ಬೆಂಗಳೂರು : ಕುಟುಂಬಕ್ಕೊಂದೇ ಟಿಕೆಟ್ ಎನ್ನುವ ಕಾಂಗ್ರೆಸ್ ಚಿಂತನಾ ಸಭೆಯ ನಿರ್ಧಾರವನ್ನು ಬಿಜೆಪಿ ಟೀಕಿಸಿದೆ. ಗಾಂಧಿ ಕುಟುಂಬ ಮತ್ತವರ ನಿಷ್ಟರನ್ನು ಈ ನಿಯಮದಿಂದ ಹೊರಗಿಟ್ಟು, ಕುಟುಂಬ ರಾಜಕಾರಣ ಪೋಷಣೆ ಮುಂದುವರೆಸಲು ಕಾಂಗ್ರೆಸ್ ಮುಂದಾಗಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.
ಟ್ವೀಟ್ ಮೂಲಕ ಟೀಕೆ : ಕಾಂಗ್ರೆಸ್ ಚಿಂತನಾ ಸಭೆಯಿಂದ ದೇಶಕ್ಕೆ ಲಭ್ಯವಾದ ವಿಶೇಷ ವಾರ್ತೆಯಾದರೂ ಏನು? ಬೆಳಗ್ಗೆ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂಬ ಪ್ರಸ್ತಾಪ. ಸಂಜೆಯಾಗುತ್ತಲೇ ಈ ನಿಯಮ ಗಾಂಧಿ ಕುಟುಂಬಕ್ಕೆ ಅನ್ವಯವಾಗದು ಎಂಬ ಘೋಷಣೆ. ರಾತ್ರಿಯಾಗುತ್ತಲೇ, ಈ ನಿಯಮ ಗಾಂಧಿ ನಿಷ್ಠ ಕೆಲವು ಕುಟುಂಬಗಳಿಗೆ ಅನ್ವಯವಿಲ್ಲ ಎಂದು ರಾಜಿ ಮಾಡಿಕೊಳ್ಳಲಾಯಿತು ಎಂದು ಟ್ವೀಟ್ ಮೂಲಕ ಬಿಜೆಪಿ ಟೀಕಿಸಿದೆ.
-
ಕೆಲವು ಕುಟುಂಬಗಳಿಗೆ ಕಾಂಗ್ರೆಸ್ ನಿಯಮ ಅನ್ವಯವಾಗುವುದಿಲ್ಲ ಎಂಬ ಮಾತಿನ ಅರ್ಥವೇನು? ಯಾವುದು ಆ ಕುಟುಂಬಗಳು?
— BJP Karnataka (@BJP4Karnataka) May 15, 2022 " class="align-text-top noRightClick twitterSection" data="
ಇಡಿ ದೇಶಕ್ಕೆ ಕುಟುಂಬ ರಾಜಕಾರಣವನ್ನು ಪರಿಚಯಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಅದನ್ನು ಪೋಷಿಸುವುದು ಅನಿವಾರ್ಯವಾಗಿದೆ.
ಕಾಂಗ್ರೆಸ್ ನೀತಿಯ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ವಂಶವಾದವನ್ನು ಮಾತ್ರ ಬಿಡುವುದಿಲ್ಲ!
">ಕೆಲವು ಕುಟುಂಬಗಳಿಗೆ ಕಾಂಗ್ರೆಸ್ ನಿಯಮ ಅನ್ವಯವಾಗುವುದಿಲ್ಲ ಎಂಬ ಮಾತಿನ ಅರ್ಥವೇನು? ಯಾವುದು ಆ ಕುಟುಂಬಗಳು?
— BJP Karnataka (@BJP4Karnataka) May 15, 2022
ಇಡಿ ದೇಶಕ್ಕೆ ಕುಟುಂಬ ರಾಜಕಾರಣವನ್ನು ಪರಿಚಯಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಅದನ್ನು ಪೋಷಿಸುವುದು ಅನಿವಾರ್ಯವಾಗಿದೆ.
ಕಾಂಗ್ರೆಸ್ ನೀತಿಯ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ವಂಶವಾದವನ್ನು ಮಾತ್ರ ಬಿಡುವುದಿಲ್ಲ!ಕೆಲವು ಕುಟುಂಬಗಳಿಗೆ ಕಾಂಗ್ರೆಸ್ ನಿಯಮ ಅನ್ವಯವಾಗುವುದಿಲ್ಲ ಎಂಬ ಮಾತಿನ ಅರ್ಥವೇನು? ಯಾವುದು ಆ ಕುಟುಂಬಗಳು?
