ETV Bharat / state

ಬಿಜೆಪಿ ಅಭ್ಯರ್ಥಿಗಳ ಆಸ್ತಿ ವಿವರ ಘೋಷಣೆ: ಎಂಟಿಬಿ ಅತೀ ಶ್ರೀಮಂತ ರಾಜಕಾರಣಿ - ವಿಧಾನಪರಿಷತ್​ ಚುನಾವಣೆ 2020

ವಿಧಾನ ಪರಿಷತ್​​ ಚುನಾವಣೆಗೆ ಬಿಜೆಪಿಯ ಮೂರು ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದು, ಎಂಟಿಬಿ ನಾಗರಾಜ್ ಅತೀ ಶ್ರೀಮಂತ ರಾಜಕಾರಣಿ ಎನಿಸಿಕೊಂಡಿದ್ದಾರೆ.

BJP candidates declare Property Profile
ಎಂಟಿಬಿ ನಾಗರಾಜ್
author img

By

Published : Jun 19, 2020, 8:06 AM IST

ಬೆಂಗಳೂರು : ವಿಧಾನಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಎಂ.ಟಿ.ಬಿ.ನಾಗರಾಜ್ ಅತೀ ಶ್ರೀಮಂತ ರಾಜಕಾರಣಿಯಾಗಿದ್ದು, 1,224 ಕೋಟಿ ರೂ. ಗಿಂತ ಹೆಚ್ಚು ಮೌಲ್ಯದ ಆಸ್ತಿಯ ವಾರಸುದಾರರಾಗಿದ್ದಾರೆ.

ಎಂ.ಟಿ.ಬಿ.ನಾಗರಾಜ್ ಅವರ ಹೆಸರಲ್ಲಿ 884 ಕೋಟಿ ರೂ. ಗಿಂತ ಹೆಚ್ಚು ಆಸ್ತಿ ಇದ್ದು, ಪತ್ನಿ ಶಾಂತಕುಮಾರಿ ಹೆಸರಲ್ಲಿ 331 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಆಸ್ತಿ ಇದೆ. ಎಂ.ಟಿ.ಬಿ ಹೆಸರಲ್ಲಿ 461 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 416 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿಯ ಹೆಸರಲ್ಲಿ 160 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 179 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಎಂ.ಟಿ.ಬಿ ನಾಗರಾಜ್ 52.75 ಕೋಟಿ ರೂ. ಸಾಲ ಹೊಂದ್ದಿದರೆ, ಪತ್ನಿ ಹೆಸರಲ್ಲಿ 1.97 ಕೋಟಿ ರೂ. ಸಾಲ ಇದೆ ಎಂದು ಚುನಾವಣಾಧಿಕಾರಿಗೆ ಸಲ್ಲಿಸಿರುವ ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ.

ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ : ಎಂ.ಟಿ.ಬಿ ನಾಗರಾಜ್ 2.23 ಕೋಟಿ ರೂ. ಮೌಲ್ಯದ ಡೈಮೆಂಡ್, ಪ್ಲಾಟಿನಂ ಸೇರಿದಂತೆ ಚಿನ್ನಾಭರಣಗಳನ್ನು ಹೊಂದಿದ್ದು, ಪತ್ನಿಯ ಬಳಿ 1.48 ಕೋಟಿ ರೂ. ಮೌಲ್ಯದ ಡೈಮೆಂಡ್, ಪ್ಲಾಟಿನಂ ಸೇರಿದಂತೆ ಚಿನ್ನಾಭರಣ ಇದೆ. ನಾಗರಾಜ್ ಬಳಿ 32.60 ಲಕ್ಷ ರೂ. ನಗದು ಇದ್ದು, ಪತ್ನಿ 45.60 ಲಕ್ಷ ರೂ. ನಗದು ಇಟ್ಟುಕೊಂಡಿದ್ದಾರೆ. 2.48 ಕೋಟಿ ರೂ. ಮೌಲ್ಯದ ಐದು ಕಾರುಗಳು ಎಂ.ಟಿ.ಬಿ ಬಳಿ ಇದೆ. ಈ ಪೈಕಿ 51.50 ಲಕ್ಷ ರೂ. ಮೌಲ್ಯದ ಲ್ಯಾಂಡ್ ರೋವರ್, 96.12 ಲಕ್ಷ ರೂ. ಮೌಲ್ಯದ ಮರ್ಸಿಡೀಸ್​ ಬೆನ್ಝ್​ , 29 ಲಕ್ಷ ರೂ. ಮೌಲ್ಯದ ಫಾರ್ಚೂನರ್ ಕಾರುಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.