ETV Bharat / state

ಯುಗಾದಿ ಹಬ್ಬದ ಶುಭಾಶಯ ಕೋರಿ ಸರಳವಾಗಿ ಆಚರಿಸುವಂತೆ ಮನವಿ ಮಾಡಿದ ಬಿಜೆಪಿ- ಕಾಂಗ್ರೆಸ್​ ನಾಯಕರು

ಯುಗಾದಿ ಹಬ್ಬ ಸರಳವಾಗಿ ಆಚರಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಮನವಿ ಮಾಡಿದ್ದಾರೆ. ಜೊತೆಗೆ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಆರ್.ವಿ. ವಿದೇಶಪಾಂಡೆ ಸಲ್ಲಿಸಿದ್ದಾರೆ.

BJP-Congress leaders
ಯುಗಾದಿ ಹಬ್ಬದ ಶುಭಾಶಯ ಕೋರಿ ಸರಳವಾಗಿ ಆಚರಿಸುವಂತೆ ಮನವಿ ಮಾಡಿದ ಬಿಜೆಪಿ- ಕಾಂಗ್ರೆಸ್​ ನಾಯಕರು
author img

By

Published : Mar 24, 2020, 9:41 PM IST

ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸಾರ್ವಜನಿಕರು ಯುಗಾದಿ ಹಬ್ಬ ಸರಳವಾಗಿ ಆಚರಿಸುವಂತೆ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರು ಮನವಿ ಮಾಡಿದ್ದಾರೆ. ಜೊತೆಗೆ ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ಆರ್.ವಿ. ವಿದೇಶಪಾಂಡೆ ಸಲ್ಲಿಸಿದ್ದಾರೆ.

ಯುಗಾದಿ ಹಬ್ಬದ ಶುಭಾಶಯ ಕೋರಿ ಸರಳವಾಗಿ ಆಚರಿಸುವಂತೆ ಮನವಿ ಮಾಡಿದ ಬಿಜೆಪಿ- ಕಾಂಗ್ರೆಸ್​ ನಾಯಕರು

ವಿಧಾನಸೌಧದ ಕಚೇರಿಯಲ್ಲಿ ಮಾತನಾಡಿದ‌ ಡಿಸಿಎಂ ಕಾರಜೋಳ, ಸಾರ್ವಜನಿಕರು ತಮ್ಮ ಮನೆಯಲ್ಲಿ ಇದ್ದು, ಕುಟುಂಬಕ್ಕೆ ಸೀಮಿತವಾಗಿ ಯುಗಾದಿ ಹಬ್ಬವನ್ನು ಆಚರಿಸುವ ಮೂಲಕ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಹಕರಿಬೇಕು ಎಂದು ಮನವಿ ಮಾಡಿದ್ದಾರೆ.

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯಗಳು. ನೂತನ ಸಂವತ್ಸರವು ಎಲ್ಲರ ಬಾಳಿನಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ. ಹೊಸ ಚೈತನ್ಯ, ಹೊಸತನ ಮೂಡಿಸಲಿ. ಹೊಸ ವರ್ಷವು ಉತ್ತಮ ಮಳೆ, ಬೆಳೆ, ಸಂಪತ್ತು, ಸಮೃದ್ಧಿಯನ್ನು ತರಲಿ ಎಂದು ಕಾರಜೋಳ ಆಶಯ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎಂಬಂತೆ ಹಿಂದೂಗಳ ಪವಿತ್ರ ಹಬ್ಬವಾದ ಈ ಯುಗಾದಿಯ ದಿವ್ಯ ಸಂದರ್ಭದಲ್ಲಿ ಸರ್ವರಿಗೂ ಶುಭಾಶಯಗಳನ್ನು ಡಿಸಿಎಂ ಲಕ್ಷ್ಮಣ ಸವದಿ ಕೋರಿದ್ದಾರೆ. ಈಗ ನಾಡಿಗೆ ಕಾಡುತ್ತಿರುವ ಕೊರೊನಾ ಪಿಡುಗಿನಿಂದ ಮುಕ್ತಿಯನ್ನು ಕೊಟ್ಟು ಜನರಲ್ಲಿ ಶಾಂತಿ, ಸಮೃದ್ಧಿ ಮತ್ತು ಆರೋಗ್ಯವನ್ನು ಭಗವಂತ ದಯಪಾಲಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಕೊರೊನಾ ತಡೆಗಟ್ಟುವ ಅಂಗವಾಗಿ ಮನೆಯಲ್ಲಿಯೇ ಭಕ್ತಿ ಶ್ರದ್ಧೆಯಿಂದ ಸರಳವಾಗಿ ನಾವೆಲ್ಲರೂ ಹಬ್ಬವನ್ನು ಆಚರಿಸಿ ನಮ್ಮ ಸಾಮಾಜಿಕ ಬದ್ಧತೆ ಪ್ರದರ್ಶಿಸೋಣ. ಈ ಯುಗಾದಿಯು ಸರ್ವರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದು ಹಾರೈಸುತ್ತೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಹಬ್ಬದ ಶುಭ ಕೋರಿದ್ದಾರೆ.

ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಶುಭಾಶಯ ಸಲ್ಲಿಸಿದ ಡಿಕೆಶಿ

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮ ಸಂದೇಶದಲ್ಲಿ, ರಾಜ್ಯದ ಜನತೆಗೆ ಹೊಸವರ್ಷ ಯುಗಾದಿಯ ಶುಭಾಶಯಗಳು. ರಾಜ್ಯದ ಎಲ್ಲ ವರ್ಗದ ಜನರು ಅಂದರೆ ರೈತರು, ಕಾರ್ಮಿಕರು, ವ್ಯಾಪಾರಿಗಳು ಎಲ್ಲ ಸಂಕಷ್ಟಗಳಿಂದ ಪಾರಾಗಿ, ಸಂತೋಷದಿಂದ ಮುಂದಿನ ವರ್ಷ ಮಳೆ-ಬೆಳೆ ಆರ್ಥಿಕ ಸಂಕಷ್ಟ ಎಲ್ಲವೂ ನಿವಾರಣೆಯಾಗಲಿ ಎಂದು ಹೇಳಿ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಇಡೀ ಪ್ರಪಂಚದಲ್ಲಿ ಒಂದು ದೊಡ್ಡ ಮಾರಿ ನಮ್ಮೆಲ್ಲರನ್ನು ಕಾಡುತ್ತಿದೆ. ಇದನ್ನು ಎದುರಿಸುವ ಶಕ್ತಿಯನ್ನು ಭಗವಂತ ಹೊಸವರ್ಷದಲ್ಲಿ ನೀಡಲಿ. ಇದರಿಂದ ಯಾರಿಗೂ ತೊಂದರೆಯಾಗದ ರೀತಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಹಾಗೂ ಸಮಾಜವನ್ನು ಉಳಿಸಿಕೊಳ್ಳುವ ಕೆಲಸವನ್ನು ನೀವು ನಾವು ಎಲ್ಲಾ ಸೇರಿ ಮಾಡೋಣ. ರಾಜ್ಯದ ಸಮಸ್ತ ಜನತೆ ಇದಕ್ಕೆ ಸಹಕರಿಸಬೇಕೆಂದು ಎಲ್ಲ ನಮ್ಮ ಕಾರ್ಯಕರ್ತರಿಗೆ ಹಾಗೂ ಸಾಮಾನ್ಯ ಕಾರ್ಯಕರ್ತರಿಗೆ ಕರೆ ಕೊಡುತ್ತೇನೆ ಎಂದಿದ್ದಾರೆ.

ಯುಗಾದಿ ಹಬ್ಬವನ್ನ ಸರಳವಾಗಿ ಆಚರಿಸೋಣ: ಮಾಜಿ ಸಚಿವ ಆರ್. ವಿ. ದೇಶಪಾಂಡೆ ತಮ್ಮ ಸಂದೇಶದಲ್ಲಿ, ಯುಗಾದಿ ಹಿಂದೂಗಳ ಪಾಲಿಗೆ ಹೊಸ ವರ್ಷ. ಆದರೆ ಕೋವಿಡ್ 19 ಎಂಬ ಮಾರಕ ಕಾಯಿಲೆಯಿಂದ ನಾವೆಲ್ಲರೂ ಸಂಭ್ರಮದಿಂದ ಆಚರಿಸುವ ಸ್ಥಿತಿಯಲ್ಲಿ ಇಲ್ಲ. ಮನೆಯಲ್ಲಿಯೇ ಈ ಬಾರಿ ಅತ್ಯಂತ ಸರಳವಾಗಿ ಆಚರಿಸೋಣ. ಜೊತೆಗೆ ಈ ವಸಂತ ಋತು ಹಾಗೂ ಶಾರ್ವರಿನಾಮ ಸಂವತ್ಸರದಲ್ಲಿ ಎಲ್ಲ ಸಂಕಷ್ಟಗಳು ದೂರವಾಗಲಿ, ದೇಶದ ಹಾಗೂ ಜನರು ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತಾಗಲಿ ಎಂದಿದ್ದಾರೆ.ದೇವರ ದೆಯೇ ಈ ನಾಡಿನ ಜನರ ಮೇಲಿರಲಿ. ಈ ಮುಂಬರುವ ಹೊಸ ವರ್ಷದಲ್ಲಿ ರೈತರಿಗೆ ಬಾಳು ಬೆಳಗಲಿ, ರೋಗ- ರುಜಿನಗಳಿಂದ ಮುಕ್ತಿ ಸಿಗಲಿ ಎಂದು ನಾನು ಶುಭ ಹಾರೈಸುತ್ತೇನೆ ಎಂದಿದ್ದಾರೆ.

ಹಬ್ಬವನ್ನು ಸುರಕ್ಷಿತವಾಗಿ, ಸರಳವಾಗಿ ಆಚರಿಸೋಣ: ನಾಡಿನ ಸಮಸ್ತ ಜನತೆಗೆ ಯುಗಾದಿ ಹಬ್ಬದ ಅಂಗವಾಗಿ ಶುಭಾಶಯ ಕೋರಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು, ಮಹಾಮಾರಿ ಕೊರೊನಾ ಕಾಡುತ್ತಿದ್ದು, ಈ ಬಾರಿ ಯುಗಾದಿ‌ ಹಬ್ಬವನ್ನು ಸುರಕ್ಷಿತವಾಗಿ, ಸರಳವಾಗಿ ಮನೆಯಲ್ಲೇ ಆಚರಿಸೋಣ ಎಂದು ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಒಬ್ಬರ ಬೇಜವಾಬ್ದಾರಿ ಸಾವಿರಾರು ಅಮಾಯಕರ ಜೀವಕ್ಕೆ ಕಂಟಕವಾಗದಿರಲಿ. ಹೊಸ ವರ್ಷ ಯುಗಾದಿ ಸಮಸ್ತರಿಗೂ ಸುಖ, ಸಂತೋಷ, ಆರೋಗ್ಯ ತರಲಿ ಎಂದು ಹಾರೈಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.