ETV Bharat / state

ನಾಳೆಯಿಂದ ದೇಶಿ ವಿಮಾನ ಹಾರಾಟ: ಬಿಐಎಎಲ್​ನ ಬೇಸಿಗೆ ಮಧ್ಯಂತರ ವೇಳಾಪಟ್ಟಿ ಪ್ರಕಟ - ಮೇ 25 ರಿಂದ ದೇಶಿ ವಿಮಾನಗಳ ಹಾರಾಟ ಪ್ರಾರಂಭ

ಮೇ 25, 2020ರಿಂದ ಕಾರ್ಯಾಚರಣೆಯನ್ನು ಪುನರ್ ಆರಂಭಿಸಲಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಬಿಐಎಎಲ್) ಈ ಸಂಬಂಧ ಮಧ್ಯಂತರ ಬೇಸಿಗೆ ವೇಳಾಪಟ್ಟಿ 2020 ಪ್ರಕಟಿಸಿದೆ.

BIAL
ಮೇ 25 ರಿಂದ ದೇಶಿ ವಿಮಾನಗಳ ಹಾರಾಟ ಪ್ರಾರಂಭ
author img

By

Published : May 24, 2020, 5:34 PM IST

ದೇವನಹಳ್ಳಿ: ಲಾಕ್​ಡೌನ್​ನಿಂದ ಸ್ಥಗಿತಗೊಂಡಿದ್ದ ವಿಮಾನ ಹಾರಾಟವು ಮೇ 25 ರಿಂದ ದೇಶಿ ಸೇವೆ ಪುನರಾರಂಭಗೊಳ್ಳಲಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) 2020ರ ಮಧ್ಯಂತರ ಬೇಸಿಗೆ ವೇಳಾಪಟ್ಟಿ ಪ್ರಕಟಿಸಿದೆ.

ಬೆಂಗಳೂರು ವಿಮಾನ ನಿಲ್ದಾಣ ನಾಳೆಯಿಂದ ಕಾರ್ಯಾಚರಣೆಯನ್ನು ಪುನರ್ ಆರಂಭಿಸಲಿದ್ದು, ಬಿಐಎಎಲ್ ಪ್ರಯಾಣಿಕರ ಅನುಕೂಲಕ್ಕಾಗಿ 2020ರ ಮಧ್ಯಂತರ ಬೇಸಿಗೆ ವೇಳಾಪಟ್ಟಿ ಪ್ರಕಟಿಸಿದೆ.

ನಾಗರಿಕ ವಿಮಾನಯಾನ ಇಲಾಖೆ ನಿರೂಪಿಸಿರುವಂತೆ ಈ ನೂತನ ವೇಳಾಪಟ್ಟಿ ಅಧಿಕೃತ ವೇಳಾಪಟ್ಟಿಯ ಶೇ 32ರಷ್ಟಿದೆ. 2020ರ ಮೇ 29ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ. ಈಗ ಪರಿಷ್ಕರಿಸಲಾದ ವೇಳಾಪಟ್ಟಿ 2020ರ ಜೂನ್ 30ರವರೆಗೆ ಜಾರಿಯಲ್ಲಿ ಇರಲಿದೆ.

ಪ್ರತಿ ದಿನ ಬೆಂಗಳೂರು ವಿಮಾನ ನಿಲ್ದಾಣ ಸರಾಸರಿ 215 ವಿಮಾನಗಳ ಸಂಚಾರ ನಿರ್ವಹಿಸುತ್ತದೆ. ಇದರಲ್ಲಿ 108 ನಿರ್ಗಮನ ಮತ್ತು 107 ಆಗಮನ ವಿಮಾನಗಳಿವೆ. ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕಾರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದು. ಶೂನ್ಯ ಸಂಪರ್ಕ ವ್ಯವಸ್ಥೆ ಮಾಡಲಾಗಿದೆ.

ದೇಶಿ ವಿಮಾನಯಾನ ಸೇವೆಗಳ ಪೈಕಿ ಶೇ 47ರಷ್ಟಿರುವ ಇಂಡಿಗೊ ಈ ವೇಳಾಪಟ್ಟಿಯಲ್ಲಿ ಅಗ್ರ ವಿಮಾನಯಾನ ಸಂಸ್ಥೆಯಾಗಿರುತ್ತದೆ. ಏರ್ ಏಷ್ಯಾ ಮತ್ತು ಸ್ಪೈಸ್ ಜೆಟ್ ಕ್ರಮವಾಗಿ ಶೇ 16ರಷ್ಟು ಮತ್ತು ಶೇ 14ರಷ್ಟು ಪಾಲು ಹೊಂದಿವೆ. ವಿಮಾನಗಳ ಹಾರಾಟಗಳನ್ನು 10 ನಿಮಿಷ ಅಂತರದೊಂದಿಗೆ ನಿಗದಿಪಡಿಸಲಾಗಿದ್ದು, ಟರ್ಮಿನಲ್‍ನಲ್ಲಿ ಸುರಕ್ಷತೆಯ ಅಂತರ ಕಾಯ್ದುಕೊಳ್ಳುವಂತೆ ರೂಪಿಸಲಾಗಿದೆ.

ವಾಹನ ನಿಲುಗಡೆಯಿಂದ ಹಿಡಿದು ವಿಮಾನ ಹತ್ತುವವರೆಗಿನ ನಾನಾ ಪ್ರಕ್ರಿಯೆಗಳನ್ನು ಶೂನ್ಯ, ಕನಿಷ್ಠ ಸಂಪರ್ಕದಲ್ಲಿ ನಿರ್ವಹಿಸಲು ಎಲ್ಲ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿಮಾನ ನಿಲ್ದಾಣದ ಟರ್ಮಿನಲ್‌ಗಳ ಪ್ರವೇಶ, ಬೋರ್ಡಿಂಗ್ ಪಾಸ್, ಲಗೇಜ್, ಸೆಕ್ಯೂರಿಟಿ ತಪಾಸಣೆ ಹೀಗೆ ಎಲ್ಲ ಕೆಲಸಗಳನ್ನೂ ಕನಿಷ್ಠ/ಶೂನ್ಯ ಸಂಪರ್ಕದಲ್ಲಿ ನಡೆಸಲು ಸಿದ್ಧತೆ ಮುಗಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.