ETV Bharat / state

ನಾಳೆ ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶ: ಯಾವ ದಿನ, ಎಲ್ಲಿ ಸಾಗಲಿದೆ ರಾಹುಲ್​ ಪಾದಯಾತ್ರೆ? - ಕರ್ನಾಟಕದಲ್ಲಿ ಭಾರತ್ ಜೋಡೊ ಯಾತ್ರೆ

ಶುಕ್ರವಾರ ಬೆಳಗ್ಗೆ 9 ಗಂಟೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಗೆ ಭಾರತ್ ಜೋಡೋ ಯಾತ್ರೆ ಪ್ರವೇಶಿಸಲಿದ್ದು, 21 ದಿನ ರಾಜ್ಯದ ಎಂಟು ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಸಂಚರಿಸಲಿದ್ದಾರೆ.

bharat-jodo-yatra-beginning-in-karnataka-from-tomorrow
ನಾಳೆ ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶ: ಯಾವ ದಿನ, ಎಲ್ಲಿ ಸಾಗಲಿದೆ ರಾಹುಲ್​ ಪಾದಯಾತ್ರೆ?
author img

By

Published : Sep 29, 2022, 6:32 PM IST

ಬೆಂಗಳೂರು: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಆರಂಭವಾಗಿರುವ ಮಹತ್ವಾಕಾಂಕ್ಷಿ ಭಾರತ್ ಜೋಡೋ ಯಾತ್ರೆ ನಾಳೆ (ಸೆಪ್ಟೆಂಬರ್​ 30) ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶ ಮಾಡಲಿದೆ. ಯಾತ್ರೆಯ ಅದ್ಧೂರಿ ಸ್ವಾಗತಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದು, ಒಟ್ಟು 21 ದಿನ ರಾಜ್ಯದ ಎಂಟು ಜಿಲ್ಲೆಗಳಲ್ಲಿ ರಾಹುಲ್ ಗಾಂಧಿ ಸಂಚರಿಸಲಿದ್ದಾರೆ.

ಶುಕ್ರವಾರ ಬೆಳಗ್ಗೆ 9 ಗಂಟೆಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪ್ರವೇಶಿಸುವ ಯಾತ್ರೆಗೆ ಸ್ವಾಗತ ಕೋರಲು ಪಟ್ಟಣದ ಅಂಬೇಡ್ಕರ್‌ ಭವನದ ಮುಂಭಾಗ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ ರಾಜ್ಯ ಕಾಂಗ್ರೆಸ್‌ ನಾಯಕರ ಇಡೀ ದಂಡು ಗುಂಡ್ಲುಪೇಟೆಯಲ್ಲಿ ಬೀಡು ಬಿಟ್ಟಿದೆ. ಮೊದಲ ದಿನವೇ 20ರಿಂದ 25 ಕಿಮೀ ಪಾದಯಾತ್ರೆಯಲ್ಲಿ ಹೆಜ್ಜೆಹಾಕಲಿದ್ದಾರೆ.

ಸೆ.7ರಂದು ಕಮ್ಯಾಕುಮಾರಿಯಿಂದ ಆರಂಭವಾಗಿರುವ ಪಾದಯಾತ್ರೆ ರಾಜ್ಯದಲ್ಲಿ ಭಾರತ್ ಐಕ್ಯತಾ ಯಾತ್ರೆ ಹೆಸರಿನಲ್ಲಿ ಸಾಗಲಿದೆ. ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ ಸೇರಿದಂತೆ ಒಟ್ಟು 8 ಜಿಲ್ಲೆಯಲ್ಲಿ ಪಾದಯಾತ್ರೆ ನಡೆಯಲಿದೆ. ನಾಳೆ ಎಲ್ಲ ರಾಜ್ಯ ನಾಯಕರು ಉಂಡ್ಲುಪೇಟೆಯಲ್ಲಿ ಉಪಸ್ಥಿತರಿರುವಂತೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೂಚಿಸಿದ್ದು ಸಾಕಷ್ಟು ನಾಯಕರು ಇಂದೇ ಪ್ರಯಾಣ ಬೆಳೆಸಿದ್ದಾರೆ.

