ಬೆಂಗಳೂರು : ವೈದ್ಯರ ಅನುಮತಿ ಇಲ್ಲದೆ ಮೆಡಿಕಲ್ ಕಿಟ್ನಲ್ಲಿ ಅಪಾಯಕಾರಿ ಸ್ಟಿರಾಯ್ಡ್ ಹಂಚಿಕೆ ಆರೋಪ ಸಂಬಂಧ ಯುತ್ ಕಾಂಗ್ರೆಸ್ ಅಧ್ಯಕ್ಷ ರಕ್ಷರಾಮಯ್ಯ ವಿರುದ್ಧ ನಗರ ಪೊಲೀಸ್ ಕಮಿಷನರ್ಗೆ ಬಿಜೆಪಿ ಯುವ ಮೋರ್ಚಾ ದೂರು ನೀಡಿದೆ.
ಕೊರೊನಾ ಹಿನ್ನೆಲೆಯಲ್ಲಿ ರಕ್ಷರಾಮಯ್ಯ ಮೆಡಿಕಲ್ ಕಿಡ್ ನೀಡುತ್ತಿರುವುದು ಒಳ್ಳೆಯ ಕೆಲಸ. ಆದರೆ, ತಿಳುವಳಿಕೆ ಕೊರತೆಯಿಂದ ಅಪಾಯಕಾರಿ ಸ್ಟಿರಾಯ್ಡ್ ನೀಡುತ್ತಿರುವುದು ಸರಿಯಲ್ಲ ಎಂದು ಆರೋಪಿಸಿ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜೇಂದ್ರ ದೂರು ನೀಡಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜೇಂದ್ರ, ರಕ್ಷರಾಮಯ್ಯ ಮೆಡಿಕಲ್ ಕಿಟ್ ವಿತರಣೆ ಮಾಡಿದ್ದಾರೆ. ಕಿಟ್ನಲ್ಲಿ ಡೆಕ್ಸಾಹಿಂ ಎಂಬ ಸ್ಟಿರಾಯ್ಡ್ ಇಟ್ಟು ಮನೆ ಮನೆಗೆ ತಲುಪಿಸಿದ್ದಾರೆ. ಇದು ಅಪಾಯಕಾರಿ, ಇದರಿಂದ ಬೇರೆ ರೋಗಗಳೂ ಬರುವ ಸಾಧ್ಯತೆಯಿದೆ.
ವೈದ್ಯರ ಅನುಮತಿ ಇಲ್ಲದೆ ಸ್ಟಿರಾಯ್ಡ್ ಹಂಚುವುದು ತಪ್ಪು. ಇಷ್ಟು ದೊಡ್ಡ ಪ್ರಮಾಣದ ಸ್ಟಿರಾಯ್ಡ್ ಇವರಿಗೆ ಹೇಗೆ ಸಿಕ್ಕಿತು ಎಂಬುವುದು ಗೊತ್ತಿಲ್ಲ.
ಇದರ ಬಗ್ಗೆ ಈಗಾಗಲೇ ಡ್ರಗ್ ಕಂಟ್ರೋಲ್ ಅವರಿಗೆ ದೂರು ನೀಡಿದ್ದೇವೆ. ಇಂದು ಕಮಿಷನರ್ ಅವರಿಗೆ ದೂರು ನೀಡಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕಿದೆ ಎಂದು ಆಗ್ರಹಿಸಿದರು.