ETV Bharat / state

ನೋ ಹೆಲ್ಮೆಟ್... ನೋ ಪೆಟ್ರೋಲ್... ಸೋಮವಾರದಿಂದಲೇ ಹೊಸ ಸಂಚಾರ ನಿಯಮ - Bengaluru traffic police

ಬೆಂಗಳೂರಲ್ಲಿ ಸೋಮವಾರದಿಂದ ಮತ್ತೊಂದು ಹೊಸ ಸಂಚಾರ ನಿಯಮ ಜಾರಿಯಾಗಲಿದೆ. ನೂತನ ನಿಯಮದ ಬಗ್ಗೆ ಬೆಂಗಳೂರು ಸಂಚಾರ ವಿಭಾಗದ ಆಯುಕ್ತ ಪಿ. ಹರಿಶೇಖರನ್ ಮಾಹಿತಿ ನೀಡಿದ್ದಾರೆ.

ಹೊಸ ಸಂಚಾರ ನಿಯಮ
author img

By

Published : Aug 2, 2019, 2:01 PM IST

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಸೋಮವಾರದಿಂದ ಮತ್ತೊಂದು ಹೊಸ ಸಂಚಾರ ನಿಯಮ ಜಾರಿಯಾಗಲಿದೆ. ನೂತನ ನಿಯಮದ ಪ್ರಕಾರ ದ್ವಿಚಕ್ರ ವಾಹನ ಸವಾರರು ಇನ್ಮುಂದೆ ಪೆಟ್ರೋಲ್​ ಹಾಕಿಸಬೇಕು ಅಂದರೆ ಹೆಲ್ಮೆಟ್​ ಕಡ್ಡಾಯವಾಗಿರಬೇಕು ಎಂದು ಬೆಂಗಳೂರು ಸಂಚಾರ ವಿಭಾಗದ ಆಯುಕ್ತ ಪಿ. ಹರಿಶೇಖರನ್ ತಿಳಿಸಿದ್ದಾರೆ.

ಈಗಾಗಲೇ ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧೆಡೆ ಈ ನಿಯಮ ಜಾರಿಯಲ್ಲಿದೆ. ಅದೇ ನಿಯಮವನ್ನ ರಾಜ್ಯ ರಾಜಧಾನಿಯಲ್ಲಿಯೂ ಜಾರಿ ತರುವ ಸಲುವಾಗಿ ಪೆಟ್ರೋಲ್​ ಬಂಕ್​ ಮಾಲೀಕರ ಜೊತೆ ಮಾತುಕತೆ ನಡೆಸಿದ್ದು, ಮತ್ತೊಮ್ಮೆ ಶನಿವಾರ ಮಾತುಕತೆ ಪೂರ್ಣಗೊಳಿಸಿ ಸೋಮವಾರದಿಂದ ಕಡ್ಡಾಯವಾಗಿ ಜಾರಿಗೊಳಿಸಲಾಗುವುದು ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ ರವೀಂದ್ರನಾಥ್ ಅಧಿಕೃತವಾಗಿ ಸಂಚಾರಿ ಪೊಲೀಸರಿಂದ ಸಭೆ ಬಗ್ಗೆ ಮಾಹಿತಿ ಬಂದಿಲ್ಲ, ಒಂದು ವೇಳೆ ಆಹ್ವಾನಿಸಿದರೆ ಹೋಗುತ್ತೇವೆ. ನಗರದಲ್ಲಿ ಸುಮಾರು 500 ಪೆಟ್ರೋಲ್ ಬಂಕ್​​ಗಳಿವೆ. ಎಲ್ಲರೊಂದಿಗೆ ಚರ್ಚೆ ನಡೆಸಲಿದ್ದೇವೆ ಎಂದಿದ್ದಾರೆ.

ನಗರದಲ್ಲಿ ಕಳೆದ ವರ್ಷ ಸ್ಕೂಟರ್​, ಬೈಕ್​ ಅಪಘಾತಗಳಲ್ಲಿ 150 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ದಂಡ ವಿಧಿಸುತ್ತಿದ್ದರೂ ಹೆಲ್ಮೆಟ್​ ಬಳಸದೇ ವಾಹನ ಚಲಾಯಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಆದ್ದರಿಂದ ನೂತನ ಸಂಚಾರ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ ಪಿ.ಹರಿಶೇಖರನ್ ಸ್ಪಷ್ಟಪಡಿಸಿದ್ದಾರೆ.

