಳ್ಳಲು ಬಿಜೆಪಿ ನಾಯಕರು ಹರಸಾಹಸ ಪಡಬೇಕಾಯಿತು‌. ಕಸ ಗುಡಿಸಲಿ ಎಂದರೆ ಪಕ್ಷದಲ್ಲಿ ಕೆಲಸ ಮಾಡಿದರೆ ನಂತರ ಅವಕಾಶ ಸಿಗುತ್ತೆ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ ಎಂದು ಬಿಜೆಪಿ ನಾಯಕರು ಈಶ್ವರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಳ್ಳಬೇಕಾಯಿತು.

2019 ರ ಸೆಪ್ಟೆಂಬರ್ ನಲ್ಲಿ ಈಶ್ವರಪ್ಪ ಹೇಳಿಕೆ: ಮುಸ್ಲಿಮರ ಮತಗಳನ್ನು ಪಡೆದು ಗೆಲುವು ಸಾಧಿಸುವ ಶಾಸಕರಲ್ಲಿ ಹಿಜಿಡಾತನ ಅಡಗಿದೆ ಎಂದು 2019 ರ ಸೆಪ್ಟೆಂಬರ್ ನಲ್ಲಿ ಈಶ್ವರಪ್ಪ ಹೇಳಿಕೆ ನೀಡಿ ವಿವಾದ ಸೃಷ್ಟಿಸಿಕೊಂಡಿದ್ದರು. ಕಾಂಗ್ರೆಸ್ ನಾಯಕರನ್ನ ಗುರಿಯಾಗಿಸಿ ನೀಡಿದ್ದ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೇಳಿಕೆ ವಾಪಸ್ ಪಡೆದು ಕ್ಷಮೆ ಯಾಚನೆಗೆ ಅಕ್ಕೈ ಪದ್ಮಶಾಲಿ ಆಗ್ರಹಿಸಿದ್ದರು. ಕಾಂಗ್ರೆಸ್ ಕಾರ್ಯಕರ್ತರು ಬೀದಿಗಿಳಿದು ಈಶ್ವರಪ್ಪ ವಿರುದ್ಧ ಹೋರಾಟ ನಡೆಸಿದ್ದರು.

ಬಾಗಲಕೋಟೆಯಲ್ಲಿ 2020 ರ ಆಗಸ್ಟ್ ನಲ್ಲಿ ಕಾಂಗ್ರೆಸ್ ನವರನ್ನು ನಿರಾಶ್ರಿತರಿಗೆ ಹೋಲಿಕೆ ಮಾಡಿ ಈಶ್ವರಪ್ಪ ಹೇಳಿಕೆ ನೀಡಿದ್ದರು. ಜಲಪ್ರಳಯ, ಪ್ರವಾಹ ಪೀಡಿತ ಸಂದರ್ಭದಲ್ಲಿ ಕಾಂಗ್ರೆಸ್ ನವರು ನಿರಾಶ್ರಿತರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದ ಈಶ್ವರಪ, ಉಮೇಶ್ ಕತ್ತಿ ಅವರು ನಿರಾಶ್ರಿತರಿಗೆ ನೆರವಾಗಬಹುದೇನೋ ಅದಕ್ಕೆ ಸಿದ್ದರಾಮಯ್ಯ ಉಮೇಶ್ ಕತ್ತಿಗೆ ಫೋನ್ ಕರೆ ಮಾಡಿರಬಹುದು ಎಂದು ಉಭಯ ನಾಯಕರ ಭೇಟಿ ಕುರಿತು ವಿವಾದಿತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಬಿಜೆಪಿ ನಾಯಕರು ಮತ್ತೆ ಈಶ್ವರಪ್ಪ ಅವರನ್ನು ಸಮರ್ಥಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದರು.

