ETV Bharat / state

ಮೆಕ್ಕೆಜೋಳದಿಂದ ಆಹಾರ ಉತ್ಪನ್ನ ಮಾತ್ರವಲ್ಲ..ಕವರ್,ಬ್ಯಾಗ್ ಕೂಡ ಸಿದ್ದವಾಗುತ್ತೆ: ಜಿಮ್ ನಲ್ಲಿ ಗಮನ ಸೆಳೆದ ಬಯೋ ಪ್ಲಾಸ್ಟಿಕ್ - ಈಟಿವಿ ಭಾರತ ಕನ್ನಡ

ಕಫಾನ್ ಎನ್ನುವ ಕಂಪನಿಯು ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬ್ಯಾಗ್ ಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿಯಾದ ಮೆಕ್ಕೆಜೋಳದಿಂದ ಕವರ್, ಬ್ಯಾಗ್ ತಯಾರಿಸಿ ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಿದೆ.

bio-plastic-from-maize-a-new-invention-from-kafan-company
ಮೆಕ್ಕೆಜೋಳದಿಂದ ಆಹಾರ ಉತ್ಪನ್ನ ಮಾತ್ರವಲ್ಲ..ಕವರ್,ಬ್ಯಾಗ್ ಕೂಡ ಸಿದ್ದವಾಗುತ್ತೆ : ಜಿಮ್ ನಲ್ಲಿ ಗಮನ ಸೆಳೆದ ಬಯೋ ಪ್ಲಾಸ್ಟಿಕ್
author img

By

Published : Nov 3, 2022, 10:47 PM IST

ಬೆಂಗಳೂರು: ಮೆಕ್ಕೆಜೋಳವನ್ನು ಕೇವಲ ಆಹಾರ ಉತ್ಪನ್ನ ತಯಾರಿಸಲು ಮಾತ್ರವಲ್ಲದೇ ಕವರ್, ಬ್ಯಾಗ್ ಗಳನ್ನು ತಯಾರಿಸುವ ಮೂಲಕ ಪರಿಸರಸ್ನೇಹಿ ಚೀಲಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಕಫಾನ್ ಎನ್ನುವ ಕಂಪನಿಯು ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಬ್ಯಾಗ್ ಗಳಿಗೆ ಪರ್ಯಾಯವಾಗಿ ಪರಿಸರ ಸ್ನೇಹಿಯಾದ ಮೆಕ್ಕೆಜೋಳದ ಕವರ್,ಬ್ಯಾಗ್ ಅನ್ನು ತಯಾರಿಸಿ ಹೊಸ ಆವಿಷ್ಕಾರಕ್ಕೆ ನಾಂದಿ ಹಾಡಿದೆ.

ಪರಿಸರ ಕಾಳಜಿಗೆ ಪರಿಸರ ಸ್ನೇಹಿ ಪ್ಲಾಸ್ಟಿಕ್​ : ದೇಶದಾದ್ಯಂತ ಪ್ಲಾಸ್ಟಿಕ್ ನಿಷೇಧಿಸಿದರೂ ಪ್ಲಾಸ್ಟಿಕ್ ಬಳಕೆ ಮಾತ್ರ ನಿಂತಿಲ್ಲ. ಕೆಲವೊಂದು ಉದ್ದೇಶಗಳಿಗೆ ಪ್ಲಾಸ್ಟಿಕ್ ಅನಿವಾರ್ಯವಾಗಿದ್ದು, ಪ್ಲಾಸ್ಟಿಕ್ ಬದಲು ಮೆಕ್ಕೆಜೋಳದಿಂದ ತಯಾರಿಸಿದ ಕವರ್ ಅನ್ನು ಪರಿಚಯಿಸಲಾಗಿದೆ. ಇದು ಬಯೋ ಪ್ಲಾಸ್ಟಿಕ್ ಆಗಿದ್ದು, ಪ್ಲಾಸ್ಟಿಕ್ ರಹಿತ ಪರಿಸರ ಸ್ನೇಹಿ ಕವರ್ ಅನ್ನು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಪ್ರದರ್ಶನಕ್ಕಿಡಲಾಗಿದೆ.

ಮೆಕ್ಕೆ ಜೋಳದಿಂದ ಬಯೋ ಪ್ಲಾಸ್ಟಿಕ್​ : ಕಫಾನ್ ಕಂಪನಿ ಪ್ಲಾಸ್ಟಿಕ್​​​ಗೆ ಪರ್ಯಾಯವಾಗಿ ಬಳಕೆ ಮಾಡಬಹುದಾದ ಹಲವು ಉತ್ಪನ್ನವನ್ನು ತಯಾರಿಸಿದೆ. ಪ್ಲಾಸ್ಟಿಕ್ ರಹಿತವಾಗಿ ಮೆಕ್ಕೇಜೋಳದಿಂದ ಈ ಕವರ್ ತಯಾರು ಮಾಡಿದೆ. ಸಾಮಾನ್ಯವಾಗಿ ಬಟ್ಟೆ ಅಂಗಡಿಗಳಲ್ಲಿ ಶರ್ಟ್,ಸೀರೆ ಇತ್ಯಾದಿ ಬಟ್ಟೆಗಳನ್ನು ಪಾರದರ್ಶಕ ಪ್ಲಾಸ್ಟಿಕ್ ಕವರ್ ನಲ್ಲಿ ಪ್ಯಾಕ್ ಮಾಡಿರಲಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಮೆಕ್ಕೆಜೋಳದ ಕವರ್ ಬಳಸಬಹುದಾಗಿದೆ. ಇದು ಕೂಡ ಅಷ್ಟೇ ಪಾರದರ್ಶಕವಾಗಿದೆ.

