ಬೆಂಗಳೂರು: ನಗರದಲ್ಲಿ ದಿಢೀರನೆ ಮದ್ಯ ಬಂದ್ ಆಗಲಿದೆ ಎನ್ನಲಾಗುತ್ತಿದ್ದು, ಮದ್ಯ ಪ್ರಿಯರಿಗೆ ಮತ್ತೊಮ್ಮೆ ಬಿಗ್ ಶಾಕ್ ಎದುರಾಗಲಿದೆ. ಸರ್ಕಾರದ ಇ-ಇಂಡೆಂಟ್ ವಿರುದ್ಧ ಮದ್ಯದಂಗಡಿ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈನ್ ಮರ್ಚೆಂಟ್ಸ್ ಅಸೋಸಿಯೇನ್ ಗಳ ಒಕ್ಕೂಟ ಅಸಮಾಧಾನ ವ್ಯಕ್ತಪಡಿಸಿ ಮೇ 6 ರಿಂದ ವಿವಿಧ ಜಿಲ್ಲೆಗಳಲ್ಲಿ ಒಂದೊಂದು ದಿನದಂತೆ ಮದ್ಯ ಖರೀದಿಗೆ ಬ್ರೇಕ್ ಹಾಕಿದ್ದಾರೆ.
ಈಗಾಗಲೇ ರಾಜ್ಯದ ಹಲವೆಡೆ ಜಿಲ್ಲಾವಾರು ವಿಭಾಗಗಳಾಗಿ ವಿಂಗಡಿಸಿ ಪ್ರತ್ಯೇಕವಾಗಿ ಒಂದೊಂದು ದಿನ ಮದ್ಯ ಮಾರಾಟವನ್ನು ನಿಲ್ಲಿಸಲಾಗಿತ್ತು. ಇದೀಗ ಬೆಂಗಳೂರಿನ ಸರದಿ ಬಂದಿದೆ. 2 ದಿನಗಳ ಕಾಲ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲೀಕರು ಮದ್ಯ ಖರೀದಿ ಮಾಡದಿರಲು ನಿರ್ಧರಿಸಿದ್ದಾರೆ.
ರಾಜ್ಯ ಪಾನೀಯ ನಿಗಮ ಆರಂಭಿಸಿರುವ ಹೊಸ ಇ-ಇಂಡೆಂಟ್ ವ್ಯವಸ್ಥೆಯಾಗಿದೆ. ಬಾರ್, ವೈನ್ಸ್ ಮಾಲೀಕರು ಆನ್ಲೈನ್ ಮೂಲಕ ಮದ್ಯ ಖರೀದಿಸಬೇಕಾಗಿದೆ. ಮೇ 19ವರೆಗೂ ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಕೆ.ಎಸ್.ಬಿ.ಎಲ್ ನಿಂದ ಮದ್ಯ ಖರೀದಿಸದಿರಲು ಮದ್ಯದಂಗಡಿ ಮಾಲೀಕರು ನಿರ್ಧಾರಕ್ಕೆ ಬಂದಿದ್ದಾರೆ. ಇದರಿಂದ ಮದ್ಯ ಮಾರಾಟದಲ್ಲಿ ವ್ಯತ್ಯಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನೂ ಓದಿ : ಬಿಳಿಗಿರಿರಂಗನ ಬೆಟ್ಟದ ಕಮರಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