ETV Bharat / state

ಮೂರೂ ಪಕ್ಷಗಳ ಪೈಕಿ ಮತದಾರ 'ಶಿರ' ಬಾಗುವುದು ಯಾರಿಗೆ!? - Sira

ಉಪಚುನಾವಣೆಗಳು ಘೋಷಣೆಯಾದ ಶುರುವಿನಲ್ಲಿ ಕಾಂಗ್ರೆಸ್‌ ಕ್ಯಾಂಡಿಡೇಟ್‌ ಟಿ.ಬಿ.ಜಯಚಂದ್ರ ಗೆಲುವಿನ ಕುದುರೆಯಂತೆ ಭಾಸವಾಗುತ್ತಿದ್ದರು. ಅವರಿಗೆ ಜೆಡಿಎಸ್‌ನ ಅಮ್ಮಾಜಮ್ಮ ಸ್ಪರ್ಧೆ ನೀಡಬಹುದು ಎಂಬ ಮಾತುಗಳಿದ್ದವು. ಆದರೆ, ವಿಜಯೇಂದ್ರ ಅವರು ಚುನಾವಣೆಯ ರಣರಂಗಣಕ್ಕೆ ಪ್ರವೇಶ ಕೊಟ್ಟ ಮೇಲೆ ಬಿಜೆಪಿ ಅಭ್ಯರ್ಥಿ ರಾಜೇಶ್‌ ಗೌಡ ಅವರ ಹೆಸರು ರೇಸಿನಲ್ಲಿ ಮುಂದೆ ಬಂದಿದೆ..

File Photo
ಸಂಗ್ರಹ ಚಿತ್ರ
author img

By

Published : Oct 31, 2020, 6:51 PM IST

ಬೆಂಗಳೂರು : ಮಾಜಿ ಸಚಿವ ಸತ್ಯನಾರಾಯಣ ಅವರ ನಿಧನದಿಂದ ತೆರವಾದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮೂರೂ ಪಕ್ಷಗಳ ಮಧ್ಯೆ ಬಿಗ್‌ ಫೈಟ್‌ ನಡೆಯುತ್ತಿದೆ.

ಕಾಂಗ್ರೆಸ್‌ನಿಂದ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್‌ನ ಅಮ್ಮಾಜಮ್ಮ ಮತ್ತು ಬಿಜೆಪಿಯ ಡಾ. ರಾಜೇಶ್‌ಗೌಡ ನಡುವೆ ಕದನ ಏರ್ಪಟ್ಟಿದೆ. 60 ಸಾವಿರದಷ್ಟು ಒಕ್ಕಲಿಗರು, ಮೂವತ್ತೇಳು ಸಾವಿರ ಮಂದಿ ಪರಿಶಿಷ್ಟರು, ಇಪ್ಪತ್ತಾರು ಸಾವಿರ ಮಂದಿ ಗೊಲ್ಲರು, ಇಪ್ಪತ್ತೆರಡು ಸಾವಿರದಷ್ಟಿರುವ ಮುಸ್ಲಿಮರು, ಅಷ್ಟೇ ಪ್ರಮಾಣದಲ್ಲಿರುವ ಕುರುಬರು ಸೇರಿದಂತೆ ಕ್ಷೇತ್ರದಲ್ಲಿ 2,15,725 ಮತದಾರರು ಇದ್ದಾರೆ.