ಯಾವ ದಿನ, ಎಲ್ಲಿ ಸಾಗಲಿದೆ ಯಾತ್ರೆ?: ನಾಳೆ ಗುಂಡ್ಲುಪೇಟೆಯಿಂದ ಬೇಗೂರಿವರೆಗೆ ಯಾತ್ರೆ ನಡೆಯಲಿದೆ. ಎರಡು ದಿನ ಗುಂಡ್ಲುಪೇಟೆಯಲ್ಲಿ ಯಾತ್ರೆ ಸಂಚಾರ ಮಾಡಲಿದೆ. ಬೆಂಗಳೂರು ದಕ್ಷಿಣ, ಕೊಳ್ಳೇಗಾಲ, ಗುಂಡ್ಲುಪೇಟೆ, ಹನೂರು, ಚಾಮರಾಜನಗರ, ಪುತ್ತೂರು, ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರು, ನಾಯಕರು, ಕಾರ್ಯಕರ್ತರು, ಭಾಗಿಯಾಗಲಿದ್ದಾರೆ. ಈ ಸಂದರ್ಭ ಒಟ್ಟು 7 ವಿಧಾನಸಭಾ ಕ್ಷೇತ್ರದ ಕೈ ನಾಯಕರು ಭಾಗಿಯಾಲಿದ್ದಾರೆ.

ಅಕ್ಟೋಬರ್ 1ರಂದು ಬೇಗೂರಿನಿಂದ ತಾಂಡವಪುರಕ್ಕೆ ಯಾತ್ರೆ ಸಾಗಲಿದೆ. ಹೆಗ್ಗಡದೇವನಕೋಟೆ, ಬೆಳ್ತಂಗಡಿ, ಬಂಟ್ವಾಳ, ಮಡಿಕೇರಿ, ವಿರಾಜಪೇಟೆ, ನಂಜನಗೂಡು, ಹುಣಸೂರು, ರಾಮನಗರ, ಕನಕಪುರ, ಚನ್ನಪಟ್ಟಣ ಸೇರಿ ಒಟ್ಟು 10 ಕ್ಷೇತ್ರಗಳ ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳುವರು. ವರುಣ ಕ್ಷೇತ್ರದಲ್ಲಿ ಒಂದು ದಿನ ಯಾತ್ರೆ ಪಯಣ ಇರಲಿದೆ.

ಅಕ್ಟೋಬರ್ 2ರಂದು ಕಡಕೋಳದಿಂದ ಮೈಸೂರು ನಗರದಲ್ಲಿ ಸಂಚಾರ ಮಾಡುವ ಯಾತ್ರೆಯಲ್ಲಿ ಮೂಡಬಿದಿರೆ, ಮಂಗಳೂರು ಉತ್ತರ ಮತ್ತು ದಕ್ಷಿಣ, ನಗರ, ಪಿರಿಯಾಪಟ್ಟಣ, ಚಾಮುಂಡೇಶ್ವರಿ, ಕೃಷ್ಣರಾಜನಗರ, ಚಾಮರಾಜ, ಟಿ.ನರಸಿಪುರ, ನರಸಿಂಹರಾಜ, ವರುಣ ಕ್ಷೇತ್ರದ ನಾಯಕರು , ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ. ಶ್ರೀರಂಗಪಟ್ಟಣದಲ್ಲಿ ಒಂದು ದಿನ ಯಾತ್ರೆ ಸಂಚಾರ ಮಾಡಲಿದೆ.

ಅಕ್ಟೋಬರ್ 3ರಂದು ಮೈಸೂರು ಸಿಟಿಯಿಂದ ಟಿಎಸ್ ಚತ್ರಾವರೆಗೂ ಯಾತ್ರೆ ಸಾಗಲಿದ್ದು ಯಶವಂತಪುರ, ಚಿಕ್ಕಪೇಟೆ, ಚಾಮರಾಜಪೇಟೆ, ಬಿಟಿಎಂ ಲೇಔಟ್, ಜಯನಗರ,ಮಳ್ಳವಳ್ಳಿ, ಮದ್ದೂರು, ಮೇಲುಕೋಟೆ, ಶ್ರೀರಂಗಪಟ್ಟಣ, ಕೃಷ್ಣರಾಜ ನಗರ ಕ್ಷೇತ್ರದ ಒಟ್ಟು 10 ಕ್ಷೇತ್ರಗಳ ಜನ ಯಾತ್ರೆಯಲ್ಲಿ ಪಾಲ್ಗೊಳ್ಳುವರು.

