ETV Bharat / state

ಪ್ರಾಣ ಹಾನಿಯಾದರೂ ಬುದ್ಧಿ ಕಲಿಯದ ಯುವಕರು: ದೇವನಹಳ್ಳಿ ಏರ್​ಪೋರ್ಟ್​ ರಸ್ತೆಯಲ್ಲಿ ಮತ್ತೆ ವ್ಹೀಲಿಂಗ್..!

ಕಳೆದ ಒಂದು ತಿಂಗಳ ಹಿಂದೆ ಕೆಐಎಎಲ್​ ರಸ್ತೆಯಲ್ಲಿ ಬೈಕ್​ ವ್ಹೀಲಿಂಗ್ ವೇಳೆ ಅಪಘಾತ ನಡೆದು ಯುವಕರಿಬ್ಬರು ಪ್ರಾಣ ಕಳೆದುಕೊಂಡಿದ್ದರು. ಇಷ್ಟಾದರೂ ಬುದ್ಧಿ ಕಲಿಯದ ಯುವಕರು ಮತ್ತೆ ವ್ಹೀಲಿಂಗ್ ಕ್ರೇಝ್​ ಶುರು ಮಾಡಿಕೊಂಡಿದ್ದಾರೆ.

Bike Wheeling in KIAL Road from youths
ಅಪಾಯಕಾರಿ ವೀಲಿಂಗ್​ನಲ್ಲಿ ತೊಡಗಿರುವ ಯುವಕರ ತಂಡ
author img

By

Published : Aug 16, 2020, 2:01 PM IST

ದೇವನಹಳ್ಳಿ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಕೆಲ ದಿನಗಳಿಂದ ಕಡಿಮೆಯಾಗಿದ್ದ ಯುವಕರ ಪುಂಡಾಟ, ಈಗ ಮತ್ತೆ ಶುರುವಾಗಿದೆ.

ಬೆಳಗಿನ ಹೊತ್ತು ಹೆದ್ದಾರಿ ಖಾಲಿ ಇರುವುದರಿಂದ ರಸ್ತೆಗಿಳಿಯುವ ಯುವಕರು, ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ವ್ಹೀಲಿಂಗ್ ಮಾಡುತ್ತಾರೆ. ಹತ್ತು ಬೈಕ್​ಗಳಲ್ಲಿ ಒಂದು ತಂಡವಾಗಿ ಹೆದ್ದಾರಿಗೆ ಇಳಿಯುವ ಬೈಕ್ ಸವಾರರು, ಒಂದೊಂದು ಬೈಕ್​ನಲ್ಲಿ ಮೂವರು ಕುಳಿತುಕೊಂಡು ಅಪಾಯಕಾರಿಯಾಗಿ ವ್ಹೀಲಿಂಗ್​ ಮಾಡುವುದು ಸರ್ವೆ ಸಾಮಾನ್ಯವಾಗಿದೆ.

ಅಪಾಯಕಾರಿ ವ್ಹೀಲಿಂಗ್​ನಲ್ಲಿ ತೊಡಗಿರುವ ಯುವಕರ ತಂಡ

ಯುವಕರ ಪುಂಡಾಟಿಕೆಯಿಂದ ಇತರೆ ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸಬೇಕಾದ ಸ್ಥಿತಿ ಇದೆ. ಕಳೆದ ಒಂದು ತಿಂಗಳ ಹಿಂದೆ ವಿಮಾನ ನಿಲ್ದಾಣ ರಸ್ತೆಯ ಜಕ್ಕೂರು ಬಳಿ ವ್ಹೀಲಿಂಗ್​ ಮಾಡುತ್ತಿದ್ದ ವೇಳೆ ಯುವಕರಿಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಇಷ್ಟಾದರೂ, ಯುವಕರ ಪುಂಡಾಟಿಕೆ ಮಾತ್ರ ಕಡಿಮೆಯಾಗಿಲ್ಲ. ಹೀಗಾಗಿ, ಪೊಲೀಸರು ಇದಕ್ಕೆ ಬ್ರೇಕ್​ ಹಾಕಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.