2021ರಲ್ಲಿ ಮತ್ತೊಂದು ವಿವಾದ ಮಾಡಿಕೊಂಡಿದ್ದ ಈಶ್ವರಪ್ಪ: ಈಗ ನಮಗೆ ಶಕ್ತಿ ಬಂದಿದೆ, ನಾವು ಯಾರ ತಂಟೆಗೂ ಹೋಗೋದು ಬೇಡ, ನಮ್ಮ ತಂಟೆಗೆ ಬಂದರೆ ಸುಮ್ಮನಿರೋದು ಬೇಡ ಎಂದು ನಮ್ಮ ಹಿರಿಯರು ಹೇಳಿದ್ದಾರೆ ಎಂದು 2021 ರ ಆಗಸ್ಟ್‌ ನಲ್ಲಿ ಹೇಳಿಕೆ ನೀಡಿದ್ದ ಈಶ್ವರಪ್ಪ, ಹೊಸ ವಿವಾದ ಸೃಷ್ಟಿಸಿದ್ದರು. ಇದು ಅಲ್ಪ ಸಂಖ್ಯಾತರನ್ನ ಗುರಿಯಾಗಿಸಿಕೊಂಡು ನೀಡಿರುವ ಹೇಳಿಕೆಯಾಗಿದೆ ಎನ್ನುವ ಆರೋಪ ಎದುರಿಸಬೇಕಾಯಿತು.

ರಾಷ್ಟ್ರವ್ಯಾಪಿ ಸುದ್ದಿಯಾಗಿ ಟೀಕೆಗೆ ಗುರಿಯಾಗಿದ್ದರು ಆದರೂ ಈಶ್ವರಪ್ಪ ತಮ್ಮ ಹೇಳಿಕೆ ಸಮರ್ಥಿಸಿಕೊಂಡು ಸಮಜಾಯಿಷಿ ನೀಡಿದ್ದರು. ಇದನ್ನೇ ಬಿಜೆಪಿ ನಾಯಕರು ಪ್ರಸ್ತಾಪಿಸಿ ಈಶ್ವರಪ್ಪ ಅವರೇ ಸ್ಪಷ್ಟೀಕರಣ ನೀಡಿದ್ದಾರೆ ಅಲ್ಲಿಗೆ ಈ ವಿಷಯ ಮುಗಿದಿದೆ ಎಂದು ವಿವಾದ ಮೈಮೇಲೆ ಬಾರದಂತೆ ನೋಡಿಕೊಳ್ಳುವ ಜಾಣ್ಮೆ ತೋರಿದ್ದರು.

ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕರನ್ನು ಜೋಕರ್​​​ಗಳೆಂದು ಕರೆದಿದ್ದ ಈಶ್ವರಪ್ಪ ವಿವಾದ ಜೋರಾಗುತ್ತಿದ್ದಂತೆ ತಮ್ಮ ಹೇಳಿಕೆ ವಾಪಸ್ ಪಡೆದುಕೊಂಡಿದ್ದರು. ಪದೇ ಪದೆ ವಿವಾದಿತ ಹೇಳಿಕೆಗಳನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದ ಈಶ್ವರಪ್ಪ ಅಪರೂಪಕ್ಕೆ ಹೇಳಿಕೆ ವಾಪಸ್ ಪಡೆದುಕೊಂಡಿದ್ದರು. ಇದು ರಾಜ್ಯ ಬಿಜೆಪಿ ನಾಯಕರಲ್ಲಿ ಕೊಂಚ ಸಮಾಧಾನ ತಂದಿತ್ತು‌.

ತಾವೂ ಬದುಕಿದ್ದೇವೆ ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ನವರು ರಾಜ್ಯಪಾಲರ ಭಾಷಣದ ವೇಳೆ ಪ್ರತಿಭಟನೆ ಮಾಡಿದ್ದಾರೆ ಎಂದು 2021 ರ ಜಂಟಿ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡಿದ್ದನ್ನು ಟೀಕಿಸಿ ಈಶ್ವರಪ್ಪ ವಿವಾದಿತ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದರು. ಇತಿಹಾಸದಲ್ಲಿ ಮೊದಲ ಬಾರಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಲಾಗಿದೆ ಎನ್ನುವ ಭರಾಟೆಯಲ್ಲಿ ಕಾಂಗ್ರೆಸ್ ಬಗ್ಗೆ ಹಗುರವಾಗಿ ಮಾತನಾಡಿ ಟೀಕೆ ಎದುರಿಸಿದ್ದರು.