ಆಯುಧ ಪೂಜೆ ಹಾಗೂ ವಿಜಯದಶಮಿಗೆ ವಿರಾಮ: ಅಕ್ಟೋಬರ್ 4 ಮತ್ತು 5ರಂದು ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಹಿನ್ನೆಲೆಯಲ್ಲಿ ಯಾತ್ರೆಗೆ ವಿರಾಮ. ಅ.6ರಂದು ಮೇಲುಕೋಟೆಯ ಮಹದೇಶ್ವರ ದೇವಸ್ಥಾನದಿಂದ ಬ್ರಹ್ಮದೇವರಹಳ್ಳಿವರೆಗೆ ಯಾತ್ರೆ ಸಾಗಲಿದೆ. ಗೋವಿಂದರಾಜ್ ನಗರ, ಶಾಂತಿ ನಗರ, ಗಾಂಧಿನಗರ, ವಿಜಯನಗರ, ಅರಕಲಗೂಡು, ಮಂಡ್ಯ, ನಾಗಮಂಗಲ, ಕೃಷ್ಣರಾಜಪೇಟೆ, ಮಾಗಡಿ ಸೇರಿದಂತೆ ಒಟ್ಟು 9 ಕ್ಷೇತ್ರದ ನಾಯಕರು, ಕಾರ್ಯಕರ್ತರು ಭಾಗಿಯಾಗುವರು.

ಅಕ್ಟೋಬರ್ 7ರಂದು ನಾಗಮಂಗಲದ ಬ್ರಹ್ಮದೇವರಹಳ್ಳಿಯಿಂದ ಬೆಳ್ಳೂರು ಪಟ್ಟಣದವರೆಗೆ ಯಾತ್ರೆ ಸಾಗಲಿದ್ದು, ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರ, ಪುಲಕೇಶಿನಗರ, ಅನೇಕಲ್, ಶ್ರವಣಬೆಳಗೊಳ, ಹಾಸನ, ಹೊಳೆನರಸೀಪುರ, ನೆಲಮಂಗಲ ಕ್ಷೇತ್ರದವರು ಸೇರಿದಂತೆ ಒಟ್ಟು 9 ಕ್ಷೇತ್ರದ ಜನ ಭಾಗಿಯಾಗುತ್ತಾರೆ. ಅಕ್ಟೋಬರ್ 8ರಂದು ನೆಲಮಂಗಲ ಆದಿಚುಂಚನಗಿರಿ ಮಠದಿಂದ ಕಲ್ಲೂರ ಕ್ರಾಸ್​ವರೆಗೆ ಯಾತ್ರೆಯಲ್ಲಿ ನಡೆಯಲಿದೆ. ಆರ್​ಆರ್ ನಗರ, ಕುಣಿಗಲ್, ಹೆಬ್ಬಾಳ, ಸರ್ವಜ್ಞ ನಗರ, ಬೇಲೂರು, ಸಕಲೇಶಪುರ, ಬಂಗಾರಪೇಟೆ, ಬೈಂದೂರು, ಕುಂದಾಪುರ, ಉಡುಪಿ, ಕಾಪು, ಕಾರ್ಕಳ ಸೇರಿ ಒಟ್ಟು 12 ಕ್ಷೇತ್ರದ ನಾಯಕರು ಪಾಲ್ಗೊಳ್ಳುವರು.

ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆ: ವಾಹನ ಸಂಚಾರ ಮಾರ್ಗ ಬದಲಾವಣೆ, ಮದ್ಯ ನಿಷೇಧ

