ETV Bharat / state

ಪ್ರತಿಷ್ಠಿತ ಇಎನ್​​ಐ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ವಿಜ್ಞಾನಿ CNR ರಾವ್ - ಇಟಲಿ ಅಧ್ಯಕ್ಷ ಸೆರ್ಗಿಯೋ ಮ್ಯಾಟರೆಲ್ಲಾ

ಈ ಪ್ರಶಸ್ತಿಯೂ ನಗದು ಬಹುಮಾನ ಮತ್ತು ವಿಶೇಷವಾಗಿ ಮುದ್ರಿತ ಚಿನ್ನದ ಪದಕವನ್ನು ಒಳಗೊಂಡಿದೆ. ಪ್ರೊಫೆಸರ್ ರಾವ್ ಅವರು ವಿಶೇಷವಾಗಿ ಅಧ್ಯಯನ ನಡೆಸಿರುವ ಪರಿಸರ ಸಂಶೋಧನಾ ಕ್ಷೇತ್ರದಲ್ಲಿ ಅವರ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ವಿಜ್ಞಾನಿ ಸಿಎನ್​ಆರ್ ರಾವ್
ವಿಜ್ಞಾನಿ ಸಿಎನ್​ಆರ್ ರಾವ್
author img

By

Published : May 28, 2021, 5:35 PM IST

ಬೆಂಗಳೂರು: ಭಾರತ ರತ್ನ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ, ಪ್ರಾಧ್ಯಾಪಕ ಸಿಎನ್​ಆರ್ ರಾವ್ ಪ್ರತಿಷ್ಠಿತ ಅಂತಾರಾಷ್ಟ್ರೀಯ ಇಎನ್​​​ಐ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ. ಇದು ನವೀಕರಿಸಬಹುದಾದ ಇಂಧನ ಮೂಲಗಳು ಮತ್ತು ಇಂಧನ ಸಂಗ್ರಹಣೆಯ ಕುರಿತಾದ ಸಂಶೋಧನೆಗಾಗಿ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿಯನ್ನ ನೊಬೆಲ್ ಪ್ರಶಸ್ತಿಗೆ ಸಮಾನ ಎಂದು ಪರಿಗಣಿಸಲಾಗಿದೆ.

ಅಕ್ಟೋಬರ್ 14 ರಂದು ರೋಮ್​​​ನ ಕ್ವಿರಿನಲ್ ಪ್ಯಾಲೇಸ್​ನಲ್ಲಿ ನಡೆಯಲಿರುವ ಅಧಿಕೃತ ಸಮಾರಂಭದಲ್ಲಿ ಇಟಲಿ ಅಧ್ಯಕ್ಷ ಸೆರ್ಗಿಯೋ ಮ್ಯಾಟರೆಲ್ಲಾ ಭಾಗವಹಿಸಿ ಇಎನ್​ಐ ಅವಾರ್ಡ್ಸ್ 2020 ಅನ್ನು ಪ್ರದಾನ ಮಾಡಲಿದ್ದಾರೆ.

ಇಂಧನ ಮತ್ತು ಪರಿಸರ ಸಂಶೋಧನಾ ಕ್ಷೇತ್ರದಲ್ಲಿ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿರುವ ಈ ಪ್ರಶಸ್ತಿ, ಇಂಧನ ಮೂಲಗಳ ಉತ್ತಮ ಬಳಕೆಯನ್ನು ಉತ್ತೇಜಿಸುವ ಮತ್ತು ಹೊಸ ತಲೆಮಾರಿನ ಸಂಶೋಧಕರನ್ನು ತಮ್ಮ ಕೆಲಸದಲ್ಲಿ ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಗಳ ಮೇಲೆ ಇಎನ್​ಐ ಇರಿಸಿದ ಪ್ರಾಮುಖ್ಯತೆಗೆ ಇದು ಸಾಕ್ಷಿಯಾಗಿದೆ.

ಈ ಪ್ರಶಸ್ತಿಯೂ ನಗದು ಬಹುಮಾನ ಮತ್ತು ವಿಶೇಷವಾಗಿ ಮುದ್ರಿತ ಚಿನ್ನದ ಪದಕವನ್ನು ಒಳಗೊಂಡಿದೆ. ಪ್ರೊಫೆಸರ್ ರಾವ್ ಅವರು ವಿಶೇಷವಾಗಿ ಅಧ್ಯಯನ ನಡೆಸಿರುವ ಪರಿಸರ ಸಂಶೋಧನಾ ಕ್ಷೇತ್ರದಲ್ಲಿ ಅವರ ಸಾಧನೆ ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರೊಫೆಸರ್ ರಾವ್ ಶಕ್ತಿಯ ಮೂಲವಾಗಿ ಹೈಡ್ರೋಜನ್ ಮೇಲೆ ಕೆಲಸ ಮಾಡುತ್ತಿದ್ದಾರೆ. ಹೈಡ್ರೋಜನ್ ಸಂಗ್ರಹಣೆ, ಹೈಡ್ರೋಜನ್​​ನ ದ್ಯುತಿ ಸಂಶ್ಲೇಷಣೆ ಮತ್ತು ಎಲೆಕ್ಟ್ರೋಕೆಮಿಕಲ್ ಉತ್ಪಾದನೆ, ಹೈಡ್ರೋಜನ್​​ನ ಸೌರ ಉತ್ಪಾದನೆ ಮತ್ತು ಲೋಹವಲ್ಲದ ವೇಗವರ್ಧನೆ ಅವರ ಕೆಲಸದ ಪ್ರಮುಖ ಅಂಶಗಳಾಗಿವೆ.

ಇದನ್ನೂ ಓದಿ: ಜೀವಿತಾವಧಿಯ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ಜಿಗಿದಾಡಿದ ಮುಂಬೈ ಗೂಳಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.