ಬೆಂಗಳೂರು: ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ಕೆ.ಆರ್ ಪುರ ಕ್ಷೇತ್ರದ ಪ್ರತಿಯೊಂದು ವಾರ್ಡ್ನಲ್ಲಿಯೂ ದಿನಸಿ, ತರಕಾರಿ ಕಿಟ್ಗಳನ್ನು ವಿತರಿಸಲಾಗುತ್ತಿದೆ. ಅದರಂತೆಯೇ ಇಂದೂ ಸಹ ಹೊರಮಾವು ವಾರ್ಡ್ನ ನಗರೇಶ್ವರ ನಾಗೇನಹಳ್ಳಿಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಎರಡು ಸಾವಿರ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ.
ಅಕ್ಕಿ, ಬೇಳೆ, ಸಕ್ಕರೆ, ಸಾಂಬಾರು ಪದಾರ್ಥಗಳನ್ನೊಳಗೊಂಡ ದಿನಸಿ ಕಿಟ್ಗಳನ್ನು ಬಿಜೆಪಿ ಮುಖಂಡ ನಗರೇಶ್ವರ ನಾಗೇನಹಳ್ಳಿ ಲೋಕೇಶ್ ನೇತೃತ್ವದಲ್ಲಿ ಲಾಕ್ಡೌನ್ ಆದಾಗಿನಿಂದಲೂ ಗ್ರಾಮದ ಬಡವರಿಗೆ ತಲುಪಿಸುತ್ತಿದ್ದು, ಇಂದು ಸಚಿವ ಭೈರತಿ ಬಸವರಾಜ್ ಸ್ವತಃ ತಾವೇ ವಾರ್ಡ್ಗೆ ಭೇಟಿ ನೀಡಿ ವಿತರಣೆ ಮಾಡಿದ್ದಾರೆ.
ಕಿಟ್ ವಿತರಣೆ ನಂತರ ಮಾತನಾಡಿದ ಭೈರತಿ ಬಸವರಾಜ್, ಕೆ.ಆರ್ ಪುರ ಕ್ಷೇತ್ರದಲ್ಲಿ ಯಾರೂ ಹಸಿವಿನಿಂದ ಬಳಲಬಾರದೆಂಬುದು ನಮ್ಮ ಉದ್ದೇಶವಾಗಿದೆ. ಪ್ರತಿದಿನ ಬಡವರಿಗೆ ಆಹಾರ, ದಿನಸಿ, ತರಕಾರಿ ಕಿಟ್ಗಳನ್ನು ನೀಡುವ ಕೆಲಸ ನಮ್ಮ ಮುಖಂಡರು ಮಾಡುತ್ತಿದ್ದಾರೆ, ಇದು ಹೀಗೆಯೇ ಮುಂದುವರೆಯಲಿದೆ ಎಂದು ಭರವಸೆ ನೀಡಿದರು.
ನಮ್ಮಲ್ಲಿನ ಕೆಲ ಸಚಿವರು ಈಗಾಗಲೇ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ನಮಗೆ ಯಾವುದೇ ರೀತಿಯ ಲಕ್ಷಣಗಳು ಕಂಡು ಬಂದಿಲ್ಲ. ಅಗತ್ಯವಿದ್ದರೆ ನಾನೂ ಸಹ ಪರೀಕ್ಷೆ ಮಾಡಿಸಿಕೊಳ್ಳುವೆ ಎಂದು ಹೇಳಿದರು.