ನೋ ಹೆಲ್ಮೆಟ್... ನೋ..ಪೆಟ್ರೋಲ್ ರೂಲ್ಸ್: ಸೋಮವಾರದಿಂದ ನಗರದಲ್ಲಿ ಜಾರಿ

ಬೆಂಗಳೂರು:
ರಾಜಧಾನಿ ಬೆಂಗಳೂರಲ್ಲಿ ಸೋಮವಾರದಿಂದ ಮತ್ತೊಂದು ಹೊಸ ಸಂಚಾರ ನಿಯಮ ಜಾರಿಯಾಗಲಿದೆ.
 ನೂತನ ನಿಯಮದ ಪ್ರಕಾರ ದ್ವಿಚಕ್ರ ವಾಹನ ಸವಾರರು ಇನ್ಮುಂದೆ ಪೆಟ್ರೋಲ್​ ಹಾಕಿಸ್ಬೇಕು ಅಂದ್ರೆ ಹೆಲ್ಮೆಟ್​ ಕಡ್ಡಾಯವಾಗಿರಬೇಕು ಎಂದು ಸಂಚಾರ ವಿಭಾಗದ ಆಯುಕ್ತ ಪಿ.ಹರಿಶೇಖರನ್ ತಿಳಿಸಿದ್ದಾರೆ. 

ಈಗಾಗಲೇ ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧೆಡೆ ಈ ನಿಯಮ ಜಾರಿಯಲ್ಲಿದೆ. ಅದೇ ನಿಯಮವನ್ನ ರಾಜ್ಯ ರಾಜಧಾನಿಯಲ್ಲಿಯೂ ಜಾರಿ ತರುವ ಸಲುವಾಗಿ ಪೆಟ್ರೋಲ್​ ಬಂಕ್​ ಮಾಲೀಕರ ಜೊತೆ ಮಾತುಕತೆ ನೆಡೆಸಿದ್ದು, ಮತ್ತೊಮ್ಮೆ ಶನಿವಾರ ಮಾತುಕತೆ ಪೂರ್ಣಗೊಳಿಸಿ ಸೋಮವಾರದಿಂದ ಕಡ್ಡಾಯವಾಗಿ ಜಾರಿಗೊಳಿಸಲಾಗುವುದು ಎಂದಿದ್ದಾರೆ. 
ಈ ಬಗ್ಗೆ ಪ್ರತಿಕ್ರಿಯಿಸಿದ ಪೆಟ್ರೋಲ್ ಬಂಕ್ ಮಾಲೀಕರ ಸಂಘದ ಅಧ್ಯಕ್ಷ  ರವೀಂದ್ರನಾಥ್ ಅಧಿಕೃತವಾಗಿ ಸಂಚಾರಿ ಪೊಲೀಸರಿಂದ ಸಭೆ ಬಗ್ಗೆ ಮಾಹಿತಿ ಬಂದಿಲ್ಲ, ಒಂದು ವೇಳೆ ಆಹ್ವಾನಿಸಿದರೆ ಹೋಗುತ್ತೇವೆ. ನಗರದಲ್ಲಿ ಸುಮಾರು 500 ಪೆಟ್ರೋಲ್ ಬಂಕ್ ಗಳಿವೆ. ಎಲ್ಲರೊಂದಿಗೆ ಚರ್ಚೆ ನೆಡೆಸಲಿದ್ದೇವೆ ಎಂದಿದ್ದಾರೆ.

ನಗರದಲ್ಲಿ ಕಳೆದ ವರ್ಷ ಸ್ಕೂಟರ್​, ಬೈಕ್​ ಅಪಘಾತಗಳಲ್ಲಿ 150 ಮಂದಿದುರ್ಮರಣಕ್ಕೀಡಾಗಿದ್ದಾರೆ. ದಂಡ ವಿಧಿಸುತ್ತಿದ್ರೂ ಹೆಲ್ಮೆಟ್​ ಬಳಸದೇ ವಾಹನ ಚಲಾಯಿಸುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಆದ್ದರಿಂದ ನೂತನ ನಿಯಮ ಜಾರಿಗೆ ತರಲು ಸಿದ್ಧತೆ ನಡೆಸಲಾಗಿದೆ ಪಿ.ಹರಿಶೇಖರನ್ ಸ್ಪಷ್ಟಪಡಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.