ಅಂದ ಹಾಗೆ ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ ಅವರು ರೇಸ್‌ನಲ್ಲಿ ಪ್ರಮುಖವಾಗಿ ಎದ್ದು ಕಾಣುತ್ತಾರಾದರೂ ಜೆಡಿಎಸ್‌ನ ಅಮ್ಮಾಜಮ್ಮ ಅವರಿಗೆ ಪ್ರಬಲ ಕಾರ್ಯಕರ್ತರ ಪಡೆ ಇದೆ. ಅದೇ ರೀತಿ ಬಿಜೆಪಿಯ ರಾಜೇಶ್‌ ಗೌಡ ಅವರನ್ನು ಗೆಲ್ಲಿಸಲು ಖುದ್ದು ಮುಖ್ಯಮಂತ್ರಿಗಳ ಪುತ್ರ ಬಿ.ವೈ.ವಿಜಯೇಂದ್ರ ಪಣ ತೊಟ್ಟಿದ್ದಾರೆ. ಹೀಗಾಗಿ, ಯಾವ್ಯಾವ ಅಂಶಗಳು ಕೆಲಸ ಮಾಡಿ, ಯಾರ ಗೆಲುವಿಗೆ ಕಾರಣವಾಗುತ್ತವೆ? ಎಂಬುದು ನಿಗೂಢವಾಗಿದೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರಿಗೆ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಮೆ ಇದೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಮುಂದಿನ ಮುಖ್ಯಮಂತ್ರಿ ಎಂಬ ಮಾತು ಕೇಳಿ ಬರುತ್ತಿರುವುದರಿಂದ ಒಕ್ಕಲಿಗ ಮತದಾರರು ಗಣನೀಯ ಸಂಖ್ಯೆಯಲ್ಲಿ ಬೆಂಬಲ ನೀಡುವ ಲಕ್ಷಣಗಳು ಇವೆ.

ಡಿಕೆಶಿ ವಿರುದ್ದ ಐಟಿ, ಸಿಬಿಐ ದಾಳಿ ನಡೆದಾಗ ಅದನ್ನು ವಿರೋಧಿಸಿ ಬೀದಿಗಿಳಿದವರಲ್ಲಿ ಶಿರಾ ಕ್ಷೇತ್ರದ ಕುಂಚಿಟಿಗರ ಒಕ್ಕಲಿಗರು ಹೆಚ್ಚು. ಈಗ ಚುನಾವಣೆಯಲ್ಲಿ ಡಿಕೆಶಿ ಮುಖ ನೋಡಿ, ಜಯಚಂದ್ರ ಅವರ ಪರವಾದ ಒಲವನ್ನು ಅವರು ಹೆಚ್ಚಿಸಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಮಧ್ಯೆ ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಅವರಿಗೆ ಪತಿ ದಿವಂಗತ ಸತ್ಯನಾರಾಯಣ ಅವರ ಹೆಸರಿನ ಶ್ರೀರಕ್ಷೆಯ ಜೊತೆ, ಜೆಡಿಎಸ್‌ನ ನಿಷ್ಟಾವಂತ ಕಾರ್ಯಕರ್ತರ ಪಡೆಯ ಬೆಂಬಲವಿದೆ. ಹೀಗೆ ಹೋಲಿಸಿ ನೋಡಿದರೆ, ಮೂರೂ ರಾಜಕೀಯ ಪಕ್ಷಗಳ ಕ್ಯಾಂಡಿಡೇಟುಗಳು ಪ್ರಬಲರಾಗಿಯೇ ಇದ್ದಾರೆ. ಆದರೆ, ಅವರನ್ನು ಗೆಲುವಿನ ಗುರಿ ಸೇರಿಸುವ ಮಂತ್ರದಂಡ ಯಾವುದು? ಎಂಬುದು ಮಾತ್ರ ಅಗೋಚರವಾಗಿಯೇ ಇದೆ.