— BJP Karnataka (@BJP4Karnataka) May 15, 2022
ಇಡಿ ದೇಶಕ್ಕೆ ಕುಟುಂಬ ರಾಜಕಾರಣವನ್ನು ಪರಿಚಯಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಅದನ್ನು ಪೋಷಿಸುವುದು ಅನಿವಾರ್ಯವಾಗಿದೆ.
ಕಾಂಗ್ರೆಸ್ ನೀತಿಯ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ವಂಶವಾದವನ್ನು ಮಾತ್ರ ಬಿಡುವುದಿಲ್ಲ!
ಕೆಲವು ಕುಟುಂಬಗಳಿಗೆ ಕಾಂಗ್ರೆಸ್ ನಿಯಮ ಅನ್ವಯವಾಗುವುದಿಲ್ಲ ಎಂಬ ಮಾತಿನ ಅರ್ಥವೇನು? ಯಾವುದು ಆ ಕುಟುಂಬಗಳು? ಇಡೀ ದೇಶಕ್ಕೆ ಕುಟುಂಬ ರಾಜಕಾರಣವನ್ನು ಪರಿಚಯಿಸಿದ ಕಾಂಗ್ರೆಸ್ ಪಕ್ಷಕ್ಕೆ ಈಗ ಅದನ್ನು ಪೋಷಿಸುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ನೀತಿಯ ಬಗ್ಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿದ್ದರೂ ವಂಶವಾದವನ್ನು ಮಾತ್ರ ಬಿಡುವುದಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕಾಂಗ್ರೆಸ್ ನಿರ್ಧಾರಕ್ಕೆ ಬಿಜೆಪಿ ಹಾಸ್ಯ : "ಧೃತರಾಷ್ಟ್ರ ಮೋಹ" ಎಂಬ ಮಾತು ರಾಜಕಾರಣದಲ್ಲಿ ಸದಾ ಜೀವಂತವಾಗಿರಬೇಕೆಂದು ಕಾಂಗ್ರೆಸ್ ಬಯಸುತ್ತದೆ. ಏಕೆಂದರೆ, ತಮ್ಮ ನಂತರ ತಮ್ಮ ಪಳಯುಳಿಕೆಗಳನ್ನೂ ಅಧಿಕಾರದಲ್ಲಿ ಪ್ರತಿಷ್ಠಾಪಿಸಬೇಕೆಂಬ ವಾಂಛೆ ಕಾಂಗ್ರೆಸ್ ರಕ್ತದಲ್ಲಿಯೇ ಇದೆ. ನೆಹರೂ, ಇಂದಿರಾ, ರಾಜೀವ್, ಸೋನಿಯಾ, ರಾಹುಲ್, ಪ್ರಿಯಾಂಕ ಇವೆರಲ್ಲರೂ ಇದಕ್ಕೆ ಜ್ವಲಂತ ಉದಾಹರಣೆಗಳು ಎಂದು ಕಾಂಗ್ರೆಸ್ ನಿರ್ಧಾರವನ್ನು ಹಾಸ್ಯ ಮಾಡಿದೆ.
ಇದನ್ನೂ ಓದಿ: ಚಿಕ್ಕಬಳ್ಳಾಪುರ : ವಿಶ್ವ ದಾಖಲೆ ಸೃಷ್ಟಿಸಿದ ಬೃಹತ್ ಆರೋಗ್ಯ ಮೇಳ
ಕಾಂಗ್ರೆಸ್ಗೆ ಬಿಜೆಪಿ ಪ್ರಶ್ನೆ : ದೇಶವೇ ಬೆರಗುಗಣ್ಣಿನಿಂದ ನೋಡುತ್ತಿದ್ದ ಉತ್ತರಪ್ರದೇಶದ ಚುನಾವಣೆಯಲ್ಲಿ ಮೋದಿ ಅವರು ಮಹತ್ವದ ನಿರ್ಧಾರ ಕೈಗೊಂಡು ವಂಶವಾದಕ್ಕೆ ಪೋಷಣೆ ನೀಡದೇ ಬಲಾಢ್ಯರ ಮಕ್ಕಳಿಗೆ ಟಿಕೆಟ್ ನಿರಾಕರಿಸಿದರು. ಈ ನಿರ್ಧಾರದಿಂದ ಪಕ್ಷಕ್ಕೆ ಸೋಲಾದರೆ ಅದರ ಹೊಣೆ ತಾವೇ ಹೊರುವುದಾಗಿ ಘೋಷಿಸಿದರು. ಕಾಂಗ್ರೆಸ್ ಪಕ್ಷಕ್ಕೆ ಈ ಧೈರ್ಯ ತೋರಿಸುವ ತಾಕತ್ತಿದೆಯೇ? ಎಂದು ಗಾಂಧಿ ಕುಟುಂಬವನ್ನು ಬಿಜೆಪಿ ನೇರವಾಗಿ ಪ್ರಶ್ನಿಸಿದೆ.