ಅಕ್ಟೋಬರ್ 9ರಂದು ತುರುವೇಕೆರೆಯ ಕಲ್ಲೂರು ಕ್ರಾಸ್​ನಿಂದ ಸೋಮಲಾಪುರವರೆಗೆ ನಡೆಯುವ ಯಾತ್ರೆಯಲ್ಲಿ ದೊಡ್ಡಬಳ್ಳಾಪುರ, ಚಿಂತಾಮಣಿ, ಮಧುಗಿರಿ, ಮುಳಬಾಗಿಲು, ಕೋಲಾರ, ಮಾಲೂರು, ಶಿವಾಜಿನಗರ, ತುರುವೇಕೆರೆ, ತುಮಕೂರು ನಗರ, ಗ್ರಾಮೀಣ ಸೇರಿ 10 ಕ್ಷೇತ್ರದ ಶಾಸಕರು, ನಾಯಕರು ಭಾಗಿಯಾಗುವರು. ಅಕ್ಟೋಬರ್ 10ರಂದು ಗುಬ್ಬಿಯ ಕೊಡಿಯಾಳದಿಂದ ಶಿರಾ ತಾಲೂಕಿನ ಬೆಂಚೆಗೆ ಯಾತ್ರೆಯಲ್ಲಿ ಹೊಸಕೋಟೆ, ಬಸವನಗುಡಿ, ಪದ್ಮನಾಭನಗರ, ಚಿಕ್ಕಮಗಳೂರು, ಕಡೂರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಅರಸಿಕೇರೆ, ಕೊರಟಗೆರೆ, ತಿಪಟೂರು, ಗುಬ್ಬಿ ಸೇರಿದಂತೆ ಒಟ್ಟು 11 ಕ್ಷೇತ್ರದ ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

  • ದ್ವೇಷದ ವಿರುದ್ಧ, ನಿರುದ್ಯೋಗದ ವಿರುದ್ಧ, ಬೆಲೆ ಏರಿಕೆಯ ವಿರುದ್ದ ನಮ್ಮ ಹೋರಾಟ. ಧರ್ಮ, ಭಾಷೆ, ಜಾತಿ, ಪ್ರದೇಶ, ಬಟ್ಟೆ, ಆಹಾರದ ಮೂಲಕ ನಡೆಯುತ್ತಿರುವ ಸಮಾಜದ ವಿಭಜನೆಯ ವಿರುದ್ಧ ನಮ್ಮ ಹೋರಾಟ.

    ಬನ್ನಿ, ಎಲ್ಲರೂ ಸೇರಿ ಭಾರತ ಐಕ್ಯತಾ ಯಾತ್ರೆಯಲ್ಲಿ ಹೆಜ್ಜೆ ಹಾಕೋಣ.

    ನಾಳೆಯಿಂದ ಕರ್ನಾಟಕದಲ್ಲಿ#BharathAikyathaYatre pic.twitter.com/T5VySNo2ph

    — Karnataka Congress (@INCKarnataka) September 29, 2022 " class="align-text-top noRightClick twitterSection" data=" ">

ಅಕ್ಟೋಬರ್ 11ರಂದು ಶಿರಾ ಕಳಂಬೆಳ್ಳದಿಂದ ತುರುವೇಕೆರೆವರೆಗೆ ದೇವನಹಳ್ಳಿ, ಕೆಆರ್ ಪುರಂ, ಸಿವಿ ರಾಮನ್ ನಗರ, ಮಹಾದೇವಪುರ, ಬೊಮ್ಮನಳ್ಳಿ, ಶ್ರೀನಿವಾಸಪುರ, ಕೆಜಿಎಫ್, ತೀರ್ಥಹಳ್ಳಿ, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ ಸೇರಿ 11 ಕ್ಷೇತ್ರದವರು ಹಾಗೂ ಅಕ್ಟೋಬರ್ 12ರಂದು ಗೌರಿಬಿದನೂರು, ಬಾಗೇಪಲ್ಲಿ, ಶೃಂಗೇರಿ, ತರಿಕೇರೆ, ಹೊಸದುರ್ಗ, ಹೊನ್ನಾಳಿ, ಶಿವಮೊಗ್ಗ ಹಾಗೂ ಗ್ರಾಮೀಣ, ಸಿಕಾರಿಪುರ ಕ್ಷೇತ್ರದ ಸೇರಿದಂತೆ 9 ಕ್ಷೇತ್ರದ ಶಾಸಕರು, ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳುವರು.