ಉಪಚುನಾವಣೆಗಳು ಘೋಷಣೆಯಾದ ಶುರುವಿನಲ್ಲಿ ಕಾಂಗ್ರೆಸ್‌ ಕ್ಯಾಂಡಿಡೇಟ್‌ ಟಿ.ಬಿ.ಜಯಚಂದ್ರ ಗೆಲುವಿನ ಕುದುರೆಯಂತೆ ಭಾಸವಾಗುತ್ತಿದ್ದರು. ಅವರಿಗೆ ಜೆಡಿಎಸ್‌ನ ಅಮ್ಮಾಜಮ್ಮ ಸ್ಪರ್ಧೆ ನೀಡಬಹುದು ಎಂಬ ಮಾತುಗಳಿದ್ದವು. ಆದರೆ, ವಿಜಯೇಂದ್ರ ಅವರು ಚುನಾವಣೆಯ ರಣರಂಗಣಕ್ಕೆ ಪ್ರವೇಶ ಕೊಟ್ಟ ಮೇಲೆ ಬಿಜೆಪಿ ಅಭ್ಯರ್ಥಿ ರಾಜೇಶ್‌ ಗೌಡ ಅವರ ಹೆಸರು ರೇಸಿನಲ್ಲಿ ಮುಂದೆ ಬಂದಿದೆ.

ಅದು ಟಿ.ಬಿ.ಜಯಚಂದ್ರ ಅವರನ್ನು ದಾಟಿ ಮುಂದಕ್ಕೆ ಹೋದಂತೆ ಭಾಸವಾಗುತ್ತಿಲ್ಲವಾದರೂ, ಜೆಡಿಎಸ್‌ನ ಅಮ್ಮಾಜಮ್ಮ ಅವರ ಪಕ್ಕದಲ್ಲೇ ಇರುವಂತೆ ಭಾಸವಾಗುತ್ತಿದೆ. ಆದರೆ, ಚುನಾವಣೆಯ ಫಲಿತಾಂಶದಿಂದ ರಾಜ್ಯ ರಾಜಕೀಯದ ಮೇಲೆ ದೊಡ್ಡ ಪರಿಣಾಮವೇನೂ ಇಲ್ಲ. ಆದರೆ, ಗೆದ್ದು ತೋರಿಸಬೇಕು ಎಂಬ ಹಠ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗಿದೆ. ಕುತೂಹಲದ ಸಂಗತಿ ಎಂದರೆ, ಇಂತಹ ಉಪಚುನಾವಣೆಗಳು ತಮ್ಮ ಖುರ್ಚಿಯ ಮೇಲೆ ಪರಿಣಾಮ ಬೀರುತ್ತವೆ ಎಂಬುದು ಯಡಿಯೂರಪ್ಪ ಅವರ ನಂಬಿಕೆ.

ಉಪಚುನಾವಣೆಗಳಲ್ಲಿ ಎರಡೂ ಕ್ಷೇತ್ರಗಳನ್ನೂ ಸೋತರೆ ಕಿರಿಕಿರಿ ಆರಂಭವಾಗಬಹುದು. ಒಂದು ಕ್ಷೇತ್ರದಲ್ಲಾದರೂ ಗೆದ್ದರೆ ಹೆಸರು ಉಳಿದುಕೊಳ್ಳುತ್ತದೆ. ಎರಡೂ ಕ್ಷೇತ್ರಗಳಲ್ಲಿ ಗೆದ್ದರೆ ತಮ್ಮ ನಾಯಕತ್ವ ಅಬಾಧಿತ ಎಂಬ ಮೆಸೇಜು ಕೊಡಬಹುದು ಎಂಬುದು ಅವರ ಲೆಕ್ಕಾಚಾರ. ಅವರ ಈ ಲೆಕ್ಕಾಚಾರವೇ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಂಗೇರುವಂತೆ ಮಾಡಿದೆ. ಮುಖ್ಯಮಂತ್ರಿಗಳ ಪ್ರತಿಷ್ಠೆಯ ಸಂಕೇತವಾಗಿರುವುದರಿಂದ ಇಲ್ಲಿ ಗೆದ್ದು ತೋರಿಸಬೇಕೆಂಬ ಹಠ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಲ್ಲೂ ಇದೆ.

