ಕೆ.ಆರ್.ಪುರ: ನಗರದ ಸತ್ಸಂಗ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಭೈರತಿ ಬಸವರಾಜು ಪಾಲ್ಗೊಂಡಿದ್ದರು.
ಸತ್ಸಂಗ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದ ಪ್ರಮುಖ ಸತ್ಸಂಗ ಮಂದಿರಕ್ಕೆ ಭೇಟಿ ನೀಡಿದ್ದು ಖುಷಿ ನೀಡಿದೆ. ಇವತ್ತು ಬೇರೆ ಬೇರೆ ರಾಜ್ಯಗಳಿಂದ ಬಂದಿರುವ ಎಲ್ಲಾ ಪ್ರಮುಖರು ನೀಡುವ ಉಪನ್ಯಾಸವನ್ನು ಪ್ರತಿಯೊಬ್ಬರೂ ಚಾಚೂ ತಪ್ಪದೆ ಪಾಲಿಸಬೇಕು. ಈ ಉಪಚುನಾವಣೆಯಲ್ಲಿ ಗೆಲುವು ನಮ್ಮ ಸಮೀಪವಿದೆ. ನಾನೇ ಗೆಲ್ಲುವುದು ಖಚಿತವಾಗಿದೆ ಎಂದು ತಿಳಿಸಿದರು.
ಇನ್ನು ವೇದ ಮಂಗಲಿಕ, ಉಷಾ ಕೀರ್ತನ, ಪ್ರಣಾಮ ಪ್ರಾರ್ಥನೆ, ಭಜನೆಗಳು, ಸಾಧಾರಣ ಸಭೆ, ಪ್ರಸಾದ ವಿನಿಯೋಗ, ಮಾತೃ ಸಮ್ಮೇಳನ, ನಗರ ಕೀರ್ತನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.