ವಿವಿಧ ರೀತಿಯಲ್ಲಿ ಈ ಬಯೋ ಪ್ಲಾಸ್ಟಿಕ್​ ಬಳಕೆ : ಇಷ್ಟು ಮಾತ್ರವಲ್ಲದೆ ಗೃಹ ಬಳಕೆ ವಸ್ತುಗಳನ್ನು ಪ್ಯಾಕ್ ಮಾಡುವ ಬ್ಯಾಗ್,ಕೋರಿಯರ್ ಬ್ಯಾಗ್, ಶ್ರಿಂಕ್ ಫಿಲ್ಮ್, ಆಹಾರ ಪದಾರ್ಥಗಳ ಪ್ಯಾಕಿಂಗ್ ಪೌಚ್,ನರ್ಸರಿ ಬ್ಯಾಗ್ ಗಳನ್ನು ಪ್ಲಾಸ್ಟಿಕ್ ರಹಿತವಾಗಿ ತಯಾರಿಸಲಾಗಿದೆ.

ಬಳಸಿ ತ್ಯಾಜ್ಯವಾಗಿ ಎಸೆಯಲ್ಪಡುವ ಈ ಕವರ್ ಕೇವಲ ಮೂರರಿಂದ ಆರು ತಿಂಗಳ ಒಳಗೆ ಸಂಸ್ಕರಣವಾಗಲಿದೆ. ಹಾಗಾಗಿ ನಾವು ಪ್ಲಾಸ್ಟಿಕ್ ಬದಲು ಬಯೋ ಪ್ಲಾಸ್ಟಿಕ್ ಬಳಸಬಹುದಾಗಿದೆ. ಪ್ಲಾಸ್ಟಿಕ್ ನಷ್ಟೇ ಬೆಲೆಯಾಗಿರುವ ಹಿನ್ನೆಲೆಯಲ್ಲಿ ಮೆಕ್ಕೆಜೋಳದ ಕವರ್ ಮತ್ತು ಬ್ಯಾಗ್ ಬಳಕೆ ಮಾಡಿ ಆ ಮೂಲಕ ಪರಿಸರವನ್ನೂ ಉಳಿಸಬಹುದಾಗಿದೆ.

ಕಫಾನ್​ ಕಂಪನಿಯಿಂದ ಹೊಸ ಆವಿಷ್ಕಾರ : ಇನ್ನು ಸಸ್ಟೈನಬಲ್ ಪ್ಯಾಕೇಜಿಂಗ್, ಕಾಂಪೋಸ್ಟಬಲ್ ಪ್ಲಾಂಟ್ ಬೇಸ್ಡ್ ಬಯೋ ಪ್ಲಾಸ್ಟಿಕ್ ಎನ್ನುವ ಶೀರ್ಷಿಕೆಯಡಿ ಬಯೋ ಪ್ಲಾಸ್ಟಿಕ್ ಕವರ್ ಮತ್ತು ಬ್ಯಾಗ್​​​​ಗಳನ್ನು ತಯಾರಿಸಿ ಕಫಾನ್​ ಕಂಪನಿ ಮಾರಾಟ ಮಾಡುತ್ತಿದೆ.

ಇನ್ನು ರಾಜ್ಯದಲ್ಲಿ ಬಯೋ ಪ್ಲಾಸ್ಟಿಕ್ ಬಳಕೆ ಕುರಿತು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಇದಕ್ಕೆ ಸರ್ಕಾರ ಸಹಕಾರ ನೀಡಿದರೆ ಪರಿಸರ ಸ್ನೇಹಿ ಉದ್ಯಮ ಬೆಳಯಲು ಸಹಕಾರಿಯಾಗಲಿದೆ. ಪರಿಸರಕ್ಕೆ ಮಾರಕವಾದ ಪ್ಲಾಸ್ಟಿಕ್ ಬಳಕೆಯೂ ತಗ್ಗಲಿದೆ ಎಂದು ಕಂಪನಿ ಪ್ರತಿನಿಧಿಗಳ ಅಭಿಪ್ರಾಯ.

ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಈ ಬಗ್ಗೆ ಹೂಡಿಕೆದಾರರಲ್ಲಿಯೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಸರ್ಕಾರದಿಂದ ನಿರೀಕ್ಷೆಯನ್ನೂ ಇರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಕೇವಲ ಬಂಡವಾಳ ಆಕರ್ಷಣೆಗೆ ಸೀಮಿತವಾಗದೆ ಪರಿಸರ ಸ್ನೇಹಿ ಚಟುವಟಿಕೆಗಳಿಗೂ ಅವಕಾಶ ಕಲ್ಪಿಸಿದೆ.

ಇದನ್ನೂ ಓದಿ : ಗುಜರಾತ್ ಮಾದರಿಯ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಅಧಿನಿಯಮ ರಚನೆಗೆ ಸಂಪುಟ ಸಮ್ಮತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.