13ರಂದು ಐಕ್ಯತಾ ಯಾತ್ರೆಗೆ ವಿಶ್ರಾಂತಿ: ಅಕ್ಟೋಬರ್ 13ರಂದು ಐಕ್ಯತಾ ಯಾತ್ರೆಗೆ ವಿಶ್ರಾಂತಿ ಇರಲಿದೆ. ಅಕ್ಟೋಬರ್ 14ರಂದು ಬಲೆನಹಳ್ಳಿಯಿಂದ ಸಿದ್ದಾಪುರಕ್ಕೆ ಯಾತ್ರೆ ಸಾಗಲಿದ್ದು, ಮಹಾಲಕ್ಷ್ಮಿ ಲೇಔಟ್, ಮಲ್ಲೇಶ್ವರಂ, ರಾಜಾಜೀನಗರ, ಹೊಳಲ್ಕೆರೆ, ದಾವಣಗೆರೆ ದಕ್ಷಿಣ ಮತ್ತು ಉತ್ತರ, ಚನ್ನಗಿರಿ, ಭದ್ರಾವತಿ, ಪಾವಗಡ ಕ್ಷೇತ್ರದವರು ಸೇರಿದಂತೆ ಒಟ್ಟು 9 ಕ್ಷೇತ್ರದ ನಾಯಕರು ಭಾಗಿಯಾಗುತ್ತಾರೆ.

ಅಕ್ಟೋಬರ್ 15ರಂದು ಚಳ್ಳಕೆರೆಯಿಂದ ಹೀರೆಹಳ್ಳಿಯ ಟೋಲ್ ಪ್ಲಾಜಾದವರೆಗೆ ನಡೆಯುವ ಯಾತ್ರೆಯಲ್ಲಿ ಹಿರಿಯೂರು, ಹಾನಗಲ್, ಬ್ಯಾಡಗಿ, ಹೀರೆಕೇರೂರು, ರಾಣೆಬೆನ್ನೂರು, ಸೊರಬ, ಸಾಗರ, ಹಳಿಯಾಳ, ಕಾರವಾರ, ಕುಮಟಾ, ಭಟ್ಕಳ, ಶಿರಸಿ ಸೇರಿದಂತೆ ಒಟ್ಟು 12 ಕ್ಷೇತ್ರದವರು ಭಾಗಿಯಾಗಲಿದ್ದಾರೆ.

ಅಕ್ಟೋಬರ್ 16ರಂದು ಮೊಳಕಾಲ್ಮೂರುನ ಬೊಮ್ಮಗೊಂಡನಕೆರೆಯಿಂದ ಮೊಳಕಾಲ್ಮೂರಿನವರೆಗೆ ನಡೆಯವ ಯಾತ್ರೆಯಲ್ಲಿ ಚಳ್ಳಕೆರೆ, ಚಿತ್ರದುರ್ಗ, ಹರಿಹರ, ಮಾಯಕೊಂಡ, ನವಲಗುಂದ, ಕುಂದಗೋಳ, ಧಾರವಾಡ, ಕಲಘಟಗಿ, ಶಿರಹಟ್ಟಿ, ಗದಗ, ರೋಣ, ಶಿಗ್ಗಾಂವ, ಯಲ್ಲಾಪುರದ 17 ಕ್ಷೇತ್ರಗಳ ನಾಯಕರು ಹಾಗೂ ಅಕ್ಟೋಬರ್ 17ರಂದು ರಾಂಪುರದಿಂದ ಬಳ್ಳಾರಿ ಹಲೆಕುಂಡಿವರೆಗೆ ಯಾತ್ರೆ ನಡೆಯಲಿದೆ. ಇದರಲ್ಲಿ ಯಮಕನಮರಡಿ, ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮೀಣ, ಖಾನಾಪುರ, ಕಿತ್ತೂರು, ಬೈಲಹೊಂಗಲ, ಸವದತ್ತಿ, ರಾಮದುರ್ಗ, ಜಗಳೂರು, ಹಾವೇರಿ, ಹರಪನಹಳ್ಳಿ ಸೇರಿದಂತೆ ಒಟ್ಟು 12 ಕ್ಷೇತ್ರದ ನಾಯಕರು ಯಾತ್ರೆಯಲ್ಲಿ ಹೆಜ್ಜೆಹಾಕಲಿದ್ದಾರೆ.

