ETV Bharat / state

ಅರಣ್ಯಾಧಿಕಾರಿಯ ರಾಯಲ್ ಎನ್​ಫೀಲ್ಡ್​ ಎಗರಿಸಿದ ಕಳ್ಳರು: ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುವ ಗ್ಯಾಂಗ್ - ಬೈಕ್ ನಂಬರ್ ಪ್ಲೇಟ್ ಬದಲಿಸಿ ಮಾರಾಟ

ಬೆಂಗಳೂರಲ್ಲಿ ಅಂತರ್ ರಾಜ್ಯ ಕಳ್ಳರ ಬಂಧನ. ಬೈಕ್ ಕದ್ದು ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಬಲೆಗೆ

ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುವ ಗ್ಯಾಂಗ್
ನಂಬರ್ ಪ್ಲೇಟ್ ಬದಲಿಸಿ ಮಾರಾಟ ಮಾಡುವ ಗ್ಯಾಂಗ್
author img

By

Published : Sep 17, 2022, 8:29 PM IST

ಬೆಂಗಳೂರು: ಧರ್ಮಪುರಿಯಲ್ಲಿ ಅರಣ್ಯಾಧಿಕಾರಿಯ ರಾಯಲ್ ಎನ್​ಫೀಲ್ಡ್ ಬೈಕ್ ಸೇರಿದಂತೆ ವಿವಿಧೆಡೆ ಕಳ್ಳತನ ಮಾಡಿದ್ದ ಅಂತರ್ ರಾಜ್ಯ ಕಳ್ಳರನ್ನ ಕೋರಮಂಗಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಶಾನ್, ರಂಜಿತ್ ಕುಮಾರ್, ಶಾಹೀನ್ ಶಾ ಹಾಗೂ ಶಿವ ಬಂಧಿತ ಆರೋಪಿಗಳು.

ಬೈಕ್ ನಂಬರ್ ಪ್ಲೇಟ್ ಬದಲಿಸಿ ಮಾರಾಟ: ಐಷಾರಾಮಿ ಜೀವನಕ್ಕಾಗಿ ದ್ವಿಚಕ್ರ ವಾಹನಗಳು, ಆಟೋಗಳನ್ನ ಕಳ್ಳತನ ಮಾಡುತ್ತಿದ್ದ ಆರೋಪಿಗಳು ಅವುಗಳ ನಂಬರ್ ಪ್ಲೇಟ್ ಬದಲಿಸಿ ತಮಿಳುನಾಡಿನ ತಿರುವಣ್ಣಾಮಲೈ ಹಾಗೂ ಬೆಂಗಳೂರು ಗ್ರಾಮಾಂತರ ಭಾಗದಲ್ಲಿ 10-15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇತ್ತೀಚಿಗೆ ಧರ್ಮಪುರಿಯ ಜಯಬಾಲ್ ಎಂಬ ಅರಣ್ಯಾಧಿಕಾರಿಯ ರಾಯಲ್ ಎನ್​​ಫೀಲ್ಡ್ ಕಳ್ಳತನ ಮಾಡಿದ್ದರು.

ಆರೋಪಿಗಳ ವಿರುದ್ಧ ಕೋರಮಂಗಲ, ಮಡಿವಾಳ, ಹೆಚ್ಎಸ್ಆರ್ ಲೇಔಟ್, ಹುಳಿಮಾವು ಸೇರಿದಂತೆ ಹಲವೆಡೆ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಈ‌ ಖದೀಮರ ಗುಂಪನ್ನ ಬಂಧಿಸಿರುವ ಕೋರಮಂಗಲ ಠಾಣಾ ಪೊಲೀಸರು, 1 ಆಟೋ, 29 ದ್ವಿಚಕ್ರ ವಾಹನಗಳು ಸಹಿತ 15 ಲಕ್ಷ ಮೌಲ್ಯದ ಕಳ್ಳತನ ಮಾಲು ವಶಪಡಿಸಿಕೊಂಡಿದ್ದಾರೆ‌.

(ಓದಿ: ಮಂಗಳೂರು: 25 ವರ್ಷದ ಬಳಿಕ ಪೊಲೀಸ್ ಬಲೆಗೆ ಬಿದ್ದ ಕಾರು ಕಳ್ಳತನ ಆರೋಪಿ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.