ETV Bharat / state

ಮಹಿಳಾ ಏಕದಿನ ವಿಶ್ವಕಪ್‌ ಬೆಟ್ಟಿಂಗ್ : ಸಿಸಿಬಿಯಿಂದ ಇಬ್ಬರು ಆರೋಪಿಗಳ ಬಂಧನ! - ಮಹಿಳಾ ಏಕದಿನ ವಿಶ್ವಕಪ್‌ ಬೆಟ್ಟಿಂಗ್

ವಿವಿಧ ವೆಬ್‌ಸೈಟ್‌ಗಳ ಮೂಲಕ ಬೆಟ್ಟಿಂಗ್ ರೆಶ್ಯೂ ನೋಡುತ್ತಿದ್ದ ಆರೋಪಿಗಳು ಆಸಕ್ತರಿಂದ ಹಣ ಪಣವಾಗಿರಿಸಿಕೊಂಡು ಬೆಟ್ಟಿಂಗ್​​ನಲ್ಲಿ ತೊಡಗುತ್ತಿದ್ದರು..

CCB
ಸಿಸಿಬಿ
author img

By

Published : Mar 12, 2022, 2:20 PM IST

ಬೆಂಗಳೂರು : ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ ಪಂದ್ಯಗಳ ಮೇಲೆ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ವಿಶೇಷ ವಿಚಾರಣಾ ದಳ ಬಂಧಿಸಿದೆ. ಮಂಜುನಾಥ್ ಹಾಗೂ ನಾಗರಾಜ್ ಬಂಧಿತ ಆರೋಪಿಗಳು.

ವಿವಿಧ ವೆಬ್‌ಸೈಟ್‌ಗಳ ಮೂಲಕ ಬೆಟ್ಟಿಂಗ್ ರೆಶ್ಯೂ ನೋಡುತ್ತಿದ್ದ ಆರೋಪಿಗಳು ಆಸಕ್ತರಿಂದ ಹಣ ಪಣವಾಗಿರಿಸಿಕೊಂಡು ಬೆಟ್ಟಿಂಗ್​​ನಲ್ಲಿ ತೊಡಗುತ್ತಿದ್ದರು.

ಬಸವೇಶ್ವರನಗರ ಠಾಣಾ ವ್ಯಾಪ್ತಿಯ ಸಾಣೆಗೊರವನಹಳ್ಳಿ ಬಳಿ ಆರೋಪಿಗಳು ನಿನ್ನೆ(ಶುಕ್ರವಾರ) ದ.ಆಫ್ರಿಕಾ-ಪಾಕಿಸ್ತಾನ ತಂಡಗಳ ನಡುವೆ ಪಂದ್ಯದ ಮೇಲೆ ಬೆಟ್ಟಿಂಗ್​​ನಲ್ಲಿ ತೊಡಗಿರುವ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 2.20 ಲಕ್ಷ ನಗದು ಹಾಗೂ ಮೊಬೈಲ್ ಫೋನ್‌ಗಳನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮತ್ತೆ ಹರಿಯಿತು ನೆತ್ತರು : ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಚಚ್ಚಿ ಕೊಂದ ಪತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.