ಚಿಂತಾಮಣಿ: ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಬೈಕ್ ಕಳೆದುಕೊಂಡ ಮಾಲೀಕ ತಮ್ಮ ವಾಹನದ ಬಗ್ಗೆ ಮಾಹಿತಿ ನೀಡಿದವರಿಗೆ ಹತ್ತು ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಬೆಂಗಳೂರಿನ ಜೆಜೆಆರ್ ನಗರದ ನಿವಾಸಿ ಅನಾನ್ ಇಬ್ರಾಹಿಂ ಬಿನ್ ಆರಿಫುಲ್ಲಾ ಇಬ್ರಾಹಿಂ ಅ.18 ರಂದು ಉರುಸ್ ನಿಮಿತ್ತ ಮಾವನ ಮನೆಗೆ ತೆರಳಿದ್ದರು.
ಈ ವೇಳೆ ಮುರುಗಮಲ ಉರುಸ್ ಕಾರ್ಯಕ್ರಮಕ್ಕೆ ಹೋಗಿ ಮನೆಗೆ ಹಿಂದಿರುವ ವೇಳೆ ಅವರ ಬೈಕ್ ಕಳ್ಳತನವಾಗಿತ್ತು. ಈ ಸಂಬಂಧ ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆಗೆ ದೂರು ದಾಖಲಿದ್ದಾರೆ.
ಈ ನಡುವೆ ತಮ್ಮ ವಾಹನದ ಸಂಪೂರ್ಣ ವಿವರಗಳನ್ನು ನೀಡಿರುವ ಮಾಲೀಕ, ಬೈಕ್ ಬಗ್ಗೆ ಮಾಹಿತಿ ನೀಡಿದವರಿಗೆ 10 ಸಾವಿರ ಬಹುಮಾನ ನಿಡುವ ಭರವಸೆ ನೀಡಿದ್ದಾರೆ.
ವಾಹನದ ಮಾಹಿತಿ :
ಗಾಡಿ ಸಂಖ್ಯೆ: KA:02 JZ: 8362
ನೀಲಿ ಬಣ್ಣದ ಆಕ್ಸೆಸ್ ದ್ವಿಚಕ್ರ ವಾಹನ
ದೂರವಾಣಿ ಸಂಖ್ಯೆ: 9880895879