ಅಕ್ಟೋಬರ್ 18ರಂದು ಐಕ್ಯತಾ ಯಾತ್ರೆಗೆ ವಿಶ್ರಾಂತಿ ಇರಲಿದೆ. ಅಕ್ಟೋಬರ್ 19ರಂದು ಬಳ್ಳಾರಿಯ ಹಲೆಕುಂಡಿಯಿಂದ ನ್ಯೂ ಮೋಕದವರಿಗೆ ಯಾತ್ರೆ ಸಾಗಲಿದ್ದು, ಜಮಖಂಡಿ, ಬೀಳಗಿ, ಬಾದಾಮಿ, ಬಾಗಲಕೋಟೆ, ಹುನಗುಂದ, ನಿಪ್ಪಾಣಿ, ಚಿಕ್ಕೋಡಿ, ರಾಯಭಾಗ, ಹುಕ್ಕೇರಿ, ಅರಭಾವಿ, ಗೋಕಾಕ, ಕಂಪ್ಲಿ, ಶಿರಗುಪ್ಪ, ಬಳ್ಳಾರಿ ನಗರ, ಸಂಡೂರು, ಮೊಳಕಾಲ್ಮೂರು, ಕುಷ್ಟಗಿ, ಕನಕಗಿರಿ, ಗಂಗಾವತಿ, ಯಲಬುರ್ಗಾ, ಕೊಪ್ಪಳ, ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕುಡ್ಲಗಿ ಸೇರಿದಂತೆ ಒಟ್ಟು 26 ಕ್ಷೇತ್ರಗಳ ನಾಯಕರು ಭಾಗಿಯಾಗಲಿದ್ದಾರೆ.

ಬಳ್ಳಾರಿಯಲ್ಲಿ ಬಹಿರಂಗ ಸಭೆ: ಯಾತ್ರೆ ಭಾಗವಾಗಿ ಬಳ್ಳಾರಿಯಲ್ಲಿ ದೊಡ್ಡಮಟ್ಟದ ಬಹಿರಂಗ ಸಭೆ ಆಯೋಜನೆ ಮಾಡಲಾಗಿದೆ. ರಾಯಚೂರಿನಲ್ಲಿ ಐಕ್ಯತಾ ಯಾತ್ರೆಯಲ್ಲಿ ಒಟ್ಟು 24 ಕ್ಷೇತ್ರದ ಜನ ಭಾಗಿಯಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಮುಧೋಳ, ತೆರದಾಳ, ಅಥಣಿ, ಕಾಗವಾಡ, ಕುಡಚಿ, ಬಸವಕಲ್ಯಾಣ, ಅಪ್ಜಲಪುರ, ಜೇವರ್ಗಿ, ಚಿತ್ತಾಪುರ, ಕಲಬುರಗಿ ಗ್ರಾಮೀಣ, ದಕ್ಷಿಣ, ಉತ್ತರ, ಆಳಂದ, ಸೇಡಂ, ಚಿಂಚೋಳಿ, ಮುದ್ದೇಬಿಹಾಳ, ದೇವರಹಿಪ್ಪರಗಿ, ಬಬಲೇಶ್ವರ, ವಿಜಯಪುರ, ಇಂಡಿ, ನಾಗಠಾಣ, ಯಾದಗಿರಿ, ಗುರುಮಿಠಕಲ್, ಸುರಪುರ, ಶಾಹಪುರ, ಬೀದರ್ ದಕ್ಷಿಣ, ಬೀದರ್, ಬಾಲ್ಕಿ, ಔರಾದ್, ರಾಯಚೂರು ಗ್ರಾಮೀಣ, ರಾಯಚೂರು, ಮಾನ್ವಿ, ದೇವದುರ್ಗ, ಲಿಂಗಸೂಗೂರು, ಸಿಂಧನೂರು, ಮಸ್ಕಿ ಕ್ಷೇತ್ರದವರು ಭಾಗಿಯಾಗಲಿದ್ದಾರೆ. ರಾಯಚೂರು ಮೂಲಕ ಬೇರೆ ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ ಪ್ರವೇಶ ಮಾಡಲಿದೆ.

ಇದನ್ನೂ ಓದಿ: ಜೋಡೊ ಯಾತ್ರೆ ಫ್ಲೆಕ್ಸ್​ ಹರಿದು ಹಾಕಿದರೆ, ನಾವೇನು ಹೆದರಲ್ಲ: ಡಿ ಕೆ ಶಿವಕುಮಾರ್​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.