ಮಹದೇವಪುರ (ಬೆಂಗಳೂರು): ಲಾಕ್ಡೌನ್ನಿಂದ ಸಂಕಷ್ಟಕ್ಕೆ ಸಿಲುಕಿರುವ ದಿನಗೂಲಿ ನೌಕರರಿಗೆ ಬಿರಿಯಾನಿ ಸೇರಿದಂತೆ ರುಚಿಕರ ಆಹಾರ ನೀಡಲಾಗುತ್ತಿದೆ ಎಂದು ವಂದೇ ಮಾತರಂ ಸಂಘಟನೆಯ ಅಧ್ಯಕ್ಷ ದೇವರಾಜ್ ತಿಳಿಸಿದರು.
ಮಹದೇವಪುರ ವಿಧಾನಸಭಾ ಕ್ಷೇತ್ರದ ಬಿದರಿ ಅಗ್ರಹಾರ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ದಿನಗೂಲಿ ಕಾರ್ಮಿಕರಿಗೆ, ನಿರ್ಗತಿಕರಿಗೆ ಊಟ ವಿತರಿಸಿ ಮಾತನಾಡಿದ ಅವರು. ಲಾಕ್ಡೌನ್ನಿಂದ ಸಾರ್ವಜನಿಕರು ತೊಂದರೆಯಲ್ಲಿರುವುದನ್ನು ಮನಗಂಡು ಸಹಾಯ ಹಸ್ತ ಚಾಚಿದ್ದೇವೆ. ಪ್ರತಿದಿನ 600ಕ್ಕೂ ಹೆಚ್ಚು ಜನರಿಗೆ ವಿವಿಧ ಬಗೆಯ ಚಿತ್ರಾನ್ನ, ಟೊಮೆಟೋ ಬಾತ್, ಪುಳಿಯೊಗ್ಗರೆ, ಪುದೀನ ಬಾತ್, ಮೆಂತ್ಯ ಬಾತ್, ಚಿಕನ್ ಬಿರಿಯಾನಿ, ಸಿಹಿ ಊಟ, ಮುಂತಾದ ಶುಚಿ ರುಚಿಯಾದ ಊಟ ವಿತರಿಲಾಗಿದೆ. ಪಡಿತರ ಇಲ್ಲದೆ ಇರುವ ಬಡವರನ್ನು ಗುರುತಿಸಿ ಒಂದೂವರೆ ಟನ್ ಅಕ್ಕಿ ವಿತರಿಸಲಾಗಿದೆ. ಈ ಕಾರ್ಯಕ್ಕೆ ದಾನಿಗಳು ಹೆಚ್ಚಿನ ರೀತಿಯಲ್ಲಿ ಸಹಾಯ ಮಾಡಿದ್ದಾರೆ ಎಂದು ಹೇಳಿದರು.
ಕೊರೊನಾ ಸಂಕಷ್ಟ ನಮ್ಮ ರಾಜ್ಯವನ್ನಷ್ಟೆ ಅಲ್ಲದೇ ದೇಶವನ್ನು ತಲ್ಲಣಗೊಳಿಸಿದೆ. ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ಸಹಾಯ ಮಾಡುವ ಮನೋಭಾವ ಬೆಳಸಿಕೊಳ್ಳಬೇಕು. ಮೂವತ್ತೈದು ದಿನಗಳಿಗೂ ಹೆಚ್ಚು ದಿನಗಳ ಕಾಲ ಬಿದರಿ ಅಗ್ರಹಾರ ಸುತ್ತಮುತ್ತಲಿನ ವಲಸೆ ಕಾರ್ಮಿಕರಿಗೆ, ದಿನಗೂಲಿ ಕಾರ್ಮಿಕರಿಗೆ, ಮಧ್ಯಮ ವರ್ಗದ ಜನರಿಗೆ ಊಟ ವಿತರಿಸಿದ್ದೇವೆ ಎಂದರು.