ಬೆಂಗಳೂರು: ಟೆಲಿಕಾಂ ಲೇಔಟ್‌ನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿರುವ ಅಪಾರ್ಟ್‌ಮೆಂಟ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸದಿರಲು 9 ಲಕ್ಷ ರೂಗೆ ಬೇಡಿಕೆ ಇಟ್ಟು 5 ಲಕ್ಷ ರೂ ಲಂಚ ಪಡೆಯುತ್ತಿದ್ದ ವೇಳೆ ವರ್ಕಿಂಗ್ ಇಂಜಿನೀಯರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಲಂಚ ಸ್ವೀಕರಿಸುತ್ತಿದ್ದ ವೇಳೆ ನಾಗವಾರದ ಇ-9 ಬೆಸ್ಕಾಂ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ ಸುಂದರೇಶ್ ನಾಯ್ಕ್ನನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.
ಓದಿ: ಉಗ್ರರ ಅಟ್ಟಹಾಸ: ಎರಡು ಕಡೆ ಸ್ಫೋಟಕ ಪತ್ತೆ, ಮತ್ತೊಂದೆಡೆ CRPF ಪಡೆ ಮೇಲೆ ಗ್ರೆನೇಡ್ ದಾಳಿ
ಚೆಲ್ಲಿಕೆರೆ ನಿವಾಸಿಯೊಬ್ಬರ ಮಾವ ಟೆಲಿಕಾಂ ಲೇಔಟ್‌ನಲ್ಲಿ ನಿಯಮ ಉಲ್ಲಂಘಿಸಿ ಅಪಾರ್ಟ್‌ಮೆಂಟ್ ನಿರ್ಮಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿದ ಬೆಸ್ಕಾಂ ಅಧಿಕಾರಿಗಳು ಅಪಾರ್ಟ್‌ಮೆಂಟ್‌ಗೆ ನೀಡಿರುವ ವಿದ್ಯುತ್ ಸ್ಥಗಿತಗೊಳಿಸುವುದಾಗಿ ದೂರುದಾರರಿಗೆ ತಿಳಿಸಿದ್ದರು. ಈ ಬಗ್ಗೆ ದೂರುದಾರರು ನಾಗವಾರದ ಇ-9 ಬೆಸ್ಕಾಂ ಉಪ ವಿಭಾಗದ ಕಾರ್ಯಪಾಲಕ ಅಭಿಯಂತರ ಸಂದರೇಶ್ ನಾಯ್ಕ್ ರನ್ನು ಭೇಟಿಯಾಗಿದ್ದಾರೆ.
ಇಂಜನೀಯರ್ ಸಂದರೇಶ್ಗೆ ವಿದ್ಯುತ್ ಸ್ಥಗಿತಗೊಳಿಸದಿರಲು ಮನವಿ ಮಾಡಿದ್ದರು. ಆದರೆ, ಆರೋಪಿತ ಅಧಿಕಾರಿ 9 ಲಕ್ಷ ರೂ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಹಿನ್ನೆಲೆ ಫೆಬ್ರವರಿ 16ರಂದು ಎಇಇ ತಮ್ಮ ಕಚೇರಿಯಲ್ಲಿ ದೂರುದಾರರಿಂದ 5 ಲಕ್ಷ ರೂ ಲಂಚ ಪಡೆಯುವಾಗ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.