ಕೆಂಪುಕೋಟೆ ವಿವಾದದ ಕಿಡಿ: ಇನ್ನು 100 - 200 ವರ್ಷದಲ್ಲಿ ದೆಹಲಿಯ ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಾಡುವ ಕಾಲ ಬರಲಿದೆ ಎಂದು ಈಶ್ವರಪ್ಪ ನೀಡಿರುವ ಹೇಳಿಕೆ ಈಗ ದೊಡ್ಡ ವಿವಾದವಾಗಿದೆ. ರಾಷ್ಟ್ರಧ್ವಜಕ್ಕೆ ಈಶ್ವರಪ್ಪ ಅಪಮಾನ ಮಾಡಿದ್ದಾರೆ. ದೇಶದ್ರೋಹದ ಕೇಸ್ ದಾಖಲಿಸಬೇಕು, ಸಂಪುಟದಿಂದ ಈಶ್ವರಪ್ಪರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಪಟ್ಟುಹಿಡಿದು ಉಭಯ ಸದನದಲ್ಲಿ ಹೋರಾಟ ನಡೆಸುತ್ತಿದೆ.

ಆದರೂ ಈಶ್ವರಪ್ಪ ಪರ ಬಿಜೆಪಿ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಈಶ್ವರಪ್ಪ ಹೇಳಿಕೆ ನೀಡಿರುವ ಅರ್ಥ ಬೇರೆ, ಅವರು ರಾಷ್ಟ್ರಧ್ವಜ ತೆರವು ಮಾಡುವ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡುತ್ತಿದ್ದಾರೆ. ಈಶ್ವರಪ್ಪ ಹೇಳಿಕೆ ಖಂಡಿಸಿದಲ್ಲಿ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಬೇಕಾಗಲಿದೆ ಎಂದು ಸಮರ್ಥನೆಗೆ ಮುಂದಾಗಿದ್ದಾರೆ.

ರಾಷ್ಟ್ರಧ್ವಜದ ಕೆಳಗೆ ಭಗವಾಧ್ವ ಹಾರಿಸುವ ಹೇಳಿಕೆ ನೀಡಿದ್ದಾರೆ, ರಾಷ್ಟ್ರಧ್ವಜ ಕೆಳಗಿಳಿಸಿ ಅಲ್ಲ, ಕಾಶ್ಮೀರದಲ್ಲಿ ಎರಡು ಧ್ಚಜ ಹಾರಿಸುತ್ತಿದ್ದಾಗ ಸುಮ್ಮನಿದ್ದರು, ಲಾಲ್ ಚೌಕ್ ನಲ್ಲಿ ಇವರಿಗೆ ರಾಷ್ಟ್ರಧ್ವಜ ಹಾರಿಸಲಾಗಲಿಲ್ಲ ಇಂತವರಿಗೆ ಈಗ ರಾಷ್ಟ್ರಧ್ವಜದ ಬಗ್ಗೆ ಎಲ್ಲಿಲ್ಲದ ಪ್ರೀತಿ ಬಂದಿದೆ ಎಂದು ಕೈ ನಾಯಕರ ವಿರುದ್ಧ ವಾಗ್ದಾಳಿ ನಡೆಸಿ ಈಶ್ವರಪ್ಪ ಬೆನ್ನಿಗೆ ನಿಲ್ಲುತ್ತಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ ನಾಯಕರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ: ಸಚಿವ ಈಶ್ವರಪ್ಪ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.