ETV Bharat / state

ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನಾಚರಣೆ... ಬೆಂಗಳೂರು ಅಭಿವೃದ್ಧಿಗೆ ಸಂವಾದ - ಅಟಲ್ ಬಿಹಾರಿ ವಾಜಪೇಯಿ ಜನ್ಮದಿನ ಆಚರಣೆ

ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನದ ನಿಮಿತ್ತ ಸರ್ಕಾರದ ಉತ್ತಮ ಆಡಳಿತ ದಿವಸ ಎಂದು ಆಚರಿಸಲಾಯಿತು. ಡಿಸಿಎಂ ಅಶ್ವತ್ಥ್ ನಾರಾಯಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡದ್ದರು.

Birthday of former Prime Minister Vajpayee in bangalore
ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನಾಚರಣೆ
author img

By

Published : Dec 25, 2019, 7:16 PM IST

ಬೆಂಗಳೂರು: ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ನಿಮಿತ್ತ ಸರ್ಕಾರ ಹಾಗೂ ನಾಗರಿಕ ಸಂಸ್ಥೆ ಯುನೈಟೆಡ್ ವೇ ಜಂಟಿಯಾಗಿ ಉತ್ತಮ ಆಡಳಿತ ದಿವಸ ಎಂದು ಆಚರಿಸಲಾಯಿತು.

ಮಾಜಿ ಪ್ರಧಾನಿ ವಾಜಪೇಯಿ ಜನ್ಮದಿನಾಚರಣೆ

ಬೆಂಗಳೂರು ಜನರ ಕುಂದು ಕೊರತೆಗಳಿಗೆ ಸ್ಥಳೀಯ ಇಲಾಖೆಗಳು ಎಷ್ಟು ಬೇಗ ಸ್ಪಂದಿಸುತ್ತದೆ ಹಾಗೂ ಪರಿಹರಿಸುತ್ತೆ. ನಗರ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹೇಗೆ, ನಗರದ ಆಡಳಿತವನ್ನು ಹೆಚ್ಚೆಚ್ಚು ಆನ್ ಲೈನ್ ಮಾಡುವುದು ಹಾಗೂ ರಸ್ತೆ ಇತಿಹಾಸಗಳನ್ನು ದಾಖಲೀಕರಣ ಮಾಡುವ ಬಗ್ಗೆ ವಿವರವಾದ ಚರ್ಚೆ ಹಾಗೂ ಸಂವಾದ ಮಾಡಲಾಯಿತು.

ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ನೇತೃತ್ವದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ಜಲಮಂಡಳಿ ಅಧ್ಯಕ್ಷ ಕೆಂಪರಾಮಯ್ಯ, ಬಿಡಿಎ ಅಧ್ಯಕ್ಷ ಪ್ರಕಾಶ್, ಬೆಸ್ಕಾಂ ಎಂಡಿ ರಾಜೇಶ್ ಗೌಡ ಪಾಲ್ಗೊಂಡಿದ್ದರು.

