ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೈಕ್ ಕಳ್ಳರ ಹಾವಳಿ ಮತ್ತೆ ಮುಂದುವರೆದಿದೆ. ಸಾಯಿ ಕೃಷ್ಣ ಎಂಬುವರ ಟಿವಿಎಸ್ ಸ್ಟಾರ್ ಬೈಕ್ನ ಲಾಕ್ ಅನ್ನು ಕ್ಷಣಾರ್ಧದಲ್ಲಿ ಮುರಿದು ಬೈಕ್ ಕದ್ದಿರುವ ಘಟನೆ ವಿವೇಕನಗರದ ಈಜಿಪುರದಲ್ಲಿ ನಡೆದಿದೆ.
ಸಾಯಿ ಕೃಷ್ಣ ಅವರು ಎಂದಿನಂತೆ ತಮ್ಮ ಕೆಲಸ ಮುಗಿಸಿಕೊಂಡು ಬಂದು ಮನೆಯ ಬಳಿ ತಮ್ಮ ಬೈಕ್ ಪಾರ್ಕಿಂಗ್ ಮಾಡಿದ್ದಾರೆ. ಇದನ್ನು ಟಾರ್ಗೆಟ್ ಮಾಡಿದ ಇಬ್ಬರು ಯುವಕರು, ಕ್ಷಣಮಾತ್ರದಲ್ಲಿಯೇ ಆ ಬೈಕ್ ಎಗರಿಸಿ ಪರಾರಿಯಾಗಿದ್ದಾರೆ. ವಿಚಿತ್ರ ಎಂದರೆ ಈ ಇಬ್ಬರೂ ಕಳ್ಳರು ಶೂ ಹಾಕಿ ನಡೆದರೆ ಶಬ್ದ ಬರುತ್ತದೆ ಎಂದು ಅರಿತು ಅವುಗಳನ್ನು ಕೈನಲ್ಲೇ ಹಿಡಿದುಕೊಂಡು ವಿವೇಕನಗರದ ಏರಿಯಾ ಪೂರ್ತಿ ತಿರುಗಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಇಬ್ಬರ ಖತರ್ನಾಕ್ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಯಿ ಕೃಷ್ಣ ಅವರು ವಿವೇಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.