ಅದೇ ರೀತಿ ಕೆಪಿಸಿಸಿ ಅಧ್ಯಕ್ಷರಾದ ನಂತರ ಡಿ.ಕೆ.ಶಿವಕುಮಾರ್ ತಮ್ಮ ಪವರ್‌ ತೋರಿಸಲು ಸಿಕ್ಕ ಮಹತ್ವದ ವೇದಿಕೆ ಉಪಚುನಾವಣೆ. ಹೀಗಾಗಿ ಅವರು ಕೂಡ ಗೆದ್ದು ತೋರಿಸಬೇಕು ಎಂಬ ಕಾರಣಕ್ಕೆ ತುಮಕೂರು ಜಿಲ್ಲೆಯ ರಾಜಕಾರಣದಲ್ಲಿ ಬದ್ಧ ವೈರಿಗಳಂತಿದ್ದ ಸ್ವಪಕ್ಷೀಯರನ್ನು ಒಂದು ಮಾಡಿದ್ದಾರೆ.

ಮಧುಗಿರಿಯ ಕೆ.ಎನ್. ರಾಜಣ್ಣ, ಕೊರಟಗೆರೆಯ ಡಾ.ಜಿ.ಪರಮೇಶ್ವರ್‌ ಹಾಗೂ ಶಿರಾ ಕ್ಷೇತ್ರದಲ್ಲಿ ಅಭ್ಯರ್ಥಿ ಆಗಿರುವ ಟಿ.ಬಿ.ಜಯಚಂದ್ರ ಅವರ ನಡುವೆ ಹೇಳಿಕೊಳ್ಳುವಂತಹ ವಿಶ್ವಾಸ ಇರಲಿಲ್ಲ. ಆದರೆ, ಡಿಕೆಶಿ ಈ ಮೂವರನ್ನೂ ಒಂದು ಮಾಡಿ, ಪಕ್ಷಕ್ಕಾಗಿ ಹೋರಾಡದಿದ್ದರೆ ನಮಗೆ ಭವಿಷ್ಯವಿಲ್ಲ ಎಂದಿರುವುದರಿಂದ ಮತ್ತು ಮೂರೂ ಮಂದಿ ಅದನ್ನೊಪ್ಪಿ ಜಂಟಿಯಾಗಿ ಹೋರಾಟ ನಡೆಸುತ್ತಿರುವುದರಿಂದ ಸಹಜವಾಗಿ ಟಿ.ಬಿ.ಜಯಚಂದ್ರ ಹೆಸರು ಫ್ರಂಟ್‌ ಲೈನ್ ನಲ್ಲಿದೆ.

ಶಿರಾದ ಮತದಾರರು ಯಾವ ಕಾರಣಕ್ಕಾಗಿ, ಯಾರ ಕೈ ಹಿಡಿಯುತ್ತಾರೆ ಎಂಬುದನ್ನು ಹೇಳುವುದು ಕಷ್ಟ. ಪರಿಗಣಿಸಿದರೆ ಮೂವರೂ ಅಭ್ಯರ್ಥಿಗಳಿಗೆ ಪ್ಲಸ್‌ ಇದೆ. ಈ ಪೈಕಿ ಜಯಚಂದ್ರ ಹಾಗೂ ಅಮ್ಮಾಜಮ್ಮ ಅವರಿಗೆ ಜನಪ್ರೀತಿಯ ಬಲ ಹೆಚ್ಚು. ಆದರೆ ಬಿಜೆಪಿ ಅಭ್ಯರ್ಥಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ನೇಮ್‌ಪ್ಲೇಟು ಒಂದು ಮಟ್ಟದಲ್ಲಿ ವರ್ಕ್‌ಔಟ್‌ ಆಗಿದೆ.

ಇಂತಹ ಎಲ್ಲ ಕಾರಣಗಳು ಅಂತಿಮವಾಗಿ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯ ವಾತಾವರಣವನ್ನು ನಿರ್ಮಿಸಿದೆ. ಹೀಗೆ ನಿರ್ಮಾಣವಾದ ವಾತಾವರಣವನ್ನು ಭೇದಿಸಿ ಯಾರು ಗೆದ್ದು ಬರುತ್ತಾರೆ? ಎಂಬುದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.