Intro:ಬೆಂಗಳೂರಿನ ಆಡಳಿತ ಉತ್ತಮಗೊಳಿಸೋದು ಹೇಗೆ? ಇಲಾಖಾ ಮುಖ್ಯಸ್ಥರ ಚರ್ಚೆ- ಸಂವಾದ

ಬೆಂಗಳೂರು: ಇಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ. ಇದರ ಅಂಗವಾಗಿ ಸರ್ಕಾರ ಹಾಗೂ ನಾಗರಿಕ ಸಂಸ್ಥೆಯಾದ ಯುನೈಟೆಡ್ ವೇ ಒಟ್ಟಾಗಿ ಉತ್ತಮ ಆಡಳಿತ ದಿವಸ ಆಚರಣೆಯನ್ನು ನಗರದ ಯವನಿಕಾ ಸಭಾಂಗಣದಲ್ಲಿ ನಡೆಸಿತು.
ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರಾದ ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್, ಬಿಬಿಎಂಪಿ ಆಯುಕ್ತರಾದ ಅನಿಲ್ ಕುಮಾರ್, ಜಲಮಂಡಳಿ ಅಧ್ಯಕ್ಷರಾದ ಕೆಂಪರಾಮಯ್ಯ, ಬಿಡಿಎ ಅಧ್ಯಕ್ಷರಾದ ಪ್ರಕಾಶ್, ಬೆಸ್ಕಾಂ ಎಂಡಿ ರಾಜೇಶ್ ಗೌಡ ತಮ್ಮ ತಮ್ಮ ಇಲಾಖೆಗಳ ಬಗ್ಗೆ ಮಾಹಿತಿ ನೀಡಿ, ಸುಧಾರಣೆ ಮಾಡಬೇಕಾದ ಅಂಶಗಳ ಬಗ್ಗೆ ಚರ್ಚಿಸಿದರು.
ಬೆಂಗಲಕೂರು ಜನರ ಕುಂದು ಕೊರತೆಗಳಿಗೆ ಸ್ಥಳೀಯ ಇಲಾಖೆಗಳು ಎಷ್ಟು ಬೇಗ ಸ್ಪಂದಿಸುತ್ತದೆ ಹಾಗೂ ಪರಿಹರಿಸುತ್ತೆ, ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಹೇಗೆ, ನಗರದ ಆಡಳಿತವನ್ನು ಹೆಚ್ಚೆಚ್ಚು ಆನ್ ಲೈನ್ ಮಾಡುವುದು ಹಾಗೂ, ರಸ್ತೆ ಇತಿಹಾಸಗಳನ್ನು ದಾಖಲೀಕರಣ ಮಾಡುವ ಬಗ್ಗೆ ವಿವರವಾದ ಚರ್ಚೆ ಹಾಗೂ ಸಂವಾದ ನಡೆಯಿತು.
ನಗರದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಪೊಲೀಸ್ ಇಲಾಖೆ ಹೇಗೆ ಸನ್ನದ್ಧವಾಗಿದೆ. ಒಂಭತ್ತು ನಿಮಿಷದಲ್ಲಿ ಹೊಯ್ಸಳ ವಾಹನ ತೊಂದರೆಯಲ್ಲಿರುವವರನ್ನು ಹೇಗೆ ರಕ್ಷಣೆ ಮಾಡಲಿದೆಬುದನ್ನು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದರು.
ಬೆಂಗಳೂರಿನ ಏನೇ ಕುಂದು ಕೊರತೆಗಳನ್ನು ಸಹಾಯ ಆಪ್ ನಲ್ಲಿ ಜನರು ದೂರು ಸಲ್ಲಿಸಿದ್ರೆ, ಪರಿಣಾಮಕಾರಿಯಾಗಿ ಬಗೆಹರಿಸಲು ಜನವರಿ ಒಂದರಿಂದ ಅಭಿವೃದ್ಧಿ ಪಡಿಸಿದ ಸಹಾಯ ಆಪ್ ಜನರ ನೆರವಿಗೆ ಬರಲಿದೆ ಎಂದು ಬಿ.ಹೆಚ್ ಅನಿಲ್ ಕುಮಾರ್ ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆ ಆಲಿಸಲು ಜಲಮಂಡಳಿ ನಿರಂತರವಾಗಿ ನೀರಿನ ಅದಾಲತ್, ಫೋನ್ ಇನ್ ಕಾರ್ಯಕ್ರಮಗಲಕನ್ನು ನಡೆಸುವುದಾಗಿ ಚೀಪೊ್ ಇಂಜಿನಿಯರ್ ಕೆಂಪರಾಮಯ್ಯ ತಿಳಿಸಿದರು.
ಅಲ್ಲದೆ ನಗರದ ಹಸಿರೀಕರಣ, ಕೆರೆ ಅಭಿವೃದ್ಧಿ, ಟ್ರಾಫಿಕ್ ಜಾಂ ಸಮಸ್ಯೆ, ಬಿಡಿಎ ಅಭಿವೃದ್ಧಿ ಕೆಲಸಗಳ ಬಗ್ಗೆಯೂ ಚರ್ಚೆ ನಡೆಯಿತು.
ಅಂತಿಮವಾಗಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಮಾತನಾಡಿ, ಎಲ್ಲ ಇಲಾಖೆಯ ಮುಖ್ಯಸ್ಥರು ತಮ್ಮ ಇಲಾಖೆಯ ಶಕ್ತಿ ಮತ್ತು ದೌರ್ಬಲ್ಯಗಳನ್ನು ಮುಕ್ತವಾಗಿ ಸಾರ್ವಜನಿಕ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. ಬಿಬಿಎಂಪಿ ರಸ್ತೆ ಇತಿಹಾಸ ಜಾರಿ ತಂದಿರುವ ಮೊದಲ ನಗರ ಬೆಂಗಳೂರು. ಅದರಲ್ಲಿ ಎಲ್ಲ ಮಾಹಿತಿ ದಾಖಲಿಸಲಾಗಿದೆ. ೩೩ ಸಾವಿರ ಕಿ.ಮೀ ರಸ್ತೆ ಮಾಹಿತಿ ರಸ್ತೆ ಇತಿಹಾಸದಲ್ಲಿ ಇರಲಿದೆ. ಎಲ್ಲಿ, ಏನೇ ಕಾಮಗಾರಿ ಕೈಗೊಂಡರೂ ರಸ್ತೆ ಇತಿಹಾಸದ ಮಾಹಿತಿಯಲ್ಲಿ ಸಿಗಲಿದೆ. ರಸ್ತೆ ಇತಿಹಾಸ ದಾಖಲಾತಿಯನ್ನು ಇಡೀ ದೇಶದಲ್ಲಿ ಜಾರಿಗೆ ಮಾಡುವಂತೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ತಿಳಿಸಿದೆ. ಆಸ್ತಿ ತೆರಿಗೆ,ಕಟ್ಟಡ ನಿರ್ಮಾಣದ ಮಾಹಿತಿಯೂ ಜೊತೆಗೇ ಸಿಗಲಿದೆ. ಇದರ ಜಾರಿಗೆ ಜನವರಿ ೧ ಕೊನೆಯ ದಿನವಾಗಿದೆ. ಇಂದು ಚರ್ಚೆಗೆ ಬಂದ ವಿಚಾರಗಳನ್ನು ಸಲಹೆಗಳನ್ನು ಅನುಷ್ಠಾನಕ್ಕೆ ತರಲು ಸರ್ಕಾರ ಸಿದ್ದವಿದೆ. ಪಾರ್ಕಿಂಗ್ ನೀತಿ ಜಾರಿ ಮಾಡಿದರೆ ನಗರದ ಬಹುತೇಕ ಟ್ರಾಫಿಕ್ ಸಮಸ್ಯೆ ಪರಿಹಾರವಾಗಲಿದೆ. ಇಸ್ ಆಫ್ ಬ್ಯುಸಿನೆಸ್ ಜಾರಿಗೆ ನ್ಯೂಜಿಲೆಂಡ್ನೊಂದಿಗೆ ರಾಜ್ಯ ಸರ್ಕಾರ ಮಾತುಕತೆ ನಡೆಸಿದೆ ಎಂದರು.

ಸೌಮ್ಯಶ್ರೀ
Kn_bng_01_DCM_Prgm_7202707
Camara visuals Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.